ಮೈಸೂರು ಬಾರ್‌ನಲ್ಲಿ ನಾಲ್ಕೈದು ಜನರಿಂದ ಬಿಯರ್ ಬಾಟಲ್, ಮಚ್ಚಿನಿಂದ ವ್ಯಕ್ತಿ ಮೇಲೆ ಹಲ್ಲೆ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

posted in: ರಾಜ್ಯ | 0

ಮೈಸೂರಿನ ಬನ್ನೂರು ಬಡಾವಣೆಯ ಬಾರ್‌ವೊಂದರಲ್ಲಿ ಪ್ರತಿಸ್ಪರ್ಧಿ ಗ್ಯಾಂಗ್‌ನ ನಾಲ್ಕೈದು ಮಂದಿ ಸದಸ್ಯರು ಬಿಯರ್ ಬಾಟಲಿಗಳು ಮತ್ತು ಮಚ್ಚಿನಿಂದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ಬಾರ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬನ್ನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ.ಮತ್ತೊಂದು ಗ್ಯಾಂಗ್‌ಗೆ ಸೇರಿದ ದಯಾನಂದ್ ಕೂಡ ಹಿಸ್ಟರಿ ಶೀಟರ್‌ ಆಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಮೈಸೂರು ಜಿಲ್ಲಾ ಅಧೀಕ್ಷಕ (ಎಸ್‌ಪಿ) ಆರ್. ಚೇತನ್, “ಇಬ್ಬರು ಆರೋಪಿಗಳನ್ನು ಇದುವರೆಗೆ ಬಂಧಿಸಲಾಗಿದೆ, ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ, ಅವರು ರೌಡಿ ಆಗಿರುವ ದಯಾನಂದನೊಂದಿಗೆ ಹಳೆಯ ವೈಷಮ್ಯವನ್ನು ಹೊಂದಿದ್ದರು ಎಂದು ಹೇಳಿದ್ದಾರೆ.
ದಯಾನಂದ್ ದೂರಿನಲ್ಲಿ ಪ್ರಮುಖವಾಗಿ ಮೂವರು ಮತ್ತು ಇತರ ಕೆಲವರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ತನಿಖೆ ನಡೆಯುತ್ತಿದೆ. ದಾಳಿಗೆ ಮುಖ್ಯ ಕಾರಣ ಇನ್ನೂ ತಿಳಿದುಬಂದಿಲ್ಲ. ನಾವು ತಲೆಮರೆಸಿಕೊಂಡಿರುವವರ ಹುಡುಕಾಟದಲ್ಲಿದ್ದೇವೆ” ಎಂದು ಅವರು ಹೇಳಿದರು.

ಓದಿರಿ :-   ಮೇಕೆದಾಟು ಪಾದಯಾತ್ರೆ : ಸಿದ್ದರಾಮಯ್ಯ, ಡಿಕೆಶಿ ಸೇರಿ 29 ನಾಯಕರಿಗೆ ಕೋರ್ಟ್​ ಸಮನ್ಸ್

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ