ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೇ 4 ರಿಂದ ಮಾರುಕಟ್ಟೆ ಪ್ರವೇಶಿಸಲಿದೆ. ಈ ಮೂಲಕ ಗ್ರಾಹಕರಿಗೆ ಎಲ್‌ಐಸಿ ಷೇರು ಖರೀದಿಗೆ ಕೇಂದ್ರವು ಅಧಿಕೃತವಾಗಿ ಅವಕಾಶ ನೀಡಿದಂತಾಗಿದೆ.
ಪ್ರತಿ ಷೇರುಗಳ ಬೆಲೆ 902 ರೂ.ನಿಂದ 949 ರೂ.ಗಳ ವರೆಗೆ ನಿಗದಿ ಮಾಡಲಾಗಿದ್ದು, ಐಪಿಒ ಬಿಡುಗಡೆಯಾದ ಒಂದು ವಾರದ ಬಳಿಕ ಅಂದರೆ ಮೇ 17ರಂದು ಷೇರು ಮಾರುಕಟ್ಟೆಯಲ್ಲಿ ಇದು ಲಿಸ್ಟ್ ಆಗಲಿದೆ. ಪಾಲಿಸಿದಾರರ ವರ್ಗಕ್ಕೆ ಪ್ರತಿ ಷೇರಿಗೆ 60 ರೂ. ಹಾಗೂ ಅರ್ಹ ಉದ್ಯೋಗಿಗಳ ವರ್ಗಕ್ಕೆ 45 ರೂ. ರಿಯಾಯಿತಿ ಸಹ ನೀಡಲಾಗುತ್ತಿದೆ.
ಎಲ್‌ಐಸಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಪಟ್ನಾಯಕ್ ಮಾತನಾಡಿ, ವಿಮಾ ಕಂಪನಿಯ ಒಟ್ಟು ಷೇರುಗಳ ಪೈಕಿ ಶೇ.3.5 ಮಾರಾಟ ಮಾಡಿ 21 ಸಾವಿರ ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದೆ. ಷೇರು ಚಂದದಾರರಿಗೆ ಮೇ 4ರಂದು ಎಲ್‌ಐಸಿ ಐಪಿಒ ತೆರೆಯಲಿದ್ದು, ಮೇ 9ರಂದು ಇದು ಮುಕ್ತಾಯವಾಗುತ್ತದೆ ಎಂದು ಮಾಹಿತಿ ನೀಡಿದರು.
ಬಿಡ್ ಸಲ್ಲಿಸಿದವರಿಗೆ ಷೇರುಗಳು ದೊರೆತರೆ ಮೇ 16ರಂದು ಡಿ ಮ್ಯಾಟ್ ಖಾತೆಗಳಿಗೆ ವರ್ಗಾವಣೆ ಆಗಲಿವೆ. ಕನಿಷ್ಠ 15 ಷೇರುಗಳಿಗೆ ಬಿಡ್ ಸಲ್ಲಿಸಬೇಕು ಎಂದರು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಎಲ್‌ಐಸಿ 30 ಕೋಟಿಗಿಂತ ಹೆಚ್ಚು ಪಾಲಿಸಿದಾರರನ್ನು ಹೊಂದಿರುವ ದೇಶದ ಹಳೆಯ ವಿಮಾ ಸಂಸ್ಥೆಯಾಗಿದೆ. 1956ರ ಸೆಪ್ಟೆಂಬರ್ 1ರಂದು ಅಸ್ತಿತ್ವಕ್ಕೆ ಬಂದಿರುವ ಎಲ್‌ಐಸಿ, ಈಗ 2,048 ಗಣಕೀಕೃತ ಶಾಖಾ ಕಚೇರಿಗಳು, 113 ವಿಭಾಗೀಯ ಕಚೇರಿಗಳು, 8 ವಲಯವಾರು ಕಚೇರಿಗಳು ಹಾಗೂ 1,381 ಸ್ಯಾಟಲೈಟ್ ಹಾಗೂ ಕಾರ್ಪೋರೇಟ್ ಕಚೇರಿಗಳನ್ನು ಹೊಂದಿದೆ. ಪಾಲಿಸಿದಾರರಿಗೆ ಷೇರು ಹೂಡಿಕೆಗೆ ಉತ್ತೇಜಿಸುವ ಸಲುವಾಗಿ ಕೇಂದ್ರ, ಎಲ್‌ಐಸಿ ಐಪಿಒದಲ್ಲಿ ಶೇ.10 ಷೇರುಗಳನ್ನು ಪಾಲಿಸಿದಾರರಿಗೆ ಮೀಸಲಿಟ್ಟಿದೆ. ಪಾಲಿಸಿದಾರರು ಪ್ರತಿ ಷೇರಿಗೆ 60 ರೂ ಹಾಗೂ ರಿಟೇಲ್ ಹೂಡಿಕೆದಾರರು 45 ರೂ.ಡಿಸ್ಕೌಂಟ್ ಪಡೆಯಲಿದ್ದಾರೆ. ಇವರು ಗರಿಷ್ಠ 2 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು ಎಂದು ಮಾಹಿತಿ ನೀಡಿದರು.
ಶೇ.47 ಡಿಜಿಟಲ್ ವ್ಯವಹಾರ: ದೇಶದ ಅತಿದೊಡ್ಡ ವಿಮಾ ಕಂಪನಿಯಾದ ಎಲ್‌ಐಸಿ, ಪ್ರೀಮಿಯಂ ಕಲೆಕ್ಷನ್‌ನಲ್ಲಿ ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ. ಶೇ.66 ಮಾರುಕಟ್ಟೆ ಷೇರು ಹೊಂದಿದೆ. ದೇಶದ ಬ್ರಾಂಡ್ ಮೌಲ್ಯದಲ್ಲಿ 2ನೇ ಸ್ಥಾನ ಹಾಗೂ ವಿಶ್ವದಲ್ಲಿ 10ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
2020-21ರಲ್ಲಿ 2.5 ಕೋಟಿ ಮಂದಿ ಹಾಗೂ 2021-22ರಲ್ಲಿ 2.11 ಕೋಟಿ ಮಂದಿ ಹೊಸದಾಗಿ ಎಲ್‌ಐಸಿ ಪಾಲಿಸಿ ಮಾಡಿಸಿದ್ದಾರೆ. ದೇಶಾದ್ಯಂತ 13 ಲಕ್ಷ ಏಜೆಂಟ್ ಹೊಂದಿರುವ ಎಲ್‌ಐಸಿ, ಗುಂಪು ವಿಮೆಯಲ್ಲಿ ಹಾಗೂ ವಿಮೆ ಮರು ನವೀಕರಣದಲ್ಲೂ ನಂ.1 ಸ್ಥಾನದಲ್ಲಿದೆ. ಶೇ.62 ಗ್ರಾಹಕರು 5 ವರ್ಷ ಕಳೆದರೂ ತಮ್ಮ ವಿಮೆಗಳನ್ನು ಕಟ್ಟುತ್ತಿದ್ದಾರೆ. ಶೇ.47 ವ್ಯವಹಾರ ಡಿಜಿಟಲ್‌ನಲ್ಲಿ ನಡೆಯುತ್ತಿದೆ ಎಂದು ಪಟ್ನಾಯಕ್ ಹೇಳಿದರು.
ಷೇರು ಖರೀದಿಗೆ ನಿಯಮಗಳು
ಎಲ್‌ಐಸಿ ಪಾಲಿಸಿದಾರರು ಷೇರು ಖರೀದಿಸುವುದಿದ್ದರೆ ಪ್ಯಾನ್ ಕಾರ್ಡ್‌ನ್ನು ಎಲ್‌ಐಸಿ ಜತೆ ಲಿಂಕ್ ಮಾಡಬೇಕು. ಆನ್‌ಲೈನ್‌ನಲ್ಲಿ ಡಿಮ್ಯಾಟ್ ಖಾತೆ ತೆರೆಯಬೇಕು.ಪಾಲಿಸಿದಾರರು ಪ್ಯಾನ್ ವಿವರ ಪರಿಷ್ಕರಿಸದಿದ್ದರೆ ಪಾಲಿಸಿದಾರರ ಕೋಟಾದಡಿ ರಿಯಾಯಿತಿ ಸಹಿತ ಷೇರು ಖರೀದಿಸಲು ಅರ್ಹರಾಗುವುದಿಲ್ಲ.
ರಿಟೇಲ್ ಹೂಡಿಕೆದಾರರು ಡಿಮ್ಯಾಟ್ ಖಾತೆ ಹೊಂದಿದ್ದರೆ ಷೇರು ಖರೀದಿಸಬಹುದು ಎಂದು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ