ಪಿಎಪಿಎಸ್​ಐ ಪರೀಕ್ಷಾ ಅಕ್ರಮ: ಮತ್ತೋರ್ವ ಆರೋಪಿ ಬಂಧಿಸಿದ ಸಿಐಡಿ

posted in: ರಾಜ್ಯ | 0

ಕಲಬುರಗಿ: ಪಿಎಸ್​ಐ ಪರೀಕ್ಷಾ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಮತ್ತೊಬ್ಬ ಅಭ್ಯರ್ಥಿಯನ್ನು ಬಂಧಿಸಿದ್ದಾರೆ.
ಎನ್.ವಿ.ಸುನೀಲ್ ಕುಮಾರ್ ಬಂಧಿತ ಆರೋಪಿ. ಇದರೀಮದ ಪಿಎಸ್​ಐ ಪರೀಕ್ಷೆ ಅಕ್ರಮದಲ್ಲಿ ಬಂಧಿತರ ಸಂಖ್ಯೆ 16ಕ್ಕೆ ಏರಿದೆ. ಕಲಬುರಗಿ ಮೂಲದ ಈತ ಜ್ಞಾನ ಜ್ಯೋತಿ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಮೂಲಕ ಪರೀಕ್ಷೆ ಬರೆದಿದ್ದಾನೆ ಎಂಬ ಆರೋಪ ಎದುರಿಸುತ್ತಿದ್ದಾನೆ.

ಒ.ಎಂ.ಆರ್ ಶೀಟ್ ಪರಿಶೀಲನೆಗೆ ಬೆಂಗಳೂರಿಗೆ ಸಿಐಡಿ ಕಚೇರಿಗೆ ಹೋದಾಗ ಎನ್.ವಿ.ಸುನೀಲ್ ಕುಮಾರನನ್ನು ಬಂಧಿಸಲಾಗಿದ್ದು, ಬೆಂಗಳೂರಿನಿಂದ ಕಲಬುರಗಿಗೆ ಕರೆತಂದಿರುವ ತನಿಖಾಧಿಕಾರಿಗಳ ತಂಡ ವಿಚಾರಣೆ ನಡೆಸುತ್ತಿದೆ. ಮೂರು ದಿನಗಳ ಹಿಂದೆ ಆರ್‌.ಡಿ.ಪಾಟೀಲ್ ಹಾಗೂ ಸ್ನೇಹಿತ ಮಂಜುನಾಥ ಅಲಿಯಾಸ್‌ ಮಲ್ಲುಗೌಡನನ್ನು ಬಂಧಿಸಿರುವ ಸಿಐಡಿ, ಇಬ್ಬರನ್ನು 13 ದಿನಗಳ ವರೆಗೆ ಕಸ್ಟಡಿಗೆ ಪಡೆದಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

ಓದಿರಿ :-   ತನಿಖೆ ನಂತರ ಪಿಎಸ್‌ಐ ಹುದ್ದೆ ಅಕ್ರಮ ಪ್ರಕರಣದ ವಿಚಾರಣೆಗೆ ವಿಶೇಷ ಕೋರ್ಟ್‌ ರಚನೆ: ಗೃಹ ಸಚಿವ ಆರಗ ಜ್ಞಾನೇಂದ್ರ
advertisement

ನಿಮ್ಮ ಕಾಮೆಂಟ್ ಬರೆಯಿರಿ