ಹಗರಣದಿಂದ ಭಾರೀ ಪ್ರಮಾಣದ ಹಣ ಹರಿದು ಬಂತು: ವಿಚಾರಣೆ ವೇಳೆ ಸಿಐಡಿ ಮುಂದೆ ಬಾಯ್ಬಿಟ್ಟ ದಿವ್ಯಾ ಹಾಗರಗಿ..?

posted in: ರಾಜ್ಯ | 0

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮದ ಕುರಿತಂತೆ ಬಂಧಿತ ಆರೋಪಿ ದಿವ್ಯಾ ಹಾಗರಗಿ ಸಿಐಡಿ ಅಧಿಕಾರಿಗಳ ಮುಂದೆ ಅಕ್ರಮದಲ್ಲಿ ದೊಡ್ಡ ಮೊತ್ತದ ಹಣಕಾಸಿನ ವ್ಯವಹಾರ ನಡೆದಿರುವ ಬಗೆಗಿನ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ..!
ಕಲಬುರಗಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆಯಾಗಿರುವ ಆರೋಪಿ ದಿವ್ಯಾ ಹಾಗರಗಿ ಇದೇ ಶಾಲೆಯಲ್ಲಿ ನಡೆದಿರುವ ಪರೀಕ್ಷೆ ಅಕ್ರಮದಲ್ಲಿ ದೊಡ್ಡ ಮೊತ್ತದ ಹಣ ಪಡೆದಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಆರ್.ಡಿ. ಪಾಟೀಲ್ ಮತ್ತು ಮಂಜುನಾಥ್ ಗ್ಯಾಂಗ್ ಗ್ಯಾಂಗ್‌ನಿಂದ ದಿವ್ಯಾ ಅವರಿಗೆ ದೊಡ್ಡ ಮಟ್ಟದ ಹಣ ಸಂದಾಯವಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಆರ್ ಡಿ ಪಾಟೀಲ್ ಹಾಗೂ ಮಂಜುನಾಥ್ ಬಳಿಯಿಂದ ದಿವ್ಯಾ ಹಾಗರಗಿಗೆ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ ಹಣ ಕೊಡಿಸಿದ್ದ. ಆರ್.ಡಿ.ಪಾಟೀಲ್ ಹಾಗೂ ಮಂಜುನಾಥ್ ಹಾಗೂ ದಿವ್ಯಾ ಹಾಗರಗಿ ಮಧ್ಯೆ ಮಧ್ಯವರ್ತಿಯಾಗಿ ಕಾಶೀನಾಥ ಕೆಲಸ ಮಾಡಿದ್ದ ಹಾಗೂ ಅಕ್ರಮದಲ್ಲಿ ಆತನೂ ದೊಡ್ಡ ಮೊತ್ತದ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಕಾಶೀನಾಥ ಈಗ ತೆಲೆಮರೆಸಿಕೊಂಡಿದ್ದಾನೆ.

ಓದಿರಿ :-   ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ

ಕಾಶೀನಾಥ್ ಮಾತು ಕೇಳಿ ತಾನು ಅಕ್ರಮ ಎಸಗಿದ್ದೇನೆ ಎಂದು ದಿವ್ಯಾ ಹಾಗರಗಿ ಹೇಳಿದ್ದಾಳೆ ಎನ್ನಲಾಗಿದೆ. ಅಲ್ಲದೆ, ಇಂಜಿನಿಯರ್ ಮಂಜುನಾಥ ಸಂಚು ಮಾಡಿದ್ದು ಪರೀಕ್ಷೆಯಲ್ಲಿ ಒಎಂಆರ್ ಶೀಟ್ ತಿದ್ದುವ ಬಗ್ಗೆ ಕಾಶೀನಾಥ ಹಾಗೂ ಮಂಜುನಾಥ ಹೇಗೆ ಮಾಡಬೇಕಂದು ಚರ್ಚೆ ನಡೆಸಿ ಯೋಜನೆ ರೂಪಿಸಿದ್ದರು. ದಿವ್ಯಾ ಹಾಗರಗಿ ಒಡೆತನದ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆ ಬರೆಯುವ ತನ್ನ ಅಭ್ಯರ್ಥಿಗಳಿಗೆ ಸಹಾಯ ಮಾಡುವಂತೆ ಕಾಶೀನಾಥ್ ಬಳಿ ಮಂಜುನಾಥ್ ಕೇಳಿಕೊಂಡಿದ್ದ. ಅಲ್ಲದೆ, ಕಾಶೀನಾಥ ಮುಖಾಂತರ ದಿವ್ಯಾರನ್ನು ಸಂಪರ್ಕ ಮಾಡಿದ್ದ. ನಂತರ ಪರೀಕ್ಷೆಯಲ್ಲಿ ಒಎಂಆರ್ ತಿದ್ದಲು ದಿವ್ಯಾ ಒಪ್ಪಿಗೆ ಸೂಚಿಸಿದ್ದರಂತೆ. ಸಂಪೂರ್ಣ ಕೇಂದ್ರವನ್ನು ಮೇಲ್ವಿಚಾರಣೆ ಮಾಡುತಿದ್ದ ಕಾಶೀನಾಥ, ತಮಗೆ ಬೇಕಾದ ಅಭ್ಯರ್ಥಿಗಳು ಯಾವ ಯಾವ ಕೊಠಡಿಯಲ್ಲಿದ್ದಾರೆ ಹಾಗೂ ಅವರ ಹಾಲ್‌ ಟಿಕೆಟ್‌ ನಂಬರ್‌ ಯಾವುದೂ ಎಲ್ಲದರ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದ. ನಂತರ ಈ ಅಭ್ಯರ್ಥಿಗಳಿದ್ದ ರೂಮಿಗೆ ತಮಗೆ ಬೇಕಾದ ಶಿಕ್ಷಕಿಯರನ್ನು ಮೇಲ್ವಿಚಾರಕರಾಗಿ ಹಾಕುತ್ತಿದ್ದ ಪರೀಕ್ಷೆ ಬರೆದು ಪರಿಕ್ಷಾರ್ಥಿಗಳು ಹೊರಗೆ ಹೋದ ಬಳಿಕ ಕಾಶೀನಾಥ ನೀಡಿದ ಉತ್ತರವನ್ನು ಒಎಂಆಆರ್‌ನಲ್ಲಿ ಮೇಲ್ವಿಚಾರಕಿಯರು ತಿದ್ದುತ್ತಿದ್ದರು. ಇದಿಷ್ಟು ಮಾಹಿತಿಯನ್ನು ಸಿಐಡಿ ವಿಚಾರಣೆ ವೇಳೆ ದಿವ್ಯಾ ಹಾಗರಗಿ ಬಾಯ್ಬಿಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಓದಿರಿ :-   ಪರಿಷತ್ ಚುನಾವಣೆ : ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಿಸಿದ ಜೆಡಿಎಸ್‌

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ