ದಾಖಲೆಯ ಮಳೆಯ ನಂತರ ಸಿಡ್ನಿ ಕಡಲತೀರಗಳಲ್ಲಿ ಚಿತ್ರ-ವಿಚಿತ್ರ ಬಣ್ಣದ ಸೀ ಡ್ರಾಗನ್‌ಗಳು ಪತ್ತೆ

ವಾರಗಳ ದಾಖಲೆ ಮಳೆಯ ನಂತರ ಆಸ್ಟ್ರೇಲಿಯಾದ ಕಡಲತೀರಗಳಲ್ಲಿ ಡಜನ್ನುಗಟ್ಟಲೆ ವಿಚಿತ್ರ ಮತ್ತು ವರ್ಣರಂಜಿತ ಜೀವಿಗಳು ಬಂದು ಬಿದ್ದಿದ್ದು, ತಜ್ಞರು ದಿಗ್ಭ್ರಮೆಗೊಂಡಿದ್ದಾರೆ. ಕೆಲವು ಬೀಚ್‌ಸೈಡ್ ಚಿತ್ರಗಳು ಗಾಢವಾದ ಬಣ್ಣಗಳನ್ನು ಹೊಂದಿರುವ  ಸಮುದ್ರ ಡ್ರ್ಯಾಗನ್‌ಗಳು ತೋರಿಸುತ್ತವೆ.

ತೇಲಿಬಂದ ಸಮುದ್ರ ಡ್ರ್ಯಾಗನ್‌ಗಳು ಸಾಮಾನ್ಯಕ್ಕಿಂತ ಕನಿಷ್ಠ 10 ಪಟ್ಟು ದೊಡ್ಡದಾಗಿದೆ, ಇದು ಕುತೂಹಲ ಮತ್ತು ಕಳವಳಗಳಿಗೆ ಕಾರಣವಾಗಿದೆ.
ಬೀಚ್‌ಗೋಯರ್ ಬೆಟ್ಟಿ ರಾಟ್‌ಕ್ಲಿಫ್ ಅವರು ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ಗೆ ಒಂದು ವಾರದೊಳಗೆ 7 ಏಳು ಸಮುದ್ರ ಡ್ರ್ಯಾಗನ್‌ಗಳನ್ನು ನೋಡಿರುವುದಾಗಿ ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿ ದಾಖಲೆ ಮಳೆ ಸಂಭವಿಸಿದ ನಂತರ ಈ ವೀಡಿ ಸೀ ಡ್ರಾಗನ್‌ಗಳು ಕಾಣಿಸಿಕೊಂಡು ವಿಚಿತ್ರ ಬಣ್ಣದಲ್ಲಿರುವ ಇವುಗಳನ್ನು ನೋಡಲು ಜನ ಹೆಚ್ಚಿನ ಸಂಖ್ಯೆಯಲ್ಲಿ ಸಿಡ್ನಿ ಕಡಲ ತೀರಕ್ಕೆ ಆಗಮಿಸುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಪೂರ್ವ ಮತ್ತು ದಕ್ಷಿಣ ಕರಾವಳಿಯಲ್ಲಿ ಮಾತ್ರ ಕಂಡು ಬರುವ ಇವು ಭಾರೀ ಮಳೆಯ ಬಳಿಕ ಕ್ರೊನುಲ್ಲಾ, ಮಲಬಾರ್ ಮತ್ತು ಮಧ್ಯ ಕರಾವಳಿಯಲ್ಲಿ ಇವು ಕಂಡು ಬಂದಿವೆ. ಮಾಲಿನ್ಯ, ಹವಾಮಾನ ವೈಪರೀತ್ಯ ಕಾರಣದಿಂದ ಬಣ್ಣ ಈ ರೀತಿ ಬದಲಾಗುತ್ತದೆ ಎಂದು ಸಿಡ್ನಿ ವಿಶ್ವವಿದ್ಯಾಲಯದ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯ ಸಮುದ್ರ ಪರಿಸರ

ಪ್ರಮುಖ ಸುದ್ದಿ :-   ವೀಡಿಯೊ...: ಭಾರೀ ಮಳೆ-ಬಿರುಗಾಳಿಯ ನಡುವೆ ಹಸಿರು ಬಣ್ಣಕ್ಕೆ ತಿರುಗಿದ ದುಬೈನ ಆಕಾಶ...!

ವಿಜ್ಞಾನದ ಪ್ರಾಧ್ಯಾಪಕ ಡಾ. ಡೇವಿಡ್ ಬೂತ್ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
“ನಾನು ಕಂಡುಕೊಂಡ ಮೊದಲನೆಯದು. ಇದು ಕಿತ್ತಳೆ, ಹಳದಿ ಮತ್ತು ನೇರಳೆ ಬಣ್ಣಗಳೊಂದಿಗೆ ತುಂಬಾ ರೋಮಾಂಚಕವಾಗಿತ್ತು” ಎಂದು ಅವರು ಹೇಳಿದ್ದಾರೆ. ಕಳೆದ ಎರಡು ವಾರಗಳಲ್ಲಿ ಸಿಡ್ನಿಯ ಕಡಲತೀರಗಳಲ್ಲಿ 20 ಕ್ಕೂ ಹೆಚ್ಚು ಸಮುದ್ರ ಡ್ರ್ಯಾಗನ್‌ಗಳು ಪತ್ತೆಯಾಗಿವೆ ಎಂದು ಸಿಡ್ನಿಯ ತಂತ್ರಜ್ಞಾನ ವಿಶ್ವವಿದ್ಯಾಲಯದ ಸಾಗರ ಪರಿಸರ ವಿಜ್ಞಾನದ ಪ್ರಾಧ್ಯಾಪಕ ಡಾ ಡೇವಿಡ್ ಬೂತ್ ಹೇಳಿದ್ದಾರೆ. “ಸ್ಪಷ್ಟವಾಗಿ ಇದು ಆಘಾತಕಾರಿ ಹವಾಮಾನದ ಕೆಲವು ಸಂಯೋಜನೆಯ ಪರಿಣಾಮವಾಗಿದೆ, ಮಾಲಿನ್ಯಕಾರಕಗಳನ್ನು ಸಾಗರಕ್ಕೆ ಬಿಡಲಾಗುತ್ತದೆ ಎಂದು ಬೂತ್ TSMH ಗೆ ಹೇಳಿದ್ದಾರೆ.
ಸಾಮಾನ್ಯವಾಗಿ ಈ ಸೀ ಡ್ರಾಗನ್‌ಗಳು ತಮ್ಮ ಆವಾಸಸ್ಥಾನದಿಂದ 50 ಮೀ. ದೂರದವವರೆಗೆ ಮಾತ್ರ ಸಂಚಾರ ಮಾಡುತ್ತವೆ. ಆದರೆ ಇದೀಗ ಕಡಲ ತೀರದವರೆಗೂ ಬಂದಿರುವುದು ಆಶ್ಚರ್ಯವುಂಟು ಮಾಡಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇವುಗಳ ಅಸಾಮಾನ್ಯ ಆಕಾರ, ವಿಚಿತ್ರ ಬಣ್ಣ ಮತ್ತು ರೋಮಾಂಚಕ ವೈಶಿಷ್ಟ್ಯಗಳಿಂದಾಗಿ ಹೆಚ್ಚಿನ ಜನ ಕುತೂಹಲದಿಂದ ನೋಡುವಂತೆ ಮಾಡುತ್ತಿವೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement