ಭಾರತದಲ್ಲಿ ಹೊಸದಾಗಿ 2,927 ಕೊರೊನಾ ಸೋಂಕು ದಾಖಲು, 32 ಮಂದಿ ಸಾವು

ನವದೆಹಲಿ: ಭಾರತದಲ್ಲಿ ಬುಧವಾರ ಹೊಸದಾಗಿ 2,927 ಕೋವಿಡ್‌ ಪ್ರಕರಣಗಳು ದಾಖಲಾಗಿವೆ ಹಾಗೂ 32 ಮಂದಿ ಮೃತ ಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಬುಧವಾರ ಮೃತಪಟ್ಟವರಲ್ಲಿ ಕೇರಳ-26, ಮಹಾರಾಷ್ಟ್ರ- 4 ಮಂದಿ ಸೇರಿದ್ದಾರೆ ಎಂದು ಅದು ಹೇಳಿದೆ. ದೆಹಲಿ ಹಾಗೂ ಮಿಜೋರಾಂನಲ್ಲಿ ತಲಾ 1 ಸಾವು ಸಂಭವಿಸಿದೆ. ನಿನ್ನೆಗೆ ಹೋಲಿಸಿದರೆ ಪ್ರಕರಣದಲ್ಲಿ ಹೆಚ್ಚಳ ಕಂಡುಬಂದಿದೆ. ದೇಶದಲ್ಲಿ ಈಗ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ 16,279 ಇದೆ.

ಕೋವಿಡ್‌ ಕಾರಣದಿಂದ ದೇಶದಲ್ಲಿ ಒಟ್ಟು 5,23,654 ಜನ ಮೃತಪಟ್ಟಿದ್ದಾರೆ. ಕೋವಿಡ್‌ ಕಾರಣದಿಂದ ಅತಿಹೆಚ್ಚು ಸಾವು ಸಂಭವಿಸಿದ ರಾಜ್ಯಗಳೆಂದರೆ
ಮಹಾರಾಷ್ಟ್ರ – 1,47,838, ಕೇರಳ – 68,916, ಕರ್ನಾಟಕ – 40,057, ತಮಿಳುನಾಡು – 38,025, ದೆಹಲಿ – 26,169, ಉತ್ತರ ಪ್ರದೇಶ – 23,505
ಹಾಗೂ ಪಶ್ಚಿಮ ಬಂಗಾಳ – 21,201ಜನ ಕೋವಿಡ್‌ ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement