ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ-ಇ ಮೇಲ್ ಬಂದಿದ್ದು ಪಾಕಿಸ್ತಾನದಿಂದ..?!

ಬೆಂಗಳೂರು: ಬೆಂಗಳೂರು ನಗರದ ಪ್ರತಿ‍ಷ್ಠಿತ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿರುವ ಇಮೇಲ್ ಪಾಕಿಸ್ತಾನದಿಂದ ಬಂದಿದೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶಾಲೆಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು ಏ. 8 ರಂದು ಬೆಂಗಳೂರು ನಗರದ ಹಲವಾರು ಶಾಲೆಗಳಿಗೆ ಇಮೇಲ್ ಸಂದೇಶ ಬಂದಿತ್ತು. ಪ್ರಕರಣದ ಬೆನ್ನತ್ತಿದ್ದ ಬೆಂಗಳೂರು ಪೊಲೀಸರು ಇಮೇಲ್ ಬಂದಿರುವ ಮೂಲವನ್ನು ಜಾಲಾಡತೊಡಗಿದಾಗ ಇಮೇಲ್ ಪಾಕಿಸ್ತಾನದಿಂದ ಕಳುಹಿಸಲಾಗಿದೆ ಎಂಬುದು ಗೊತ್ತಾಗಿದೆ.

ಬೆದರಿಕೆ ಬಂದ ದಿನದಂದು ಪರಿಶೀಲನೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಕರೆ ಎಂದು ಗೊತ್ತಾಗಿತ್ತು. ಆದರೆ ಪೊಲೀಸರು ಈ ಪ್ರಕರಣವನ್ನು ನಿರ್ಲಕ್ಷ್ಯ ಮಾಡದೇ ತನಿಖೆ ಮಾಡಿದಾಗ ಪಾಕಿಸ್ತಾನದಿಂದ ಬಂದಿರುವುದೆಂದು ಗೊತ್ತಾಗಿದೆ. ಸರ್ವರ್ ಜಾಡು ಹಿಡಿದು ತನಿಖೆ ಮಾಡಲಾಗಿತ್ತು. ಗೂಗಲ್ ಸಂಸ್ಥೆಯಿಂದ ಈ ಕುರಿತು ತಾಂತ್ರಿಕ ದಾಖಲೆಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಆದರೆ ವಿದೇಶೀ ಸರ್ವರ್‌ಗಳನ್ನು ಹ್ಯಾಕ್ ಮಾಡಿ ಬೆದರಿಕೆ ಇಮೇಲ್ ರವಾನಿಸಿರುವ ಅನುಮಾನವೂ ಇದೆ ಎನ್ನಲಾಗಿದೆ. ಹೀಗಾಗಿ ಐಪಿ ಅಡ್ರೆಸ್ ಮುಖಾಂತರ ತನಿಖೆ ಆರಂಭಿಸಲಾಗಿದ್ದು, ಪಾಕಿಸ್ತಾನದಿಂದಲೇ ಬಂದಿರುವುದಕ್ಕೆ ಮತ್ತಷ್ಟು ಪುರಾವೆ ಸಿಕ್ಕಿದರೆ ಎನ್‌ಐಎ ತನಿಖೆಗೆ ಪ್ರಕರಣ ಹಸ್ತಾಂತರವಾಗಲಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement