ಹಿರಿಯ ರಂಗಭೂಮಿ ಕಲಾವಿದೆ ಲಕ್ಷ್ಮೀ ಬಾಯಿ ಏಣಗಿ ನಿಧನ

posted in: ರಾಜ್ಯ | 0

ಧಾರವಾಡ: ಖ್ಯಾತ ರಂಗಭೂಮಿ ಕಲಾವಿದೆ ಹಾಗೂ ದಿ. ಏಣಗಿ ಬಾಳಪ್ಪ ಅವರ ಪತ್ನಿ ಶ್ರೀಮತಿ ಲಕ್ಷ್ಮಿಬಾಯಿ ಏಣಗಿ (96) ಮಂಗಳವಾರ ಇಲ್ಲಿನ ರಜತಗಿರಿ ನಿವಾಸದಲ್ಲಿ ನಿಧನರಾದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ನೂರಕ್ಕೂ ಹೆಚ್ಚು ರಂಗ ಸನ್ಮಾನಗಳಿಗೆ ಭಾಜನರಾಗಿದ್ದರು. 1940-50 ರ ದಶಕದಲ್ಲಿ ಕನ್ನಡ ರಂಗಭೂಮಿಯಲ್ಲಿ ನಟಿಯಾಗಿ ಹೆಸರು ಪಡೆದಿದ್ದ ಅವರು ಕರ್ನಾಟಕದ ಏಕೀಕರಣ ಚಳುವಳಿ ಆರಂಭವಾದಾಗ ತಮ್ಮ ನಾಟಕಗಳ ಮೂಲಕವೇ ಕನ್ನಡ ಜಾಗೃತಿ ಕೆಲಸ ಮಾಡಿದ್ದರು.

ಸಿಂಗಾರೆವ್ವ, ಅರಮನೆ ಸೇರಿದಂತೆ ಹತ್ತಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಅವರು ಇಡೀ ತಮ್ಮ ಜೀವನವನ್ನೇ ರಂಗಭೂಮಿಗಾಗಿ ಮುಡುಪಾಗಿಟ್ಟಿದ್ದರು.
ಚಿತ್ರನಟ ದಿ. ನಟರಾಜ ಏಣಗಿ ಇವರ ಪುತ್ರ. ಮಧ್ಯಾಹ್ನ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ಐತಿಹಾಸಿಕ ಚಿತ್ರದುರ್ಗ ಮುರುಘಾ ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ಆಯ್ಕೆ
advertisement

ನಿಮ್ಮ ಕಾಮೆಂಟ್ ಬರೆಯಿರಿ