ರಸ್ತೆಗೆ ಅಡ್ಡನಿಂತ ಆನೆ…ಅಂಬುಲೆನ್ಸ್‌ನಲ್ಲೇ ಆಯ್ತು ಮಹಿಳೆಗೆ ಹೆರಿಗೆ…!

ಈರೋಡ್: ಘಾಟ್ ರಸ್ತೆಯಲ್ಲಿ ಕಾಡು ಆನೆಯೊಂದು ಅಂಬುಲೆನ್ಸ್‌ಗೆ ಹೋಗಲು ಅಡ್ಡಿಯಾದ ಕಾರಣ 24 ವರ್ಷದ ಆದಿವಾಸಿ ಮಹಿಳೆಯೊಬ್ಬರು ಆಂಬ್ಯುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ತಮಿಳುನಾಡಿನ ಎರೋಡ್‌ ಜಿಲ್ಲೆಯಲ್ಲಿ ನಡೆದಿದೆ.

ಆರೋಗ್ಯ ಅಧಿಕಾರಿಗಳ ಪ್ರಕಾರ, ಗುರುವಾರ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು ಮತ್ತು ಆಕೆಯ ಸಂಬಂಧಿಕರು ಅವಳನ್ನು ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುತ್ತಿದ್ದರು. ಆದರೆ ಅದೇವೇಳೆ ಕಾಡಿನಿಂದ ಹೊರಬಂದ ಆನೆ ಘಾಟ್ ರಸ್ತೆಯ ಮಧ್ಯದಲ್ಲಿ ನಿಂತಿದ್ದರಿಂದ ಅವಳನ್ನು ಆಸ್ಪತ್ರೆಗೆ ಒಯ್ಯಲು ಸಾಧ್ಯವಾಗಲಿಲ್ಲ. ಅಂಬ್ಯುಲೆನ್ಸ್‌ನ ಚಾಲಕ ವಾಹನವನ್ನು ನಿಲ್ಲಿಸಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾದರೂ ಆನೆ ನಿಂತ ಸ್ಥಳದಿಂದ ಚಲಿಸಲಿಲ್ಲ.

ಇದೇ ವೇಳೆ ಮಹಿಳೆಗೆ ನೋವು ಹೆಚ್ಚಾಗಿದ್ದರಿಂದ ಅಂಬ್ಯುಲೆನ್ಸ್‌ನಲ್ಲಿದ್ದ ತಂಡ ಮಹಿಳೆಗೆ ಹೆರಿಗೆಯಾಗಲು ಸಹಾಯ ಮಾಡಿದೆ. ಆಕೆಗೆ ಗಂಡು ಮಗು ಜನಿಸಿತು. ಆದರೆ ಕೆಲವು ನಿಮಿಷಗಳ ನಂತರ, ಆನೆ ಸ್ಥಳದಿಂದ ಹೊರಟುಹೋಯಿತು ಮತ್ತು ಆರೋಗ್ಯ ಅಧಿಕಾರಿಗಳು ಮಹಿಳೆ ಮತ್ತು ಮಗುವನ್ನು ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಇಬ್ಬರು ಆರೋಗ್ಯ ಚೆನ್ನಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಜೆಡಿಯು ಯುವ ಮುಖಂಡನ ಗುಂಡಿಕ್ಕಿ ಹತ್ಯೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement