ಬಳ್ಳಾರಿ: ಡ್ರಾಮಾ ಜ್ಯೂನಿಯರ್ ನೋಡಲು ಮನೆ ಬಿಟ್ಟು ಬೆಂಗಳೂರಿಗೆ ಬಂದ 4 ಮಕ್ಕಳು

ಬಳ್ಳಾರಿ: ಖಾಸಗಿ ಮನೋರಂಜನಾ ವಾಹಿನಿಯಲ್ಲಿ ಬರುವ ‘ಡ್ರಾಮಾ ಜ್ಯೂನಿಯರ್’ ರಿಯಾಲಿಟಿ ಶೋ ನೋಡಲು ಮನೆ ಬಿಟ್ಟು ಬೆಂಗಳೂರಿನತ್ತ ಮಕ್ಕಳು ಬಂದ ಘಟನೆ ಬಳ್ಳಾರಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಬೇಸಿಗೆ ರಜೆ ನೀಡಿದ ಹಿನ್ನೆಲೆಯಲ್ಲಿ ಬಳ್ಳಾರಿಯ ಚಂದ್ರಶೇಕರ ಹಾಗೂ ವೀರೇಶ ಎಂಬವರ ನಾಲ್ಕು ಹೆಣ್ಣು ಮಕ್ಕಳು ಮನೆಯಲ್ಲಿ ಆಟವಾಡುತ್ತಿದ್ದರು. ಆಟ ಆಡುವುದು ಬಿಟ್ಟು ಓದಿನ ಕಡೆ ಗಮನ ಕೊಡಿ ಎಂದು ತಂದೆ-ತಾಯಿ ಗದರಿದ್ದಾರೆ. ಆದರೆ ಈ ಮಕ್ಕಳು ನಾವು ಕೂಡ ನಮ್ಮ ಕಾಲ ಮೇಲೆ ನಿಲ್ಲಬೇಕು ಎಂದು ನಿರ್ಧಾರ ಮಾಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಬಸ್ ಹತ್ತಿ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದ್ದಾರೆ. ಬರುವಾಗ ದೇವರ ಮುಂದೆ ಇಟ್ಟಿದ್ದ ಹಣ ತೆಗೆದುಕೊಂಡಿ ಬಂದು ಬಸ್‌ ಹತ್ತಿದ್ದಾರೆ.

ನಿನ್ನೆ ಸಂಜೆ ಬೆಂಗಳೂರು ಬಸ್ ಹತ್ತಿದ್ದ ನಾಲ್ಕು ಜನ ಮಕ್ಕಳ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿದ್ದಾರೆ. ಈ ಮಕ್ಕಳನ್ನು ನೋಡಿದ ಬಸ್ ನಿರ್ವಾಹಕ ಅನುಮಾನಗೊಂಡು ನೀವು ಯಾರು ಎಲ್ಲಿಗೆ ಹೋಗುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಮಕ್ಕಳು ನಿರ್ವಾಹಕನಿಗೆ ಏನನ್ನೂ ಹೇಳದೇ ಸುಮ್ಮನಿದ್ದಾರೆ.
ಆದರೆ ಯಾವಾಗ ಬೆಂಗಳೂರು ತಲುಪಿದರೋ ಆಗ ಬೆಂಗಳೂರು ನಗರ ನೋಡಿ ಅವರಿಗೆ ಗಾಬರಿಯಾಗಿದೆ. ಆಗ ಅವರು ಸತ್ಯವನ್ನು ನಿರ್ವಾಹಕನಿಗೆ ತಿಳಿಸಿದ್ದಾರೆ. ಆಗ ಬಸ್ ಚಾಲಕ ಹಾಗೂ ನಿರ್ವಾಹಕ ನೇರವಾಗಿ ಬೆಂಗಳೂರಿನ ಉಪ್ಪರಪೇಟೆ ಪೊಲೀಸ್ ಠಾಣೆಗೆ ಮಕ್ಕಳನ್ನು ಒಪ್ಪಿಸಿದ್ದಾರೆ. ಬಳಿಕ ಪೋಷಕರಿಗೆ ಮಾಹಿತಿ ನೀಡಿ ಪೋಷಕರಿಗೆ ಮಕ್ಕಳನ್ನು ಒಪ್ಪಿಸಿದ್ದಾರೆ.

ಪ್ರಮುಖ ಸುದ್ದಿ :-   ಜೀವ ಬೆದರಿಕೆ, ವಂಚನೆ ಪ್ರಕರಣ: ಕೇಂದ್ರ ಸಚಿವ ಸೋಮಣ್ಣ ಪುತ್ರ ಅರುಣ ಸೇರಿ ಮೂವರಿಗೆ ನಿರೀಕ್ಷಣಾ ಜಾಮೀನು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement