ಟ್ವಿಟರ್ ಖರೀದಿ ನಂತರ ಟೆಸ್ಲಾದ 3.99 ಶತಕೋಟಿ ಡಾಲರ್ ಮೌಲ್ಯದ ಷೇರು ಮಾರಾಟ ಮಾಡಿದ ಎಲಾನ್ ಮಸ್ಕ್

ವಾಷಿಂಗ್ಟನ್: ಖ್ಯಾತ ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್ ಖರೀದಿ ಮಾಡಿ ಭಾರಿ ಸುದ್ದಿ ಮಾಡಿದ್ದ ಉದ್ಯಮಿ ಹಾಗೂ ವಿಶ್ವದ ಅತಿ ಶ್ರೀಮಂತ ಎಲಾನ್ ಮಸ್ಕ್ ಇದೀಗ ತಮ್ಮ ಟೆಸ್ಲಾ ಕಾರು ತಯಾರಿಕಾ ಸಂಸ್ಥೆಯ ಷೇರು ಮಾರಾಟ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ.

ಎಲೆಕ್ಟ್ರಿಕ್ ಕಾರು ತಯಾರಿಕ ಸಂಸ್ಥೆ ಟೆಸ್ಲಾ ಖ್ಯಾತಿಯ ಎಲಾನ್ ಮಸ್ಕ್, ಟೆಸ್ಲಾದ 44 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಷೇರುಗಳ ಮಾರುಕಟ್ಟೆ ಮೌಲ್ಯ 3.99 ಶತಕೋಟಿ ಡಾಲರ್ ಅಂದರೆ ಅಂದಾಜು 30,536.79 ಕೋಟಿ ರೂ.ಗಳಷ್ಟು ಎಂದು ಹೇಳಲಾಗಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ಕಳೆದ ವಾರ 44 ಶತಕೋಟಿ ಡಾಲರ್ (ಸುಮಾರು 3.36 ಲಕ್ಷ ಕೋಟಿ ರೂ.ಗಳು)ಗೆ ಖರೀದಿಸಿದ್ದ ಎಲಾನ್ ಮಸ್ಕ್ ಅವರು ಹಣಕಾಸು ನೆರವು ಪಡೆಯಲು ಟೆಸ್ಲಾ ಷೇರು ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಗುರುವಾರ ಟೆಸ್ಲಾದ ಷೇರು ಮಾರಾಟದ ಬಳಿಕ ಮುಂದೆ ಷೇರು ಮಾರಾಟ ಮಾಡುವ ಚಿಂತನೆ ಇಲ್ಲ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಎಲಾನ್ ಮಸ್ಕ್ ಅವರು ಟ್ವಿಟರ್ ಖರೀದಿಸಿದ ಬಳಿಕ ಟೆಸ್ಲಾ ಷೇರಿನ ಮೌಲ್ಯ ಶೇ.12ರಷ್ಟು ಇಳಿಕೆ ಕಂಡುಬಂದಿತ್ತು.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement