ಈ 30 ವರ್ಷದ ವ್ಯಕ್ತಿ 47 ಮಕ್ಕಳಿಗೆ ತಂದೆ, ಶೀಘ್ರವೇ 10 ಮಕ್ಕಳಿಗೆ ತಂದೆಯಾಗ್ತಿದ್ದಾರಂತೆ, ಆದ್ರೂ ಇವ್ರಿಗೆ ಸಿಗ್ತಿಲ್ವಂತೆ ಸಂಗಾತಿ…!

ನವದೆಹಲಿ: ಅಮೆರಿಕದ ಕ್ಯಾಲಿಫೋರ್ನಿಯಾದ 30 ವರ್ಷದ ಕೈಲ್ ಕಾರ್ಡಿ ಅವರು ವೀರ್ಯ ದಾನಿ ಮತ್ತು ಪ್ರಪಂಚದಾದ್ಯಂತ 47ಕ್ಕೂ ಹೆಚ್ಚು ಮಕ್ಕಳಿಗೆ ಜೈವಿಕ ತಂದೆಯಾಗಿದ್ದಾರೆ, ಈಗ 10 ಮಕ್ಕಳ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಈ ವ್ಯಕ್ತಿ ಜೊತೆ ಡೇಟಿಂಗ್ ಮಾಡಲು ಮಾತ್ರ ಯಾವುದೇ ಮಹಿಳೆಯರು ಮುಂದಾಗುತ್ತಿಲ್ವಂತೆ.

ತಾನು ಇನ್ನೂ 10 ಮಕ್ಕಳ ನಿರೀಕ್ಷೆಯಲ್ಲಿದ್ದೇನೆ ಮತ್ತು ವೀರ್ಯ ದಾನಿಯಾಗುವುದನ್ನು ನಿಲ್ಲಿಸುವ ಯಾವುದೇ ಯೋಜನೆ ಇಲ್ಲ ಎಂದು ಅವರು ಹೇಳಿದ್ದಾರೆ.
22ನೇ ವಯಸ್ಸಿನಿಂದಲೂ ವೀರ್ಯಾಣು ದಾನ ಮಾಡುತ್ತಿರುವ 30 ವರ್ಷದ ಕ್ಯಾಲಿಫೋರ್ನಿಯಾದ ಕೈಲ್ ಕಾರ್ಡಿ, ಮಹಿಳೆಯರು ತನ್ನನ್ನು ಬಳಿ ಕೇವಲ ವೀರ್ಯಕ್ಕಾಗಿ ಸಂಪರ್ಕಿಸುತ್ತಿದ್ದಾರೆ. ಆದರೆ, ಯಾವುದೇ ಮಹಿಳೆ ಈ ತನ್ನೊಂದಿಗೆ ಡೇಟಿಂಗ್ ಮಾಡಲು ಹಾಗೂ ಮದುವೆಯಾಗಲು ಮುಂದೆ ಬರುತ್ತಿಲ್ಲ ಎಂದು ಬೇಸರದಿಂದ ಹೇಳಿದ್ದಾರೆ.

ತಮ್ಮ ಸ್ವಂತ ಜೀವನದ ಮೇಲೆ ಬೀರಿದ ಪ್ರಭಾವದ ಹೊರತಾಗಿಯೂ ಅನೇಕ ಮಹಿಳೆಯರ ಮಗುವಿನ ಆಸೆ ಈಡೇರಿದ್ದಕ್ಕೆ ನನಗೆ ಸಂತಸವಿದೆ ಎಂದು ಕೈಲ್ ಹೇಳಿಕೊಂಡಿದ್ದಾರೆ. ಕೈಲ್ ಈವರೆಗೆ 1,000 ಕ್ಕೂ ಹೆಚ್ಚು ಮಹಿಳೆಯರಿಗೆ ಸಹಾಯ ಮಾಡಿರುವುದಾಗಿ ಅಂದಾಜಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಆದರೆ ಅವರಿಗೆ ಇರುವ ಚಿಂತೆ ಎಂದರೆ ಯಾವುದೇ ಮಹಿಳೆ ಅಥವಾ ಹುಡುಗಿ ಅವರ ಜೊತೆ ಡೇಟಿಂಗ್‌ ಮಾಡುವುದಿಲ್ಲ ಅಥವಾ ಮದುವೆಯಾಗುವುದಿಲ್ಲ ಎಂದು.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement