ಅಪರೂಪದ ಹಳದಿ ಆಮೆ ರಕ್ಷಣೆ: ಅರಣ್ಯ ಇಲಾಖೆಗೆ ಹಸ್ತಾಂತರ…ವೀಕ್ಷಿಸಿ

ಒಡಿಶಾದ ಬಾಲಸೋರ್ ಜಿಲ್ಲೆಯ ಸಿಮುಲಿಯಾ ಗ್ರಾಮದಲ್ಲಿ ಮಂಗಳವಾರ ಅಪರೂಪದ ಹಳದಿ ಆಮೆಯನ್ನು ಕೊಳದಿಂದ ರಕ್ಷಿಸಲಾಗಿದೆ. ಗ್ರಾಮಸ್ಥರು ಅದನ್ನು ರಕ್ಷಿಸಿ ನೀರು ತುಂಬಿದ ತೊಟ್ಟಿಗೆ ಹಾಕಿದರು.
ಆಮೆಯನ್ನು ಗ್ರಾಮದ ಯುವಕರು ಗುರುತಿಸಿದರು, ಅವರು ಇತರ ಗ್ರಾಮಸ್ಥರನ್ನು ಒಟ್ಟುಗೂಡಿಸಿದರು ಮತ್ತು ನಂತರ ಅವರು ಅದನ್ನು ರಕ್ಷಿಸಲಾಯಿತು.

ಹಳದಿ ಆಮೆ ಪತ್ತೆಯಾದ ನಂತರ ಅದನ್ನು ನೋಡಲು ನೂರಾರು ಜನರು ಸೇರಿದರು.. ಒಡಿಶಾದ ಬಾಲಾಸೋರ್​​ನಲ್ಲಿರುವ ಸೋರೋ ಎಂಬ ಪ್ರದೇಶದಲ್ಲಿ ಕೊಳವೊಂದರಲ್ಲಿ ಈ ಆಮೆ ಕಾಣಿಸಿಕೊಂಡಿತ್ತು. ಆದರೆ ಅಲ್ಲಿದ್ದರೆ ಅದಕ್ಕೆ ಅಪಾಯವಾಗಹಬಹುದು ಎಂದು, ಸ್ಥಳೀಯರು ಹಿಡಿದು ಟಬ್​​ನಲ್ಲಿ ಇಟ್ಟುಕೊಂಡು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಅರಣ್ಯ ಇಲಾಖೆ ಅಧಿಕಾರಿಗಳು ಬಂದ ನಂತರ ಆಮೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಯಿತು.

ಆಮೆಯ ಚಿಪ್ಪು ಮತ್ತು ದೇಹವು ಹಳದಿ ಬಣ್ಣವನ್ನು ಹೊಂದಿದೆ. ಇದು ಅತ್ಯಂತ ಅಪರೂಪದ ಆಮೆ ಜಾತಿ ಎಂದು ನಂಬಲಾಗಿದೆ. ಗಮನಾರ್ಹವಾಗಿ, ಜುಲೈ, 2020 ರಲ್ಲಿ ಬಾಲಸೋರ್‌ನ ಸುಜಾನ್‌ಪುರ ಗ್ರಾಮದಿಂದ ಇದೇ ರೀತಿಯ ಹಳದಿ ಬಣ್ಣದ ಆಮೆಯನ್ನು ರಕ್ಷಿಸಲಾಗಿತ್ತು. ಬಸುದೇವ್​ ಮಹಾಪಾತ್ರಾ ಎಂಬುವರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಳದಿ ಆಮೆ ನೋಡಿ ಅಚ್ಚರಿಗೊಂಡು ಅದನ್ನು ಮನೆಗೆ ತಂದಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗೆ ಹಸ್ತಾಂತರಿಸಿದ್ದರು. ನಂತರ ಪಶ್ಚಿಮ ಬಂಗಾಳದ ಹಳ್ಳಿಯೊಂದರಲ್ಲಿ ಪತ್ತೆಯಾಗಿದ್ದಾಗಿ ಐಎಫ್​ಎಸ್ ಅಧಿಕಾರಿ ದೇಬಾಶಿಶ್​ ಶರ್ಮಾ ಫೋಟೋ ಹಂಚಿಕೊಂಡಿದ್ದರು. ಹಳದಿ ಆಮೆಗಳು ಹೆಚ್ಚಾಗಿ ದಕ್ಷಿಣ ಏಷ್ಯಾ ದೇಶಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ ಮತ್ತು ಮಯನ್ಮಾರಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇದು ಆಮೆಗಳಲ್ಲಿ ಟೈರೋಸಿನ್ ಎಂಬ ವರ್ಣದ್ರವ್ಯದ ಕೊರತೆಯಿಂದ ಉಂಟಾಗುವ ಬಣ್ಣ ಎಂದು ಪರಿಸರ ತಜ್ಞರು ಹೇಳುತ್ತಾರೆ.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement