ಧಾರವಾಡದ ಕಲ್ಲೂರಿನಲ್ಲಿ ಭಾರೀ ಜಂಗಿ ನಿಕಾಲಿ ಕುಸ್ತಿ: ವಿಜೇತ ಪರಶುರಾಮ ಬೊಮ್ಮನಹಳ್ಳಿಗೆ ಬೆಳ್ಳಿ ಗದೆ

ಧಾರವಾಡ : ಧಾರವಾಡ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಕಾರ್ಮಿಕರ ದಿನಾಚರಣೆ ಹಾಗೂ ಬಸವ ಜಯಂತಿ ಅಂಗವಾಗಿ ಜೈ ಹನುಮಾನ್ ಕುಸ್ತಿ ಸಂಘದ ವತಿಯಿಂದ ಭಾರಿ ಜಂಗಿ ನಿಕಾಲಿ ಕುಸ್ತಿ ನಡೆಯಿತು.
ಗ್ರಾಮದ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಶಾಲೆ ಮೈದಾನದಲ್ಲಿ ನಡೆದ ಕುಸ್ತಿಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಒಟ್ಟು ೫೨ ಪುರುಷ ಜೋಡಿಗಳು, ೫ ಜೋಡಿ ಮಹಿಳೆಯರು ಕುಸ್ತಿ ಪಂದ್ಯದಲ್ಲಿ ಭಾಗವಹಿಸಿ, ತಮ್ಮ ಶಕ್ತಿ ಸಾರ್ಮರ್ಥ್ಯವನ್ನು ಒರೆಗೆ ಹಚ್ಚಿದರು. ಮಹಿಳಾ ವಿಭಾಗದಲ್ಲಿ, ಲೀನಾ ಸಿದ್ದಿ, ಗೋಪವ್ವ ಕೊಡಕಿ, ಪುಷ್ಪ ನಾಯಕ್ ಅವರು ವಿಜೇತರಾದರು.
ಪುರುಷರ ವಿಭಾಗದಲ್ಲಿ, ಮಹಾಂತೇಶ ದೊಡ್ಡವಾಡ- ಪರಶುರಾಮ ಬೊಮ್ಮನಹಳ್ಳಿ ನಡುವೆ ನಡೆದ ರೋಚಕ ಪಂದ್ಯದಲ್ಲಿ ಅಂಕಗಳ ಆಧಾರದ ಮೇಲೆ ವಿಜೇತರಾದ ಪರಶುರಾಮ್ ಬೊಮ್ಮನಹಳ್ಳಿ ಅವರಿಗೆ ಬೆಳ್ಳಿ ಗದೆ ನೀಡಲಾಯಿತು.
ಕುಸ್ತಿಪಟುಗಳು ಚಿತ್ ಪಟ್ ಆಗುವ ವೇಳೆಯಲ್ಲಿ ಸಿಳ್ಳೆ, ಚಪ್ಪಾಳೆ ಮುಗಿಲು ಮುಟ್ಟಿದ್ದವು. ಇದಕ್ಕೂ ಮುನ್ನ ಕುಸ್ತಿ ಪಂದ್ಯಾವಳಿಯನ್ನು ಮನಗುಂಡಿಯ ಬಸವ ಮಹಾಮನೆಯ ಬಸವಾನಂದ ಮಹಾಸ್ವಾಮಿಗಳು ಚಾಲನೆ ನೀಡಿದರು. ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಸವಿತಾ ವಿಶ್ವನಾಥ ಅಮರಶೆಟ್ಟಿ, ಅಂಜುಮನ್ ಇಸ್ಲಾಂ ಸಂಸ್ಥೆ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಜೈ ಹನುಮಾನ್ ಕುಸ್ತಿ ಸಂಘದ ಅಧ್ಯಕ್ಷ ನಿಂಗರಾಜ ಹಡಪದ, ಬಿಜೆಪಿ ಮುಖಂಡ ಕಲಂದರ್ ಮುಲ್ಲಾ, ಹಡಪದ ಅಪ್ಪಣ್ಣ ಸೇವಾ ಸಂಘದ ಅಧ್ಯಕ್ಷ ಸಿದ್ದಪ್ಪ ಮ. ಹಡಪದ ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

ಬಳಿಕ ಮಾತನಾಡಿದ ಮನಗುಂಡಿಯ ಬಸವಾನಂದ ಶ್ರೀಗಳು, ಕುಸ್ತಿ ಪಂದ್ಯಾವಳಿ ಗ್ರಾಮೀಣ ಭಾಗದ ಸೊಗಡು. ಅದನ್ನು ಉಳಿಸಿ ಬೆಳಸುವ ಕೆಲಸವಾಗಬೇಕಿದೆ ಈ ಹಿಂದೆ ಪ್ರತಿ ಹಳ್ಳಿಗಳಲ್ಲಿದ್ದ ಗರಡಿ ಮನೆಗಳು ಮತ್ತೆ ಮುನ್ನಲೆಗೆ ತರಬೇಕು. ಹಿರಿಯ ಪೈನ್ವಾಲರುಗಳು ಯುವ ಪಿಳಿಗೆಗೆ ಅದನ್ನು ಸಮರ್ಥವಾಗಿ ಪರಿಚಯಿಸಬೇಕು ಎಂದು ಸಲಹೆ ನೀಡಿದರು.
ಬಳಿಕ ಉಪ್ಪಿನಬೆಟಗೇರಿಯ ಮೂರು ಸಾವಿರ ಮಠದ ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ಹಾಗೂ ಮನಗುಂಡಿಯ ಬಸವ ಮಹಾಮನೆಯ ಬಸವಾನಂದ ಶ್ರೀ ಅವರನ್ನು ಜೈ ಹನುಮಾನ್ ಕುಸ್ತಿ ಸಂಘದ ಅಧ್ಯಕ್ಷ ನಿಂಗರಾಜ ಹಡಪದ ಹಾಗೂ ಎಲ್ಲಾ ಸದಸ್ಯರು ಸನ್ಮಾನಿಸಿ ಗೌರವಿಸಿದರು.
ಮಾಜಿ ಶಾಸಕಿ ಸೀಮಾ ಮಸೂತಿ, ಜಿಪಂ ಮಾಜಿ ಸದಸ್ಯ ನಿಜನಗೌಡ ಪಾಟೀಲ್, ಎಪಿಎಂಸಿ ಸದಸ್ಯರಾದ ಪಾರ್ವತೆವ್ವ ದಂಡಿನ, ಶ್ರೀನಿವಾಸ ಶಾಸ್ತ್ರಿ, ಅಡಿವೆಪ್ಪ ಮರಗಾಲ, ನೀಲಕಂಠಪ್ಪ ಟಗರಿ, ಬಸು ದಂಡಿನ, ಮಡಿವಾಳಪ್ಪ ಬುಡರಕಟ್ಟಿ, ಮಹ್ಮದಗೌಸ್ ಸೈಯದ್‌ನವರ, ಗುರುಸಿದ್ದಪ್ಪ ಎಳಲಿ, ವಿಠ್ಠಲ ಬ್ಯಾಟಗೇರ,ಈರಪ್ಪ ಎಳಲಿ, ದ್ಯಾಮಣ್ಣ ತಳವಾರ, ಗದಿಗೆಪ್ಪಾ ಗುಗರಿ, ಬಸವರಾಜ ಮರಿನಿಂಗನವರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement