ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣ: ಪ್ರಮುಖ ಆರೋಪಿ ನೀರಾವರಿ ಇಲಾಖೆ ಅಧಿಕಾರಿ ಸಿಐಡಿಗೆ ಶರಣಾಗತಿ…!

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ 20 ದಿ‌ನಗಳಿಂದ ತಲೆಮರೆಸಿಕೊಂಡಿದ್ದ ಮತ್ತೋರ್ವ ಪ್ರಮುಖ ಆರೋಪಿ, ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಮಂಜುನಾಥ್ ಮೇಳಕುಂದಾ ಭಾನುವಾರ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾರೆ.

ನಗರದ ಐವಾನ್ ಶಾಹಿ‌ ಅತಿಥಿಗೃಹದಲ್ಲಿರುವ ಸಿಐಡಿ ಕಚೇರಿಗೆ ಆಟೋದಲ್ಲಿ ಕೊರಳಿಗೆ ಒಂದು ಬ್ಯಾಗ್ ಹಾಕಿಕೊಂಡು ಮಂಜುನಾಥ ಬಂದಿದ್ದಾರೆ. ಈ ವೇಳೆ ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ನನ್ನ ಪಾತ್ರ ಏನೂ ಇಲ್ಲ. ನನಗೆ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಮಂಗಳೂರಿನಲ್ಲಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಸಿಐಡಿ ಮುಂದೆ ನನ್ನ ತಪ್ಪಿಲ್ಲದ ಬಗ್ಗೆ ವಿವರಿಸುತ್ತೇನೆ. ನನ್ನ ಹೆಸರು ಅನಗತ್ಯವಾಗಿ ತಳಕು ಹಾಕಿಕೊಂಡಿದೆ. ನನಗೆ ಗೊತ್ತಿರುವ ಎಲ್ಲ ವಿಚಾರವನ್ನು ಸಿಐಡಿ ಮುಂದೆ ತಿಳಿಸುತ್ತೇ‌ನೆ ಎಂದು ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಲಬುರಗಿಯಲ್ಲಿ ಪರೀಕ್ಷೆಯ ಅಕ್ರಮ ಹಗರಣದ ಪ್ರಮುಖ ಆರೋಪಿಯಾಗಿದ್ದ ಮಂಜುನಾಥ್ ಮೇಳಕುಂದಿ ನೀರಾವರಿ ಇಲಾಖೆ ಇಂಜನೀಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಎಫ್‍ಐಆರ್ ದಾಖಲಾದ ಬಳಿಕ ನಾಪತ್ತೆ ಆಗಿದ್ದರು. 6 ದಿನಗೊಳಗೆ ಶರಣಾಗಬೇಕು, ಇಲ್ಲದಿದ್ದರೇ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಕೋಟ್ ಎಚ್ಚರಿಕೆ ನೀಡಿತ್ತು. ಇದೀಗ ಆಟೋದಲ್ಲಿ ಒಬ್ಬನೇ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾರೆ.
ಇನ್ನೂ ಪ್ರಕರನದ ಪ್ರಮುಖ ಆರೋಪಿಗಳಾದ ಮುಖ್ಯಶಿಕ್ಷಕ ಕಾಶಿನಾಥ, ಅಭ್ಯರ್ಥಿ ಶಾಂತಾಬಾಯಿ ಸೇರಿದಂತೆ ಕೆಲವರು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಸಿಐಡಿ 10 ತಂಡಗಳನ್ನು ರಚಿಸಿ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಮೊದಲಾದ ರಾಜ್ಯಗಳಲ್ಲಿ ತೀವ್ರ ಶೋಧ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement