ಕುಮಟಾ ಡಾ.ಬಾಳಿಗಾ ವಾಣಿಜ್ಯ ಕಾಲೇಜ್ ಮುಖ್ಯ ಗ್ರಂಥಪಾಲಕ‌ ಡಾ. ಶಿವಾನಂದ ಬುಳ್ಳಾಗೆ ಸೋಶಿಯಲ್ ಸೈಂಟಿಸ್ಟ್ ಪ್ರಶಸ್ತಿ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಮುಖ್ಯ ಗ್ರಂಥಪಾಲಕರಾದ ಡಾ. ಶಿವಾನಂದ ಬುಳ್ಳಾ ಅವರ ಪಿ.ಎಚ್.ಡಿ ಪ್ರಬಂಧ ಹಾಗೂ ಗ್ರಂಥಾಲಯ ವಿಜ್ಞಾನಕ್ಕೆ ನೀಡಿದ ಅಮೂಲ್ಯ ವೈಜ್ಞಾನಿಕ ಕೊಡುಗೆಗಾಗಿ, ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ “ಗ್ರಾಬ್ಸ್ ಬೆಸ್ಟ್ ಸೋಶಿಯಲ್ ಸೈಂಟಿಸ್ಟ್ ಪ್ರಶಸ್ತಿ” ನೀಡಲಾಗಿದೆ.

ಚೆನ್ನೈನ ಆನಂದಭವನ ಸಭಾಂಗಣದಲ್ಲಿ ಅಸೋಸಿಯೇಶನ್ ಆಫ್ ಇಂಟಲೆಕ್ಚುವಲ್ಸ್ ಅಂಡ್‌ ಫೆಕಲ್ಟಿ (ಟಿಎಐಎಫ್) ಹಾಗೂ ಗ್ರಾಬ್ಸ್ ಸಹಯೋಗದಲ್ಲಿ ನಡೆದ “ಗ್ರಾಬ್ಸ್ ಪ್ರಶಸ್ತಿ -೨೦೨೨” ವಿತರಣಾ ಸಮಾರಂಭದಲ್ಲಿ ಡಾ. ಶಿವಾನಂದ ಬುಳ್ಳಾ ಅವರಿಗೆ ಈ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇವರ ಈ ಸಾಧನೆಯನ್ನು ಮನ್ನಿಸಿ ಕರ್ನಾಟಕ ಸರಕಾರದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ವಿಧಾನಸೌಧದ ಸಭಾಪತಿ ಕಾರ್ಯಾಲಯದಲ್ಲಿ ಡಾ. ಶಿವಾನಂದ ಬುಳ್ಳಾ ಅವರನ್ನು ಗೌರವಿಸಿದ್ದಾರೆ.

ನಂತರ ಮಾತನಾಡಿದ ಅವರು ಈ ಆಧುನಿಕ ಯುಗದ ಗ್ರಂಥಾಲಯ ವಿಜ್ಞಾನದಲ್ಲಿ ಹಲವಾರು ಅಮೂಲಾಗ್ರ ಬದಲಾವಣೆಗಳಾಗುತ್ತಿದ್ದು, ಬೇರೆ ಬೇರೆ ತಂತ್ರಾಂಶಗಳನ್ನು ಬಳಸಿ ಗ್ರಂಥಾಲಯ ವಿಜ್ಞಾನವನ್ನು ಅಭಿವೃದ್ಧಿಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಡಾ. ಬುಳ್ಳಾ ಅವರು ಗ್ರಂಥಾಲಯ ವಿಜ್ಞಾನಕ್ಕೆ ಹಲವಾರು ಅಮೂಲ್ಯ ಕೊಡುಗೆಗಳನ್ನು ನೀಡಿ ಈ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ವಿಷಯ. ಇವರ ಈ ಒಂದು ಸಾಧನೆ ಉಳಿದ ಗ್ರಂಥಪಾಲಕರಿಗೆ ಮಾದರಿಯಾಗಲಿ ಎಂದು ಅಭಿಪ್ರಾಯಪಟ್ಟರು.
ಪ್ರಶಸ್ತಿಗೆ ಭಾಜನರಾದ ಡಾ. ಶಿವಾನಂದ ಬುಳ್ಳಾ ಅವರಿಗೆ ಕೆನರಾ ಕಾಲೇಜು ಸೊಸೈಟಿಯ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಹಾಗೂ ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ವಿ.ಶೇಣ್ವಿ, ಮತ್ತು ಬೋಧಕ – ಬೋಧಕೇತರ ಸಿಬ್ಬಂದಿ ಅಭಿನಂಧಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement