ಶಹಜಹಾನ್‌ಪುರ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೀತಿಗಳಿಂದ ಪ್ರೇರಿತರಾಗಿ ಅಕ್ರಮ ಮದ್ಯ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದ್ದ ಐವರು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶನಿವಾರ ಶರಣಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋಲೀಸರ ಪ್ರಕಾರ, ಐವರು ಪೋಸ್ಟರ್‌ಗಳನ್ನು ಬರೆದು ಅದನ್ನು ಹಿಡಿದುಕೊಂಡು ಬಂದು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ನಾನು ದೇಶೀಯ ಮದ್ಯವನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಕೆಲಸವನ್ನು ಮಾಡುತ್ತೇನೆ, ಆದರೆ ಯೋಗಿ ಆದಿತ್ಯನಾಥ್ ಅವರ ನೀತಿಗಳಿಂದ ಪ್ರಭಾವಿತನಾಗಿ ನಾನು ಈ ಕೆಲಸವನ್ನು ತ್ಯಜಿಸುತ್ತೇನೆ. ನಾನು ಎಂದಿಗೂ ಅಕ್ರಮ ಮದ್ಯವನ್ನು ಮಾಡುವುದಿಲ್ಲ, ಅದಕ್ಕಾಗಿಯೇ ನಾನು ಶರಣಾಗಲು ಬಂದಿದ್ದೇವೆ ಎಂದು ಬರೆದ ಪೋಸ್ಟರ್ ಹಿಡಿದುಕೊಂಡು ಬಂದುಶುಕ್ರವಾರ ಸಂಜೆ ಖುತಾರ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.
ಇವರಲ್ಲಿ ನಾಲ್ವರು ಹಿಸ್ಟರಿ ಶೀಟರ್ಸ್‌ಗಳು ಇದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್ ಆನಂದ್ ಹೇಳಿದ್ದಾರೆ. ಕಾಶ್ಮೀರ ಸಿಂಗ್, ರೋಷನ್ ಸಿಂಗ್, ದೇಶರಾಜ್ ಸಿಂಗ್, ಚಮನ್ ಸಿಂಗ್ ಮತ್ತು ಗುರ್ಮೀತ್ ಎಂದು ಗುರುತಿಸಲಾದ ಐವರು ಭವಿಷ್ಯದಲ್ಲಿ ಅಕ್ರಮ ಮದ್ಯದ ವ್ಯವಹಾರದಲ್ಲಿ ಭಾಗಿಯಾಗುವುದಿಲ್ಲ ಎಂದು ಪ್ರಮಾಣ ಮಾಡಿದ್ದಾರೆ. ನಂತರ ಅವರನ್ನು ಬಿಡಲಾಯಿತು ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ