ನಾನು ಭಾರತೀಯ ಲಸಿಕೆ ತೆಗೆದುಕೊಂಡಿದ್ದೇನೆ, ಕೌಶಲ್ಯಪೂರ್ಣ ಭಾರತೀಯರು ಬ್ರಿಟನ್ನಿಗೆ ಸ್ವಾಗತ, ಭಾರತದಿಂದ ಪರಾರಿಯಾದವರಿಗೆ ಸ್ವಾಗತವಿಲ್ಲ : ಬೋರಿಸ್ ಜಾನ್ಸನ್

ನವದೆಹಲಿ: ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ನೈಪುಣ್ಯ ಭಾರತೀಯರನ್ನು ಶ್ಲಾಘಿಸಿದ್ದಾರೆ ಮತ್ತು ಅವರು ಬ್ರಿಟನ್ನಿಗೆ ಬರುವುದನ್ನು ತಡೆಯುವುದಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ, ಭಾರತದಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಪರಾರಿಯಾಗಿ ಬ್ರಿಟನ್‌ನ ಕಾನೂನು ವ್ಯವಸ್ಥೆಯನ್ನು ಬಳಸಿಕೊಳ್ಳಲು ಬಯಸುವವರನ್ನು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸ್ವಾಗತಿಸುವುದಿಲ್ಲ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಎರಡು ದಿನಗಳ ಭಾರತ ಭೇಟಿಯಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪರಾರಿಯಾಗಿರುವ ನೀರವ್ ಮೋದಿ ಮತ್ತು ವಿಜಯ್ ಮಲ್ಯ ಅವರ ಹಸ್ತಾಂತರದ ಕುರಿತು ಮಾತನಾಡಿದ ಜಾನ್ಸನ್‌, “ಕಾನೂನು ತಾಂತ್ರಿಕತೆಗಳು ತುಂಬಾ ಕಷ್ಟಕರವಾಗಿದೆ. ಅವರನ್ನು ಹಸ್ತಾಂತರಿಸುವಂತೆ ಬ್ರಿಟನ್‌ ಸರ್ಕಾರ ಆದೇಶಿಸಿದೆ. ಭಾರತದಲ್ಲಿ ಕಾನೂನನ್ನು ತಪ್ಪಿಸಿಕೊಳ್ಳಲು ನಮ್ಮ ಕಾನೂನು ವ್ಯವಸ್ಥೆಯನ್ನು ಬಳಸಲು ಬಯಸುವ ಜನರನ್ನು ನಾವು ಸ್ವಾಗತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬ್ರಿಟನ್‌ನಲ್ಲಿರುವ ಖಲಿಸ್ತಾನಿ ಅಂಶಗಳ ಬಗ್ಗೆ ಭಾರತದ ಕಳವಳದ ಬಗ್ಗೆ ಮಾತನಾಡಿದ ಬೋರಿಸ್ ಜಾನ್ಸನ್, ಬ್ರಿಟನ್‌ನಲ್ಲಿ ಉಗ್ರಗಾಮಿ ಗುಂಪುಗಳು ಕಾರ್ಯಾಚರಿಸುವುದನ್ನು ಮತ್ತು ಇತರ ದೇಶಗಳನ್ನು ಗುರಿಯಾಗಿಸುವುದನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಕೋವಿಡ್ ವಿರುದ್ಧ ಶತಕೋಟಿಗೂ ಹೆಚ್ಚು ಜನರಿಗೆ ಡೋಸ್‌ ಹಾಕಿದ ಲಸಿಕೆಗಳನ್ನು ಉತ್ಪಾದಿಸುವಲ್ಲಿ ಯುಕೆ-ಭಾರತದ ಸಹಯೋಗದ ಕುರಿತು ಮಾತನಾಡಿದ ಅವರು, ಭಾರತೀಯ ಕೋವಿಡ್‌ ಲಸಿಕೆ ತೆಗೆದುಕೊಂಡಿರುವುದಾಗಿ ಹೇಳಿದರು.
ನನ್ನ ಕೈಯಲ್ಲಿ ಇಂಡಿಯನ್ ಜಬ್ (ಕೋವಿಡ್ ಲಸಿಕೆ) ಸಿಕ್ಕಿದೆ ಮತ್ತು ಅದು ನನಗೆ ಒಳ್ಳೆಯದನ್ನು ಮಾಡಿದೆ. ಭಾರತಕ್ಕೆ ತುಂಬಾ ಧನ್ಯವಾದಗಳು, ”ಎಂದು ಅವರು ಹೇಳಿದರು.
ಭಾರತವು ಪ್ರಪಂಚದಾದ್ಯಂತದ ನಿರಂಕುಶ ಪ್ರಭುತ್ವಕ್ಕಿಂತ ವಿಭಿನ್ನವಾದ ದೇಶವಾಗಿದೆ. ಅದೊಂದು ದೊಡ್ಡ ಪ್ರಜಾಪ್ರಭುತ್ವ. 135 ಕೋಟಿ ಜನರು ಈ ಪ್ರಜಾಪ್ರಭುತ್ವದಲ್ಲಿ ವಾಸಿಸುತ್ತಿದ್ದಾರೆ ಎಂಬುದು ಬೆರಗುಗೊಳಿಸುವ ಸಂಗತಿಯಾಗಿದೆ. ಇದು ನಾವು ಸಭ್ರಮಪಡಬೇಕಾದ ವಿಷಯವಾಗಿದೆ, ಏಕೆಂದರೆ ಇದು ನಮಗೆ ನಿಕಟ ಸಹಕಾರ ಮತ್ತು ಪಾಲುದಾರಿಕೆಗೆ ಅವಕಾಶವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

ನಾವು ವಿಜ್ಞಾನದ ಮಹಾಶಕ್ತಿಗಳಾಗಿ ನಮ್ಮ ಪಾಲುದಾರಿಕೆಯನ್ನು ವಿಸ್ತರಿಸುತ್ತಿದ್ದೇವೆ ಮತ್ತು ಆಕ್ಸ್‌ಫರ್ಡ್ ಅಸ್ಟ್ರಾಜೆನೆಕಾ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ನಡುವಿನ ಸಹಯೋಗವನ್ನು ಗಟ್ಟಿಗೊಳಿಸುತ್ತಿದ್ದೇವೆ, ಇದು ಜಾಗತಿಕವಾಗಿ ಕೋವಿಡ್ ವಿರುದ್ಧ ನೂರು ಕೋಟಿಗೂ ಹೆಚ್ಚು ಜನರಿಗೆ ಲಸಿಕೆಯನ್ನು ನೀಡಿದೆ. ನನ್ನ ಕೈಯಲ್ಲಿ ಈಗಲೂ ಭಾರತೀಯ ಲಸಿಕೆ ಇದೆ, ಮತ್ತು ಅದು ನನಗೆ ಮಾಡಿದ ಒಳ್ಳೆಯದಕ್ಕೆ ಭಾರತಕ್ಕೆ ತುಂಬಾ ಧನ್ಯವಾದಗಳು ಎಂದು ಹೇಳಿದ್ದಾರೆ.
ಬ್ರಿಟನ್ ಮತ್ತು ಭಾರತವು “ಹೊಸ ಮತ್ತು ವಿಸ್ತೃತ” ರಕ್ಷಣಾ ಮತ್ತು ಭದ್ರತಾ ಪಾಲುದಾರಿಕೆಗೆ ಒಪ್ಪಿಕೊಂಡಿವೆ. “ಇಂಡೋ-ಪೆಸಿಫಿಕ್ ಮುಕ್ತವಾಗಿಡಲು ಉಭಯ ದೇಶಗಳು ಹಂಚಿಕೆಯ ಆಸಕ್ತಿಯನ್ನು ಹೊಂದಿವೆ” ಎಂದು ಅವರು ಹೇಳಿದರು, ಹೊಸ ಪಾಲುದಾರಿಕೆ “ದಶಕಗಳ ಬದ್ಧತೆ” ಎಂದು ಕರೆದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement