ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದಾದ್ರೆ ಕನ್ನಡ ಸಿನೆಮಾ ಹಿಂದಿಗೆ ಯಾಕೆ ಡಬ್ ಮಾಡ್ತೀರಿ ಎಂದ ಅಜಯ್​ ದೇವಗನ್; ನಿಮ್ಮ ಟ್ವೀಟ್‌ಗೆ ನಾನು ಕನ್ನಡದಲ್ಲಿ ಉತ್ತರಿಸಿದ್ರೆ ಎಂದು ತಿರುಗೇಟು ಕೊಟ್ಟ ಸುದೀಪ್

ಬೆಂಗಳೂರು: ಕನ್ನಡ ನಟ, ಕಿಚ್ಚ ಸುದೀಪ್ ಇತ್ತೀಚೆಗೆ ನೀಡಿದ್ದ ಒಂದು ಸಂದರ್ಶನ ಈಗ ಇಬ್ಬರು ನಟರ ನಡುವೆ ಚರ್ಚೆಗೆ ಕಾರಣವಾಗಿದೆ. ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್, ‘’ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ’’ ಎಂದು ಹೇಳಿದ್ದರು. ಈ ಬಗ್ಗೆ ಅಜಯ ದೇವಗನ್ ಟ್ವೀಟ್ ಮಾಡಿ, ‘’ನನ್ನ ಸಹೋದರ ಕಿಚ್ಚ ಸುದೀಪ್ ಅವರೇ, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಾದರೆ, ನಿಮ್ಮ ಮಾತೃ ಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಯಾಕೆ ಬಿಡುಗಡೆ ಮಾಡುತ್ತೀರಿ?’’ ಎಂದು ಪ್ರಶ್ನಿಸಿದ್ದರು. ಈಗ ಅಜಯ್ ದೇವಗನ್ ಅವರ ಟ್ವೀಟ್‌ಗೆ ಕಿಚ್ಚ ಸುದೀಪ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಇದಕ್ಕೆ ಸುದೀಪ್ ಕೂಡ ಪ್ರತಿಕ್ರಿಯೆ ನೀಡಿದ್ದು, ಸ್ಪಷ್ಟನೆಯನ್ನು ನೀಡಿದ್ದಾರೆ. ನಾನು ಆ ಸಾಲನ್ನು ಬೇರೆಯದ್ದೇ ಅರ್ಥದಲ್ಲಿ ಹೇಳಿದ್ದೆ. ಆದರೆ, ಅದು ನಿಮಗೆ ಬೇರೆಯದ್ದೇ ರೀತಿಯಲ್ಲಿ ತಲುಪಿದೆ ಎಂದು ಭಾವಿಸುತ್ತೇನೆ. ನಾನು ನಿಮ್ಮನ್ನು ಖುದ್ದಾಗಿ ಭೇಟಿ ಮಾಡಿದಾಗ ಆ ಹೇಳಿಕೆಯ ಬಗ್ಗೆ ವಿವರಿಸುವೆ. ನೋಯಿಸುವ ಉದ್ದೇಶದಿಂದಾಗಲಿ, ಪ್ರಚೋದಿಸಲು ಮತ್ತು ಚರ್ಚೆ ಉಂಟುಮಾಡಲು ನಾನು ಆ ಹೇಳಿಕೆಯನ್ನು ನೀಡಿಲ್ಲ. ನಾನು ಹಾಗೆ ಯಾಕೆ ಮಾಡಲಿ ಎಂದು ಹೇಳಿದ್ದಾರೆ.

ನೀವು ಹಿಂದಿಯಲ್ಲಿ ಕಳುಹಿಸಿದ ಸಂದೇಶ ನನಗೆ ಅರ್ಥವಾಗಿದೆ. ನಾನು ಹಿಂದಿಯನ್ನು ಪ್ರೀತಿಸಿದ, ಗೌರವಿಸಿದ ಹಾಗೂ ಕಲಿತ ಕಾರಣಕ್ಕೆ ಸಾಧ್ಯವಾಗಿದೆ. … ಆದರೆ ನನ್ನ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ ಟೈಪ್ ಮಾಡಿದ್ದರೆ ಏನಾಗಬಹುದು ಎಂದು ಯೋಚಿಸುತ್ತಿದ್ದೆ…ನಾವೂ ಭಾರತಕ್ಕೆ ಸೇರಿದವರೇ ಅಲ್ವೇ?’ ಎಂದು ಸುದೀಪ ಹೇಳಿದ್ದಾರೆ.
ನಾನು ನಮ್ಮ ದೇಶದ ಪ್ರತಿ ಭಾಷೆಯನ್ನೂ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ಈ ವಿಷಯ ಇಲ್ಲಿಗೇ ನಿಲ್ಲುತ್ತದೆ ಎಂದು ಅಂದುಕೊಳ್ಳುತ್ತೇನೆ. ಮೊದಲೇ ಹೇಳಿದಂತೆ ನಾನು ಹೇಳಿದ್ದ ವಿಷಯವೇ ಬೇರೆ. ತುಂಬಾ ಪ್ರೀತಿ ಮತ್ತು ಹಾರೈಕೆಗಳೊಂದಿಗೆ.. ನಿಮ್ಮನ್ನು ಸದ್ಯದಲ್ಲೇ ಕಾಣುವ ಭರವಸೆಯೊಂದಿಗೆ..’ ಎನ್ನುತ್ತ ಸುದೀಪ್ ಟ್ವೀಟ್‌ ಮುಗಿಸಿದ್ದಾರೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಅದಕ್ಕೆ ಕೊನೆಗೆ ಇಂಗ್ಲಿಷ್​ನಲ್ಲಿ ಪ್ರತಿಕ್ರಿಯಿಸಿರುವ ಅಜಯ್ ದೇವಗನ್​, ‘ನೀವು ಸ್ನೇಹಿತ, ಅಪಾರ್ಥವನ್ನು ಮನದಟ್ಟು ಮಾಡಿಸಿದ್ದಕ್ಕೆ ಧನ್ಯವಾದಗಳು. ಇಡೀ ಸಿನಿಮಾ ಇಂಡಸ್ಟ್ರಿಯೇ ಒಂದು ಎಂದು ಭಾವಿಸಿದವನು ನಾನು. ನಾವು ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ ಹಾಗೂ ಎಲ್ಲರೂ ನಮ್ಮ ಭಾಷೆಯನ್ನು ಗೌರವಿಸಲಿ ಎಂದು ಬಯಸುತ್ತೇವೆ. ಬಹುಶಃ ಅನುವಾದದಲ್ಲಿ ಏನೋ ಮಿಸ್ ಆದಂತಿದೆ’ ಎಂದು ಹೇಳಿದ್ದಾರೆ.
ಅನುವಾದ ಹಾಗೂ ವ್ಯಾಖ್ಯಾನಗಳು ದೃಷ್ಟಿಕೋನದಲ್ಲಿ ಇರುತ್ತವೆ ಸರ್.. ಅದೇ ಕಾರಣಕ್ಕೆ ವಿಷಯದ ಕುರಿತು ಸರಿಯಾಗಿ ತಿಳಿಯದಿರುವಾಗ ಪ್ರತಿಕ್ರಿಯಿಸದಿರುವುದೂ ಮುಖ್ಯವಾಗುತ್ತದೆ. ನಾನು ನಿಮ್ಮನ್ನು ದೂರುತ್ತಿಲ್ಲ. ಬಹುಶಃ ಒಂದು ರಚನಾತ್ಮಕ ಕಾರಣಕ್ಕೆ ನಿಮ್ಮಿಂದ ಟ್ವೀಟ್ ಬಂದಿದ್ದರೆ ತುಂಬಾ ಖುಷಿಯಾಗಿರುತ್ತಿತ್ತು’ ಎಂದು ಹೇಳುವ ಮೂಲಕ ಸುದೀಪ್ ಇದಕ್ಕೆ ತೆರೆ ಎಳೆದಿದ್ದಾರೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement