ಕುಮಟಾ; ಕುಡಿಯುವ ನೀರಿನ ಯೋಜನೆಗೆ 120 ಕೋಟಿ ರೂ ಮಂಜೂರು: .ಶಾಸಕ  ದಿನಕರ ಶೆಟ್ಟಿ

ಕುಮಟಾ; ತಾಲೂಕಿನ ಹೆಗಡೆ ಜಿಲ್ಲಾ ಪಂಚಾಯತವ್ಯಾಪ್ತಿಯ ೯ ಗ್ರಾ.ಪಂ ಸಂಬಂಧಿಸಿದಂತೆ ಪ್ರತ್ಯೇಕ ಕುಡಿಯುವ ನೀರಿನ ಯೋಜನೆಗೆ 120 ಕೋಟಿ ಮಂಜೂರಾಗಿದ್ದು ಸದ್ಯದಲ್ಲೇ ಟೆಂಡರ್ ಕರೆಯಲಾಗುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.
ಅವರು ಹಾಳಾಗಿರುವ ಬರ್ಸಗುಣಿ ರಸ್ತೆಯನ್ನು ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಾಳಾಗಿರುವ ರಸ್ತೆಯ ೧೨೦ ಮೀಟರ್‌ ಉದ್ದದ ರಸ್ತೆಯನ್ನು 15 ಲಕ್ಷ ರೂ.ಗಳ ವೆಚ್ಚದಲ್ಲಿ ಸಿಮೆಂಟ್ ರಸ್ತೆಯಾಗಿ ಮರುನಿರ್ಮಾಣ ಮಾಡಲಾಗುತ್ತದೆ. .ಕಳೆದ ವರ್ಷದಿಂದೀಚೆಗೆ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ರಸ್ತೆ ಇತ್ಯಾದಿ ಕಾಮಗಾರಿಗೆ 700 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಕುಮಟಾ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಹೆಗಡೆ ಜಿಲ್ಲಾ ಪಂಚಾಯತ ವ್ಯಾಪ್ತಿಯ ಹಣ್ಣೇಮಠ, ಮದ್ಗುಣಿ, ಕಾರಹಿತ್ತಲು, ಹೊಲನಗದ್ದೆ ಇತ್ಯಾದಿ ೯ ಗ್ರಾ.ಪಂ ವ್ಯಾಪ್ತಿಯ ಜನರು 1988ರಿಂದಲೂ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರು. ಇದನ್ನು ತಪ್ಪಿಸುವುದಕ್ಕಾಗಿ ಶಾಶ್ವತ ಕುಡಿಯುವ ನೀರಿನ ಯೋಜನೆ ಮಂಜೂರಾಗಿದೆ. ಕತ್ತಗಾಲದಲ್ಲಿರುವ ನದಿಗೆ ಚೆಕ್‌ಡ್ಯಾಂ ನಿರ್ಮಾಣ ಮಾಡಿ ಅಲ್ಲಿಂದ ಕುಡಿಯುವ ನೀರನ್ನು ಪೂರೈಸಲಾಗುವುದು ಎಂದು ಹೇಳಿದರು.
ಬಿಜೆಪಿ ಸರ್ಕಾರವು ಜನರ ಅಭ್ಯುದಯಕ್ಕಾಗಿಯೇ ಇರುವಂತಹದ್ದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗ್ರಾಮೀಣ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಜನರು ಅಭಿವೃದ್ಧಿಯಾದರೆ ನಮ್ಮನ್ನು ಆರಿಸಿದ್ದಕ್ಕೆ ಸಾರ್ಥಕತೆ ಇರುತ್ತದೆ. ಮುಂದಿನ ದಿಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನೂ ಹೆಚ್ಚಿನ ಅನುದಾನ ತರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಶ್ರೀಕಾಂತ ಮಡಿವಾಳ, ರಾಘವೇಂದ್ರ ಪಟಗಾರ, ತಾಪಂ ಸದಸ್ಯೆ ವೀಣಾ ಭಟ್ಟ, ನಾರಾಯಣ ಪಟಗಾರ, ಗೋವಿಂದ ಪಟಗಾರ ಮತ್ತಿತರರಿದ್ದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement