ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲಗೇರಿಯ ಜಾನಕಿ ವೀರಭದ್ರ ಹೆಗಡೆ(85) ಮಂಗನ ಕಾಯಿಲೆಯಿಂದ ಸಾವಿಗೀಡಾಗಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಶಿವಮೊಗ್ಗ ಮೆಗ್ಗಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ ಮಂಗನಕಾಯಿಲೆ(KFD)ಗೆ ಬುಧವಾರ ಬೆಳಿಗ್ಗೆ ನಿಧನಳಾಗಿದ್ದಾರೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನಕಾಯಿಲೆಗೆ ಮೊದಲ ಸಾವಾಗಿದೆ. ಒಂದು ವಾರದಲ್ಲಿ ಮಂಗನ ಕಾಯಿಲೆಯ ಆರು ಸೋಂಕಿತರು ಪತ್ತೆಯಾಗಿದ್ದಾರೆ.
ಏಪ್ರಿಲ್ 12ರಂದು ಜಾನಕಿ ವೀರಭದ್ರ ಹೆಗಡೆ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. 14ರಂದು ಮಂಗನಕಾಯಿಲೆ (KFD) ದೃಢಪಟ್ಟಿತ್ತು. ಅವರು ಸಿದ್ದಾಪುರ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಏಪ್ರಿಲ್ 16ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಇಂದು ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ವರ್ಷ ತಾಲೂಕಿನಲ್ಲಿ ಈ ವರೆಗೆ 7 ಪ್ರಕರಣ ದಾಖಲಾಗಿದ್ದು, ಉಳಿದ 6 ಜನರು ಮನೆಯಲ್ಲಿ ಆರೋಗ್ಯವಾಗಿದ್ದಾರೆ ಎಂದು ತಹಶೀಲ್ದಾರರು ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಮಂಗನಕಾಐಇಲೆ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಈ ವರ್ಷ ಸಿದ್ದಾಪುರ ಮತ್ತು ಹೊನ್ನಾವರದಲ್ಲಿ ಒಟ್ಟು ಎಂಟು ಪ್ರಕರಣಗಳು ಪತ್ತೆಯಾಗಿದೆ.ವಿಶೇಷವಾಗಿ ಸಿದ್ದಾಪುರ ತಾಲೂಕಿನ ಗಲಗೇರಿ, ಕೋಲಸಿರ್ಸಿ, ಬೀಳಗಿ, ಕಾನಸೂರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಂಡಿದೆ. ಅದೇ ರೀತಿ ಹೊನ್ನಾವರ ತಾಲೂಕಿನ ಗೇರುಸೊಪ್ಪದ ಸುತ್ತಮುತ್ತ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ