ಮಂಟಪಕ್ಕೆ ತಡವಾಗಿ ಬಂದ ಮದುಮಗ : ತನ್ನ ಸಂಬಂಧಿ ಯುವಕನ ಜೊತೆ ಮದುವೆಯಾದ ಮದುಮಗಳು…!

ಮುಂಬೈ: ಅಪರೂಪದ ಘಟನೆಯೊಂದರಲ್ಲಿ, ವರ ಮಹಾಶಯ ಮದುವೆಗೆ ಸರಿಯಾದ ಸಮಯಕ್ಕೆ ಬರಲಿಲ್ಲವೆಂದು ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ವಧುವಿನ ತಂದೆ ತನ್ನ ಮಗಳನ್ನು ವರನ ಬದಲಿಗೆ ತನ್ನ ಸಂಬಂಧಿಕನಾದ ಯುವಕನಿಗೆ ಮದುವೆ ಮಾಡಿಸಿದ್ದಾರೆ..!

ಈ ಪ್ರಕರಣ ಏಪ್ರಿಲ್ 24 ರಂದು ಜಿಲ್ಲೆಯ ಮಲ್ಕಾಪುರ ಪಂಗ್ರಾ ಗ್ರಾಮದಲ್ಲಿ ನಡೆದಿದೆ. ಅಂದು ಮದುವೆ ಮುಹೂರ್ತದ ಸಮಯ ಸಂಜೆ 4 ಗಂಟೆಗೆ ಇತ್ತು. ಮೆರವಣಿಗೆಯು ಮದುಮಗಳ ಮನೆಯ ಬಾಗಿಲನ್ನು ತಲುಪಿತು. ಮತ್ತು ವರ ಕಾರಿನಿಂದ ಇಳಿದು ಸ್ನೇಹಿತರೊಂದಿಗೆ ಕುಣಿದು ಕುಪ್ಪಳಿಸಲು ಪ್ರಾರಂಭಿಸಿದ ಎಂದು ಹೇಳಲಾಗುತ್ತಿದೆ.

ಮದುವೆಯ ಶುಭ ಮುಹೂರ್ತವು ಮುಗಿದರೂ ವರ ಹಾಗೂ ಆತನ ಸ್ನೇಹಿತರು ಮಂಟಪಕ್ಕೆ ಬರಲಿಲ್ಲ, ಆದರೆ ಅವರು ರಾತ್ರಿ 8 ಗಂಟೆಯಾದರೂ ಬಂದಿರಲಿಲ್ಲ. ಮದುವೆಗೆ ನೂರಾರು ಜನ ಸೇರಿದ್ದರು. ಇವರ ಮುಂದೆ ಮದುಮಗನ ಈ ರೀತಿ ವರ್ತನೆಯಿಂದ ಕುಪಿತಗೊಂಡ ವಧುವಿನ ತಂದೆ ಮೆರವಣಿಗೆಯನ್ನು ವಾಪಸ್ ಕಳುಹಿಸಿ ಅದೇ ಮಂಟಪದಲ್ಲಿ ತನ್ನ ಸಂಬಂಧಿಕ ಯುವಕನೊಂದಿಗೆ ಮಗಳಿಗೆ ಮದುವೆ ಮಾಡಿಸಿದ್ದಾರೆ.

ಮಗಳಿಗೆ ಮದುವೆ ಮಾಡದೇ ಇದ್ದಿದ್ದರೆ ಅವಳಿಗೆ ಅವಮಾನವಾಗುತ್ತಿತ್ತು. ಆದುದರಿಂದ ಪ್ರೀತಿಪಾತ್ರರ ಸಲಹೆ ಪಡೆದು ಮಗಳನ್ನು ದೂರದ ಸಂಬಂಧಿಯೊಬ್ಬರ ಜೊತೆ ಮದುವೆ ಮಾಡಿಸಿದ್ದೇನೆ. ಈ ಮದುವೆಯಿಂದ ಮದುಮಗಳು ಕೂಡ ತುಂಬಾ ಖುಷಿಯಾಗಿದ್ದಾಳೆ ಎಂದು ತಂದೆ ಹೇಳಿದ್ದಾರೆ.
ವರ ಕುಡಿದು ಅಮಲಿನಲ್ಲಿದ್ದ ಕಾರಣ ಮದುವೆ ಮಂಟಪಕ್ಕೆ ತಡವಾಗಿ ಬಂದಿದ್ದ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   2 ಕ್ಷೇತ್ರಗಳಲ್ಲಿ ಒಂದೇ ಪಕ್ಷದ ತಲಾ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ;ತಾವೇ ಅಧಿಕೃತ ಅಭ್ಯರ್ಥಿಗಳೆಂದು ಹಕ್ಕು ಮಂಡನೆ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement