ಬಿಹಾರ: ಮಹಿಳೆಯೊಬ್ಬರು ತಮ್ಮ ಮೊಬೈಲ್ನಲ್ಲಿ ಮಾತನಾಡುತ್ತ ಬರುತ್ತಿದ್ದಾಗ ಆಕಸ್ಮಿಕವಾಗಿ ಮ್ಯಾನ್ಹೋಲ್ಗೆ ಬಿದ್ದಿರುವ ಘಟನೆ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಿಹಾರದ ರಾಜಧಾನಿ ಪಟನಾದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಉತ್ಕರ್ಷ್ ಸಿಂಗ್ ಎಂಬುವವರು ಟ್ವಿಟರ್ನಲ್ಲಿ ಇದರ ವೀಡಿಯೊ ಹಂಚಿಕೊಂಡಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಮಹಿಳೆಯು ವಾಹನವೊಂದರ ಹಿಂದೆ ಫೋನ್ನಲ್ಲಿ ಮಾತನಾಡುತ್ತ ನಡೆದುಕೊಂಡು ಹೋಗುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಫೋನಿನಲ್ಲಿ ಮಾತನಾಡುತ್ತಿದ್ದ ಮಹಿಳೆ ರಸ್ತೆ ಮಧ್ಯದಲ್ಲಿಯೇ ಇದ್ದ ಮ್ಯಾನ್ಹೋಲ್ಗೆ ಬೀಳುತ್ತಿರುವುದುಕಾಣುತ್ತದೆ, ರಸ್ತೆ ಅಕ್ಕಪಕ್ಕದಲ್ಲಿದ್ದವರು ತಕ್ಷಣವೇ ಧಾವಿಸಿ ಮಹಿಳೆಯನ್ನು ಮ್ಯಾನ್ಹೋಲ್ನಿಂದ ಹೊರತೆಗೆದಿದ್ದಾರೆ. ಮಹಿಳೆಗೆ ಗಾಯಗಳಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ
ನಿಮ್ಮ ಕಾಮೆಂಟ್ ಬರೆಯಿರಿ