ತುಮಕೂರು: ರಸ್ತೆ ಕಾಮಗಾರಿಗೆ ಮನವಿ ಮಾಡಿದ್ದಕ್ಕೆ ಯುವಕನಿಗೆ ಕಪಾಳಮೋಕ್ಷ ಶಾಸಕ…! ವೀಕ್ಷಿಸಿ

posted in: ರಾಜ್ಯ | 0

ತುಮಕೂರು : ತನ್ನ ಸಮಸ್ಯೆ ಹೇಳಲು ಬಂದ ಯುವಕನೊಬ್ಬನ ಮೇಲೆ ಸಿಟ್ಟಿಗೆದ್ದ ಪಾವಗಡ ಶಾಸಕ ವೆಂಕಟರಮಣಪ್ಪ ಆ ಯುವಕನಿಗೆ ಕಪಾಳಮೋಕ್ಷ ಮಾಡಿದ ಘಟನೆ ವರದಿಯಾಗಿದೆ.

ಈ ಘಟನೆ ಪಾವಗಡ ತಾಲೂಕು ಕಚೇರಿ ಆವರಣದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಶಾಸಕ ವೆಂಕಟರಮಣಪ್ಪ ಅವರು ಕಚೇರಿ ಆವರಣದಿಂದ ತಮ್ಮ ಕಾರಿನ ಬಳಿ ಬರುತ್ತಿದ್ದಂತೆ ಅವರ ಸಮೀಪ ಹೋದ ಯುವಕನೊಬ್ಬ ತಮ್ಮೂರಿನ ರಸ್ತೆ ಅಭಿವೃದ್ಧಿ ಕುರಿತಂತೆ ಮನವಿ ಮಾಡಿದ್ದಾನೆ ಎನ್ನಲಾಗಿದೆ. ಹಾಗೂ ಅದನ್ನು ಆದಷ್ಟು ಶೀಘ್ರ ಆರಂಭಿಸಬೇಕು ಎಂದು ಒತ್ತಾಯ ಮಾಡಿದ್ದಾನೆ.

ಆಗ ಇದ್ದಕ್ಕಿದ್ದಂತೆ ಕೆರಳಿದ ಶಾಸಕ ವೆಂಕಟರಮಣಪ್ಪ ಆ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಸ್ಥಳೀಯರು ಯುವಕನನ್ನು ದೂರ ಕರೆದುಕೊಂಡು ಹೋಗಿದ್ದಾರೆ. ಅಲ್ಲದೆ ರಸ್ತೆ ಕಾಮಗಾರಿಗೆ ಈಗಾಗಲೇ ಟೆಂಡರ್​ ​ಆಗಿದೆ ಶೀಘ್ರದಲ್ಲೇ ಕಾಮಗಾರಿ ನಡೆಯಲಿದೆ ಎಂದು ಯುವಕನಿಗೆ ತಿಳಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ಮಳೆ ಅನಾಹುತ: ಸಚಿವರ ನೇತೃತ್ವದಲ್ಲಿ 8 ಕಾರ್ಯಪಡೆ ರಚನೆ
advertisement

ನಿಮ್ಮ ಕಾಮೆಂಟ್ ಬರೆಯಿರಿ