ಕಡಬ :’ಪಾಂಡವರ ಗುಹೆ’ಯಲ್ಲಿ ಶಿಲಾಯುಗದ ಸಮಾಧಿ ಸ್ಥಳ’ ಪತ್ತೆ…!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ, ರಾಮಕುಂಜ ಗ್ರಾಮದ ಆತೂರು-ಕುಂಡಾಜೆಯ ಸರ್ಕಾರಿ ಗೇರುಬೀಜದ ಪ್ಲಾಂಟೇಶನ್‌ನಲ್ಲಿ ಅಪರೂಪದ ಬೃಹತ್ ಶಿಲಾಯುಗದ ಗುಹಾ ಸಮಾಧಿ ಪತ್ತೆಯಾಗಿದೆ.
ಗ್ರಾಮಸ್ಥರು ನೀಡಿದ ಮಾಹಿತಿಯ ಆಧಾರದ ಮೇಲೆ, ತಜ್ಞರ ತಂಡವು ‘ಪಾಂಡವರ ಗುಹೆ’ ಎಂದು ಕರೆಯಲ್ಪಡುವ ಸ್ಥಳಕ್ಕೆ ಭೇಟಿ ನೀಡಿತು ಮತ್ತು ಕೆಲವು ಚಕಿತಗೊಳಿಸುವ ಲಕ್ಷಣಗಳನ್ನ ಹೊಂದಿರುವ ಬೃಹತ್ ಶಿಲಾಯುಗದ ಸ್ಥಳವನ್ನ ಕಂಡುಕೊಂಡಿತು.

ದೊಡ್ಡ ವೃತ್ತವನ್ನು ಕೆಂಪು ಮುರ ಕಲ್ಲಿನ ಮೇಲೆ ರಚಿಸಿ ಸಮಾಧಿ ಇರುವನ್ನು ಗುರುತಿಸಿರುವುದು ಈ ಗುಹಾ ಸಮಾಧಿ ವಿಶೇಷವಾಗಿದೆ. ಗುಹಾ ಸಮಾಧಿಗಳು, ಬೃಹತ್ ಶಿಲಾಯುಗ ಕಾಲದಲ್ಲಿ ರಚಿಸಲಾದ ಸಮಾಧಿಗಳಾಗಿದೆ ಎಂದು ಊಹಿಸಲಾಗಿದೆ. ಸಮಾಧಿಯ ಮಧ್ಯಭಾಗದಲ್ಲಿ ಕೆಂಪು ಮುರಕಲ್ಲಿನ ಭೂಪಾತಳಿಯಲ್ಲಿ ಸುಮಾರು ಎರಡರಿಂದ ಮೂರು ಅಡಿ ವ್ಯಾಸದ ರಂಧ್ರವನ್ನು ಸುಮಾರು ಒಂದು ಮೀಟರ್ ಆಳದವರೆಗೆ ಸಿಲಿಂಡರ್ ಆಕಾರದಲ್ಲಿ ಕೊರೆಯಲಾಗಿದೆ. ಈ ಪ್ರವೇಶ ದ್ವಾರವನ್ನು ಆಯತಾಕಾರದಲ್ಲಿ ರಚಿಸಲಾಗಿದೆ. ಆದರೆ, ಎರಡೂ ಕಡೆ ಸಮಾಧಿಯ ಮಧ್ಯಭಾಗದಲ್ಲಿ ಎರಡು ಅಥವಾ ಮೂರು ಅಡಿಯ ವ್ಯಾಸದ ರಂಧ್ರವು ಸಾಮಾನ್ಯವಾಗಿ ಕಂಡು ಬರುತ್ತದೆ.

ಗುರುತಿಸಲೆಂದು ಮಾಡಿರುವ ವೃತ್ತದ ವಿಸ್ತಾರ ಸುಮಾರು ಏಳು ಅಡಿಯಾಗಿದೆ. ಹಾಗೂ ಕೆಳಗಿನ ಗುಹೆಯೂ ಏಳು ಅಡಿ ವಿಸ್ತಾರವಾಗಿದೆ. ಕೇರಳ ಮತ್ತು ಕರ್ನಾಟಕದ ಗುಹಾ ಸಮಾಧಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ರಂಧ್ರ, ಕಡಬದ ಗುಹಾ ಸಮಾಧಿಯಲ್ಲಿಲ್ಲ ಎಂಬುದು ಮತ್ತೊಂದು ವಿಶೇಷ. ಆದ್ದರಿಂದ, ಕಡಬದ ಸಮಾಧಿ ಒಂದು ಅಪರೂಪದ ಮಾದರಿಯಾಗಿದೆ. ಗುಹೆಯ ಮಧ್ಯಭಾಗದಲ್ಲಿ ಅಗ್ನಿಕುಂಡವನ್ನು ಹೋಲುವ ಒಂದು ಗುಂಡಿ ಕಂಡು ಬಂದಿದ್ದು, ಇದೂ ಸಹ ಒಂದು ವಿಶೇಷ ಅಂಶವಾಗಿದೆ ಎಂದು ಪ್ರೊ. ಟಿ. ಮುರುಗೇಶಿ ಹೇಳಿದ್ದಾರೆ.
‘ಸಾಮಾನ್ಯವಾಗಿ, ಬೃಹತ್ ಶಿಲಾಯುಗದ ಸಮಾಧಿಗಳನ್ನ ಕಲ್ಲಿನ ವೃತ್ತಗಳು, ಮೆನ್ಹಿರ್ಗಳು ಮತ್ತು ಕಲ್ಲಿನ ಕೈರ್ನ್ʼಗಳಿಂದ ಗುರುತಿಸಲಾಗುತ್ತದೆ. ಆದರೆ ಭಾರತದಲ್ಲಿ ಇದೇ ಮೊದಲ ಬಾರಿಗೆ, ಸಮಾಧಿಯನ್ನ ವೃತ್ತ ಅಥವಾ ಸೊನ್ನೆಯಿಂದ ಗುರುತಿಸಲಾಗಿದೆ. ಬೃಹತ್ ಶಿಲಾಯುಗದ ಜನರಿಗೆ ಶೂನ್ಯ ಗೊತ್ತಿತ್ತೇ ಅಥವಾ ಅವರು ಅದನ್ನು ಮೊದಲು ಕಂಡುಹಿಡಿದರೆ ಎಂಬುದರ ಕುರಿತು ಅಧ್ಯಯನ ನಡೆಯಬೇಕಾಗಿದೆ ಎಂದು ಎಂಎಸ್‌ಆರ್‌ಎಸ್‌ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಮತ್ತು ಡೀನ್ ಪ್ರೊ.ಮುರುಗೇಶಿ ಟಿ ಹೇಳಿದ್ದಾರೆ.

ಪ್ರಾಯಶಃ ಇದು ದಕ್ಷಿಣ ಕನ್ನಡದಲ್ಲಿ ದೊರೆತ ಬೃಹತ್ ಶಿಲಾಯುಗದ ಮೊದಲ ಶಿಲಾ ಕೆತ್ತನೆಯಾಗಿರಬಹುದು ಎಂದು ಅವರು ಹೇಳುತ್ತಾರೆ.
ಗುಹೆಯ ಒಳಗೆ ಯಾವುದೇ ಸಮಾಧಿ ವಸ್ತುಗಳು ಕಂಡುಬಂದಿಲ್ಲ. ಮಧ್ಯದಲ್ಲಿ, ಬಲಿಪೀಠದಂತಹ ಗುಂಡಿಯಿದೆ ಮತ್ತು ಇದು ಸಹ ಕುತೂಹಲಕ್ಕೆ ಕಾಋಣವಾಗಿದೆ ಎಂದು ಹೇಳಿದ್ದಾರೆ.
ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಟಿ. ಮುರುಗೇಶಿ ಅವರು ಸ್ಥಳಕ್ಕೆ ಭೇಟಿ ನೀಡಿ ತನ್ನ ವಿದ್ಯಾರ್ಥಿಗಳ ನೆರವಿನೊಂಡಿಗೆ ಪುರಾತನ ಗುಹಾ ಸಮಾಧಿ ಕುರಿತು ಅಧ್ಯಯನ ನಡೆಸಿದ್ದಾರೆ.
ಇದು ಕ್ರಿ.ಪೂ. ೭ ಅಥವಾ ೮ನೇ ಶತಮಾನದ್ದಾಗಿರಬಹುದು ಎಂದು ಊಹಿಸಲಾಗಿದೆ. 800ಕ್ಕೆ ಸೇರಿದ ಒಂದು ವಿಶಿಷ್ಟ ಬೃಹತ್ ಶಿಲಾಯುಗದ ಸಮಾಧಿ ಸ್ಥಳವು ಗುಹೆಯಲ್ಲಿ ಕಂಡುಬಂದಿದೆ ಎಂದು ಬಹಿರಂಗ ಪಡಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement