ಮಹಿಳಾ ಪೊಲೀಸ್‌ ಮೇಲಿನ ಹಲ್ಲೆ ಪ್ರಕರಣ: ಜಿಗ್ನೇಶ್ ಮೇವಾನಿಗೆ ಜಾಮೀನು

ಬಾರ್ಪೇಟಾ: ಪೊಲೀಸ್ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದ ಪ್ರಕರಣದಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರಿಗೆ ಅಸ್ಸಾಂ ನ್ಯಾಯಾಲಯವು ಜಾಮೀನು ನೀಡಿದೆ.
ಗುವಾಹತಿಯಿಂದ ಕೊಕ್ರಜಾರ್‌ಗೆ ಪೊಲೀಸ್ ಪೇದೆಯೊಬ್ಬರು ಕರೆತರುತ್ತಿದ್ದಾಗ ಪೊಲೀಸ್ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ನ್ಯಾಯಾಲಯ ತನ್ನ ಆದೇಶವನ್ನು ಕಾಯ್ದಿರಿಸಿದ ನಂತರ ಶುಕ್ರವಾರ ಈ ಆದೇಶ ಪ್ರಕಟಿಸಿದೆ.

“ನಾವು ನಮ್ಮ ವಾದಗಳನ್ನು ನ್ಯಾಯಾಲಯದ ಮುಂದೆ ಇರಿಸಿದ್ದೇವೆ. ಪ್ರಾಸಿಕ್ಯೂಷನ್ ಕಡೆಯವರು ಮುಂದೂಡಲು ಪ್ರಯತ್ನಿಸಿದರು. ಆದರೆ ನ್ಯಾಯಾಲಯ ಅದನ್ನು ನಿರಾಕರಿಸಿತು ಮತ್ತು ಇಂದೇ ತಮ್ಮ ವಾದಗಳನ್ನು ಸಲ್ಲಿಸುವಂತೆ ಕೇಳಿತು,” ಅವರು ಹೇಳಿದರು. ಮೇವಾನಿ ಅವರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾಡಿದ ಟ್ವೀಟ್ ಪ್ರಕರಣದಲ್ಲಿ ಜಾಮೀನು ಪಡೆದ ನಾಲ್ಕು ದಿನಗಳ ನಂತರ ಏಪ್ರಿಲ್ 25 ರಂದು ಅವರನ್ನು ಮತ್ತೆ ಬಂಧಿಸಲಾಯಿತು.

ಮಹಿಳಾ ಪೊಲೀಸ್ ಅಧಿಕಾರಿಯು ಮೇವಾನಿ ಅವರನ್ನು ಗುವಾಹತಿ ವಿಮಾನ ನಿಲ್ದಾಣದಿಂದ ಕೊಕ್ರಜಾರ್‌ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುರ್ಜೀತ್ ಸಿಂಗ್ ಪನೇಸರ್ ಮತ್ತು ಇನ್ನೊಬ್ಬ ಅಧಿಕಾರಿಯೊಂದಿಗೆ ಸರ್ಕಾರಿ ವಾಹನದಲ್ಲಿ ಏಪ್ರಿಲ್ 21 ರಂದು ಬೆಂಗಾವಲು ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಪೋಲೀಸರ ಹೇಳಿಕೆಯನ್ನು ಮೆವಾನಿ ತಿರಸ್ಕರಿಸಿದರು ಮತ್ತು ಅವರು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಅಥವಾ ಅವರ ಜಾಮೀನು ಅರ್ಜಿಯನ್ನು ಕೊಕ್ರಜಾರ್‌ನಲ್ಲಿ ವಾದಿಸುವ ಸಮಯದಲ್ಲಿ ಬಾರ್ಪೇಟಾ ಪ್ರಕರಣದ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ವಾದಿಸಿದ್ದರು.
ಇದು ನನ್ನ ವರ್ಚಸ್ಸು ಹಾಳು ಮಾಡಲು ಮತ್ತು ವ್ಯವಸ್ಥಿತವಾಗಿ ನಾಶಪಡಿಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಪಿತೂರಿಯಾಗಿದೆ ಎಂದು ಮೇವಾನಿ ಆರೋಪಿಸಿದ್ದಾರೆ.

ಓದಿರಿ :-   ಇಂಧನ ದರ ಇಳಿಕೆ ಮಾಡಿದ ಮೋದಿ ಸರ್ಕಾರ; ಅಮೆರಿಕ ಒತ್ತಡಕ್ಕೆ ಮಣಿಯದ ಭಾರತವನ್ನು ಹೊಗಳಿದ ಇಮ್ರಾನ್ ಖಾನ್...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ