ಮಹಾರಾಷ್ಟ್ರ ಸಿಎಂ ಮನೆ ಎದುರು ಹನುಮಾನ್ ಚಾಲೀಸಾ ಪಠಣ ಪ್ರಕರಣ: ಸಂಸದ ನವನೀತ್ ರಾಣಾ, ಶಾಸಕ ರವಿ ರಾಣಾಗೆ ಮುಂಬೈ ಕೋರ್ಟಿನಿಂದ ಜಾಮೀನು

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮನೆಯ ಹೊರಗೆ ಹನುಮಾನ್ ಚಾಲೀಸಾ ಪಠಿಸಲು ಯತ್ನಿಸಿದ ಆರೋಪದ ಮೇಲೆ ದೇಶದ್ರೋಹದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದಮಹಾರಾಷ್ಟ್ರ ಶಾಸಕ ರವಿ ರಾಣಾ ಮತ್ತು ಸಂಸದೆ ನವನೀತ್ ಕೌರ್ ರಾಣಾ ದಂಪತಿಗೆ ಮುಂಬೈ ಸೆಷನ್ಸ್ ನ್ಯಾಯಾಲಯ ಬುಧವಾರ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಬಾರ್ & ಬೆಂಚ್ ಪ್ರಕಾರ, ತಲಾ 50,000 ರೂ.ಗಳ ಜಾಮೀನು ಬಾಂಡ್ ನೀಡಿದ ನಂತರ ಅವರಿಗೆ ಜಾಮೀನು ನೀಡಲಾಗುತ್ತದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ ‘ಮಾತೋಶ್ರೀ’ ಹೊರಗೆ ಶಾಸಕ ರವಿ ರಾಣಾ ಮತ್ತು ಸಂಸದೆ ನವನೀತ್ ಕೌರ್ ರಾಣಾ ದಂಪತಿ ತಮ್ಮ ಬೆಂಬಲಿಗರೊಂದಿಗೆ ಹನುಮಾನ್ ಚಾಲೀಸಾ ಪಠಣ ಮಾಡಲು ಪ್ರಯತ್ನಿಸಿದ ನಂತರ ಮಹಾರಾಷ್ಟ್ರದಲ್ಲಿ ಕೋಲಾಹಲವನ್ನು ಸೃಷ್ಟಿಯಾಗಿತ್ತು.
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153A ಅಡಿಯಲ್ಲಿ ದಂಪತಿ ವಿರುದ್ಧ ಮೊದಲು ಪ್ರಕರಣ ದಾಖಲಿಸಲಾಗಿತ್ತು.

ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ರಾಣಾ ದಂಪತಿ ತಮ್ಮ ಯೋಜಿತ ಪ್ರತಿಭಟನೆ ಹಿಂತೆಗೆದುಕೊಂಡ ನಂತರ ಬಂಧನ ನಡೆದಿತ್ತು.
ಏಪ್ರಿಲ್ 23 ರಂದು ದಂಪತಿಯನ್ನು ಪೊಲೀಸರು ಬಂಧಿಸಿದ್ದರು. ಬಾಂಬೆ ಹೈಕೋರ್ಟ್ ಏಪ್ರಿಲ್ 25 ರಂದು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿತು.
ವಿಚಾರಣೆಯನ್ನು ಮೊದಲು ನ್ಯಾಯಾಲಯವು ಏಪ್ರಿಲ್ 30 ರಂದು, ಮೇ 2 ಕ್ಕೆ ಮತ್ತು ನಂತರ ಮೇ 4 ಕ್ಕೆ ಮುಂದೂಡಿದ ನಂತರ ಜಾಮೀನು ಮಂಜೂರು ಮಾಡಲಾಗಿದೆ.
ನ್ಯಾಯಾಲಯದಲ್ಲಿ ರಾಣಾಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಅಬಾದ್ ಪೊಂಡಾ, ಮಾತೋಶ್ರೀಗೆ ಹೋಗುವುದು ‘ದೇಶದ್ರೋಹಿ ಕೃತ್ಯ’ ಅಲ್ಲ ಎಂದು ವಾದಿಸಿದ್ದರು.

ಓದಿರಿ :-   ಟೋಕಿಯೊದಲ್ಲಿ ಜಪಾನಿನ ಮಕ್ಕಳೊಂದಿಗೆ ಪ್ರಧಾನಿ ಮೋದಿ ಹಿಂದಿ ಸಂವಾದ ವೈರಲ್ | ವೀಕ್ಷಿಸಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ