ಭಾರೀ ಗಾಳಿ ಹೊಡೆತಕ್ಕೆ ಸಿಲುಕಿದ ಸ್ಪೈಸ್​ಜೆಟ್​​​ ವಿಮಾನದೊಳಗೆ ಜನ ಭಯಭೀತ, ಚೆಲ್ಲಾಪಿಲ್ಲಿಯಾದ ವಸ್ತುಗಳು | ದೃಶ್ಯ ವೀಡಿಯೊದಲ್ಲಿ ಸೆರೆ

ಕೋಲ್ಕತ್ತಾ: ಮುಂಬೈ ನಿಂದ, ಪಶ್ಚಿಮಬಂಗಾಳದ ದುರ್ಗಾಪುರಕ್ಕೆ ಹೊರಟಿದ್ದ ಸ್ಪೈಸ್​ ಜೆಟ್ವಿಮಾನ ಭಾನುವಾರ ಸಂಜೆ ಬಹುದೊಡ್ಡ ದುರಂತದಿಂದ ಸ್ವಲ್ಪದರಲ್ಲೇ ಪಾರಾಗಿದೆ.
ಪೈಲಟ್​​ಗಳ ಸಮಯಪ್ರಜ್ಞೆಯಿಂದ 188 ಮಂದಿಯ ಪ್ರಾಣ ಉಳಿದಿದ್ದು, ದುರ್ಗಾಪುರ ಏರ್​​​ಪೋರ್ಟ್​ನಲ್ಲಿ ಲ್ಯಾಂಡ್​ ಆಗುವಾಗ ಸುಂಟರಗಾಳಿಯ ಪ್ರಭಾವಕ್ಕೆ ಸಿಲುಕಿದ ಕೆಲಕಾಲ ವಿಮಾನ ತೀವ್ರ ಅಲುಗಾಟಕ್ಕೆ ತುತ್ತಾಯಿತು.

ಗಾಳಿಗೆ ಸಿಲುಕಿದ ಅಲುಗಾಡಿದ ವಿಮಾನದ ಒಳಗಿನ ದೃಶ್ಯದ ವೀಡಿಯೊ ಈಗ ಹೊರಬಿದ್ದಿದೆ. ವಿಮಾನದೊಳಗಿದ್ದ ಪ್ರಯಾಣಿಕರಿಗೆ ಸೇರಿದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕ್ಯಾಬಿನ್ ಬ್ಯಾಗೇಜ್​ ಪ್ರಯಾಣಿಕರ ಮೇಲೆ ಕುಸಿದಿದೆ. ಆಕ್ಸಿಜನ್​ ಮಾಸ್ಕ್​ಗಳೆಲ್ಲ ಚೆಲ್ಲಾಪಿಲ್ಲಿಯಾಗಿರುವ ದೃಶ್ಯ ಸೆರೆಯಾಗಿದೆ.

ಘಟನೆಯಲ್ಲಿ 14 ಪ್ರಯಾಣಿಕರು, ಮೂವರು ಕ್ಯಾಬಿನ್​ ಸಿಬ್ಬಂದಿ ಸೇರಿ 17 ಮಂದಿ ಗಾಯಗೊಂಡಿದ್ದಾರೆ. ಕೆಲವು ವಸ್ತುಗಳು ಹಾಗೂ ಲಗೇಜ್ಗಳು ಬಿದ್ದು ಕೆಲವರ ತಲೆಗೆ ಗಾಯಗಳಾಗಿದೆ. ಇನ್ನೊಬ್ಬ ಪ್ರಯಾಣಿಕನಿಗೆ ಬೆನ್ನುಮೂಳೆಗೆ ಹೊಡೆತ ಬಿದ್ದಿದೆ​ ಎಂದು ವಾಯುಯಾನ ನಿಯಂತ್ರಕ ಸಂಸ್ಥೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮಾಹಿತಿ ನೀಡಿದೆ. ಗಾಯಗೊಂಡ ಎಲ್ಲರಿಗೂ ದುರ್ಗಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಸ್ಪೈಸ್​ಜೆಟ್​ ವಕ್ತಾರ ಮಾಹಿತಿ ನೀಡಿದ್ದಾರೆ.
ಸ್ಪೈಸ್​ಜೆಟ್​​ನ ಬೋಯಿಂಗ್​ ಬಿ737 ನ SG-945 ವಿಮಾನ ಮೇ 1ರಂದು ಮುಂಬೈನಿಂದ ದುರ್ಗಾಪುರಕ್ಕೆ ಹೋಗುತ್ತಿತ್ತು. ದುರ್ಗಾಪುರದಲ್ಲಿ ಲ್ಯಾಂಡ್ ಆಗುವ ಹೊತ್ತಿಗೆ ಭಾರೀ ಗಾಳಿಗೆ ಸಿಲುಕಿ ಅಲುಗಾಡಲು ಆರಂಭಿಸಿತು. ಈ ಘಟನೆಯಲ್ಲಿ ಸುಮಾರು 12 ಪ್ರಯಾಣಿಕರಿಗೆ ಗಾಯವಾಗಿದೆ.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement