ಹುಲಿ-ಆನೆ ಮುಖಾಮುಖಿ….ಮುಂದೇನಾಯ್ತು..?: ಅಪರೂಪದ ದೃಶ್ಯ ವೀಡಿಯೊದಲ್ಲಿ ಸೆರೆ

ಒಂಟಿ ಸಲಗ ಮತ್ತು ಹುಲಿ ಮುಖಾಮುಖಿಯಾದ ದೃಶ್ಯ ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಕಾಡಿನಲ್ಲಿ ವನ್ಯಜೀವಿಗಳ ನಡುವೆ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಬೇಟೆಯ ಸಂದರ್ಭದಲ್ಲಿ ಕೆಲವೊಮ್ಮೆ ಬಲಶಾಲಿ ಪ್ರಾಣಿಗಳೂ ಕಾಳಗದಲ್ಲಿ ಮಣ್ಣು ಮುಕ್ಕುತ್ತವೆ. ಇಲ್ಲಿಯೂ ಕೂಡ ಆನೆಯ ಮೇಲೆ ದಾಳಿ ಮಾಡುವ ಉತ್ಸಾಹದಲ್ಲಿ ಬಂದಿದ್ದ ಹುಲಿಗೆ ಆನೆ ಗದರಿದ್ದಷ್ಟೇ ಅಲ್ಲ, ಹೆದರಿಸಿಯೂ ಕಳುಹಿಸಿದೆ. ದಾಳಿಗೆಂದು ಬಂದಿದ್ದ ಪ್ರಾಣಿಯೇ ದಾಳಿಗೊಳಗಾಗಿ ಅಲ್ಲಿಂದ ಕಾಲ್ಕಿತ್ತಿದೆ.

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುರೇಂದರ್ ಮೆಹ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾರೆ. ಸಾಮಾನ್ಯವಾಗಿ ಹುಲಿ, ಸಿಂಹಗಳನ್ನು ಕಂಡಾಗ ಕಾಡಿನ ಇತರ ಪ್ರಾಣಿಗಳು ಭಯಕ್ಕೆ ಒಳಗಾಗುತ್ತವೆ ಆದರೆ, ಕೆಲವೇ ಕೆಲವು ಪ್ರಾಣಿಗಳು ಇವುಗಳ ವಿರುದ್ಧ ತಿರುಗಿ ನಿಲ್ಲುತ್ತವೆ. ಛಾತಿ ತೋರಿಸುತ್ತವೆ. ಅವುಗಳಲ್ಲಿ ಆನೆ, ಘೇಂಡಾ ಮೃಗ, ಕಾಡುಕೋಣಗಳು ಉದಾಹರಣೆಗಳು.

ಹುಲ್ಲುಗಾಡಿನಂತಹ ಪ್ರದೇಶದಲ್ಲಿ ಹುಲಿಯೊಂದು ಬೇಟೆಗಾಗಿ ಕಾಯುತ್ತಿರುವ ದೃಶ್ಯದ ಮೂಲಕ ಈ ವೀಡಿಯೊ ಕ್ಲಿಪ್ ಆರಂಭವಾಗುತ್ತದೆ. ಸ್ವಲ್ಪ ಸಮಯದ ದೂರದಲ್ಲಿ ಆನೆಯೊಂದು ಕಾಣಿಸುತ್ತದೆ. ನಂತರ ಹುಲಿ ಆನೆಯ ಮೇಲೆ ಬೇಟೆಗೆ ಹೊಂಚು ಹಾಕುತ್ತಿರುವುದು ಕಂಡುಬರುತ್ತದೆ. ಆದರೆ ಇದೇವೇಳೆ ಆನೆಯೂ ಹುಲಿಯನ್ನು ನೋಡಿದೆ. ಆದರೆ, ಸಂಘರ್ಷಕ್ಕೆ ಮನಸ್ಸಿಲ್ಲದ ಆನೆ ತನ್ನ ಪಾಡಿಗೆ ತಾನು ಹೊರಡುತ್ತದೆ. ಆದರೆ ತನ್ನ ಬೇಟೆಯ ಉದ್ದೇಶ ಬಿಡದ ಹುಲಿ ಆನೆಯತ್ತ ಧಾವಿಸುತ್ತದೆ. ಆಗ ಆನೆ ಸ್ವಲ್ಪ ಹೊತ್ತು ಅಲ್ಲಿಯೇ ನಿಲ್ಲುತ್ತದೆ. ನಂತರ ಸಂಘರ್ಷ ಬೇಡವೆಂದು ದೂರ ಹೋಗಲು ಯತ್ನಿಸುತ್ತದೆ. ಆದರೆ, ಹುಲಿ ಬೆನ್ನಹಿಂದೆಯೇ ಹೋಗುತ್ತದೆ. ತನ್ನತ್ತ ಓಡಿ ಬರುತ್ತಿದ್ದಂತೆಯೇ ಕೋಪಗೊಂಡ ಆನೆ ತಕ್ಷಣವೇ ತಿರುಗಿ ನಿಂತು ಹೂಂಕರಿಸುತ್ತದೆ..ಆ ಕ್ಷಣದಲ್ಲಿ ಹೆದರಿದ ಹುಲಿ ಓಡುತ್ತದೆ. ಆನೆ ಅದನ್ನು ಬೆನ್ನಟ್ಟುತ್ತದೆ…
ಈ ವೀಡಿಯೋದಲ್ಲಿ ಆನೆ ಮತ್ತು ಹುಲಿ ನಿಸ್ಸಂದೇಹವಾಗಿ ಒಬ್ಬರಿಗೊಬ್ಬರು ಸಂಘರ್ಷ ನಡೆಸುವುದು ಕಾಣುತ್ತದೆ ಆದರೆ ಕಾಡಿನಲ್ಲಿ ಇವೆರಡರ ಮಧ್ಯೆ ಪರಸ್ಪರ ಘರ್ಷಣೆ ವಿರಳ ಎಂದು ಸುರೇಂದರ್ ಮೆಹ್ರಾ ಅವರು ಕ್ಯಾಪ್ಶನ್‌ನಲ್ಲಿ ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement