ಧಾರವಾಡದಲ್ಲಿ ರಾಷ್ಟ್ರೀಯ ಜೈವಿಕ ಸುರಕ್ಷತಾ ಹಂತ-3ರ ಪ್ರಯೋಗಾಲಯ ಸ್ಥಾಪನೆ : ಕೇಂದ್ರ ಸಚಿವ ಜೋಶಿ

ನವದೆಹಲಿ: ಕೋವಿಡ್ – 19 ಹಾಗೂ ಅದೇ ತರಹದ ಸಾಂಕ್ರಾಮಿಕ ರೋಗಗಳ ಹರಡುವಿಕೆ ಹಾಗೂ ಅವುಗಳ ಗಂಭೀರ ಪರಿಣಾಮಗಳನ್ನು ತಡೆಗಟ್ಟಲು ಹಾಗೂ ನಿಯಂತ್ರಿಸಲು ಸಹಾಯವಾಗಬಲ್ಲ ಆಧುನಿಕ ಲಸಿಕೆಗಳನ್ನು ತಯಾರಿಸಲು ಅಗತ್ಯವಿರುವ ಜೈವಿಕ ಸುರಕ್ಷತಾ ಹಂತ-3ರ ಪ್ರಯೋಗಾಲಯ (Biosafety Level-3 (BSL-3)) ಸ್ಥಾಪನೆಯ ಕೇಂದ್ರವಾಗಿ ಧಾರವಾಡ ಆಯ್ಕೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಪ್ರಧಾನಮಂತ್ರಿ ಆಯುಷ್ಮಾನ್ ಭಾರತ ಹೆಲ್ತ್ ಇನ್ಫಾಸ್ಟ್ರಕ್ಚರ್ ಮಿಶನ್ ಯೋಜನೆಯಡಿಯಲ್ಲಿ ಇಂತಹ ಜೈವಿಕ ಸುರಕ್ಷತಾ ಪ್ರಯೋಗಾಲಯಗಳನ್ನು ದೇಶದ ಆಯ್ದ ೧೦ ರಾಜ್ಯಗಳಲ್ಲಿ ಸ್ಥಾಪಿಸಲಾಗುತ್ತಿದ್ದು ಇದರಲ್ಲಿ ಕರ್ನಾಟಕ ರಾಜ್ಯವೂ ಒಂದಾಗಿದೆ. ಕರ್ನಾಟಕದಲ್ಲಿ ಧಾರವಾಡ ಜಿಲ್ಲೆ ಆಯ್ಕೆಯಾಗಿದ್ದು, ಧಾರವಾಡಕ್ಕೆ ಈ ಅಂತಾರಾಷ್ಟ್ರೀಯ ಮಟ್ಟದ ಪ್ರಯೋಗಾಲಯ ದೊರಕಿರುವುದು ಸಂತೋಷದ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಎನ್.ಸಿ.ಡಿ.ಎಲ್ ಬಿ.ಎಸ್.ಎಲ್-3 ರಾಷ್ಟ್ರೀಯ ಪ್ರಯೋಗಾಲಯದ ಸ್ಥಾಪನೆಯು ದೇಶದ 10 ಕೇಂದ್ರಗಳಲ್ಲಿ ಧಾರವಾಡ ಆಯ್ಕೆಯಾಗಿರುವ ವಿಷಯವನ್ನು ಈಗಾಗಲೇ ಕೇಂದ್ರ ಸರ್ಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರಕ್ಕೆ ತಿಳಿಸಿದ್ದು ಅಗತ್ಯವಿರುವ ಆರ್ಥಿಕ ಅನುದಾನ ಕೂಡಾ ಮಂಜೂರಾಗಿದೆ. ಈ ಪ್ರಯೋಗಾಲಯದ ಸ್ಥಾಪನೆಗೆ ಧಾರವಾಡದಲ್ಲಿ ಅಗತ್ಯವಿರುವ ಸೂಕ್ತ ಸ್ಥಳ ಇತ್ಯಾದಿಗಳ ಬಗ್ಗೆ ಮಾಹಿತಿ ಹೊಂದಿದ ತಜ್ಞ ತಂಡದ ಬಗ್ಗೆ ಮಾಹಿತಿ ನೀಡಲು ಹಾಗೂ ಈ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಅಮರ್ಪಕವಾಗಿ ಸಂಹವನ ನಡೆಸಲು ನೋಡಲ್ ಅಧಿಕಾರಿಯೊಬ್ಬರನ್ನು ತಕ್ಷಣವೇ ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

ರಾಜ್ಯ ಸರಕಾರ ಕೂಡಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಅವರು ಒತ್ತಾಯಿಸಿದ್ದಾರೆ.
ಧಾರವಾಡಕ್ಕೆ ಜೈವಿಕ ಸುರಕ್ಷತಾ ಹಂತ-೩ ರ ಪ್ರಯೋಗಾಲಯ (Biosafety Level-3 (BSL-3)) ಸ್ಥಾಪನೆಯ ಕೇಂದ್ರ ಮಂಜೂರು ಮಾಡಿರುವುದಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ ಅವರಿಗೆ ಸಚಿವ ಜೋಶಿ ಧನ್ಯವಾದ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement