ಮಂಗಳೂರು: ಕಾಡಿನಿಂದ ನೀರು ಅರಸಿ ಬಂದ ಕಾಡುಕೋಣಯೊಂದು ನೀರಿನ ಟ್ಯಾಂಕ್ ಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟಲ್ಪ ಸಮೀಪದ ಕನ್ಯಾನದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಕಳೆಂಜೆಮಲೆ ರಕ್ಷಿತಾರಣ್ಯ ಕಾಡಿನಿಂದ ಕಾಡುಕೋಣವು ನೀರು ಹುಡುಕಿಕೊಂಡು ರಾತ್ರಿ ಊರಿಗೆ ಬಂದಿದೆ ಎಂದು ಹೇಳಲಾಗಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಕನ್ಯಾನ ಭಾರತ ಸೇವಾಶ್ರಮದ ದೊಡ್ಡ ನೀರಿನ ಟ್ಯಾಂಕ್ ನಲ್ಲಿ ಬಗ್ಗಿ ನೀರು ಕುಡಿಯಲು ಯತ್ನಿಸಿದಾಗ ಕೋಣ ಟ್ಯಾಂಕಿಗೆ ಜಾರಿ ಬಿದ್ದಿದೆ. ಟ್ಯಾಂಕ್ ಆಳವಾಗಿದ್ದುದರಿಂದ ಮೇಲೆ ಬರಲಾಗದೆ ಟ್ಯಾಂಕಿನೊಳಗೆ ಕಳೆದಿದೆ ಎಂದು ವರದಿಗಳು ತಿಳಿಸಿವೆ. ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದರಿಂದಲೇ ಬೆಳಿಗ್ಗೆಯಾದ ನಂತರವೇ ಆಶ್ರಮ ನಿವಾಸಿಗಳು ಕಾಡುಕೋಣ ನೀರಿನ ಟ್ಯಾಂಕಿನಲ್ಲಿ ಕಾಡಕೋಣ ಬಿದ್ದಿದ್ದನ್ನು ನೋಡಿದ್ದಾರೆ.
ಸ್ಥಳಕ್ಕೆ ವಿಟ್ಲ ಶಾಖೆಯ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಕಾರ್ಯಾಚರಣೆ ನಡೆಸಿ ನೀರು ಖಾಲಿ ಮಾಡಿ ನಂತರ ಕೋಣವನ್ನು ರಕ್ಷಿಸಲಾಗಿದೆ ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ