ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವರನ ಕೈಗೇ ಕೋಳ ತೊಡಿಸಿ, ಜೈಲಿಗೆ ಕಳುಹಿಸಿದ ಮಹಿಳಾ ಸಬ್ ಇನ್ಸ್ ಪೆಕ್ಟರ್….!

ಗುವಾಹತಿ: ತಾಳಿ ಕಟ್ಟಿಸಿಕೊಳ್ಳಬೇಕಿದ್ದ ವರನ ಕೈಗೇ ಆ ಡಬಲ್ ಸ್ಟಾರ್ ಮಹಿಳಾ ಸಬ್ ಇನ್ಸ್ ಪೆಕ್ಟರ್ ಕೋಳ ತೊಡಿಸಿ, ಜೈಲಿಗೆ ಕಳುಹಿಸಿದ್ದಾರೆ.ಅಸ್ಸಾಂನ ಡೇರ್‌ಡೆವಿಲ್ ಮಹಿಳಾ ಪೋಲೀಸ್ ಅಧಿಕಾರಿ, ಕೆಲವು ತಿಂಗಳ ಹಿಂದೆ ಶಾಸಕರೊಬ್ಬರನ್ನು ಎದರಿಸುವ ಮೂಲಕ ಮಾಧ್ಯಮಗಳ ಗಮನ ಸೆಳೆದಿದ್ದರು, ಈಗ ವಂಚನೆ ಆರೋಪದ ಮೇಲೆ ತಾನು ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ವರನನ್ನೇ ಬಂಧಿಸಿದ್ದಾರೆ…!
ತನ್ನ ಮದುವೆ ನಿಶ್ಚಿತಾರ್ಥದ ನಂತರವೇ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಜುನ್ಮೋನಿ ರಾಭಾ ಅವರಿಗೆ ಆ ವ್ಯಕ್ತಿ ವಂಚಕ ಎಂದು ತಿಳಿದುಬಂದಿತು. ಜುನ್ಮೋನಿ ದಾಖಲಿಸಿದ ಎಫ್‌ಐಆರ್ ಆಧರಿಸಿ ಆರೋಪಿ ರಾಣಾ ಪೊಗಾಗ್‌ನನ್ನು ಬಂಧಿಸಲಾಗಿದೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.

ಪೊಗಾಗ್ ತನ್ನನ್ನು ಜನರ ಮುಂದೆ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ONGC) ಅಧಿಕಾರಿ ಎಂದು ಗುರುತಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಜುನ್ಮೋನಿಯನ್ನು ಮೊದಲು ಭೇಟಿಯಾದಾಗ, ಅವನು ತನ್ನನ್ನು ನೈಸರ್ಗಿಕ ಅನಿಲ ನಿಗಮದ (ONGC) ಅಧಿಕಾರಿ ಎಂದು ಗುರುತಿಸಿಕೊಂಡಿದ್ದ. ಅವರಿಬ್ಬರ ಮದುವೆ ನವೆಂಬರ್‌ನಲ್ಲಿ ಮದುವೆಯಾಗಬೇಕಿತ್ತು. ಆದರೆ ಒಎನ್‌ಜಿಸಿಯಲ್ಲಿ ಉದ್ಯೋಗ ಮತ್ತು ಗುತ್ತಿಗೆ ನೀಡುವುದಾಗಿ ಭರವಸೆ ನೀಡಿ ಕೆಲವರನ್ನು ವಂಚಿಸಿದ್ದಾರೆ ಎಂದು ಜುನ್‌ಮೋನಿ ತಿಳಿದುಕೊಂಡರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮದವರಿಗೆ ತಿಳಿಸಿದರು.
ಪೊಲೀಸ್‌ ಅಧಿಕಾರಿಯಾಗಿ ಜುನ್ಮೋನಿ ರಾಭಾ ತಾನು ನಿಶ್ಚಿತಾರ್ಥ ಮಾಡಿಕೊಂಡಿದ್ದ ವರನ ಬ್ಯಾಗ್ ಪರಿಶೀಲಿಸಿದ್ದರು ಮತ್ತು ONGC ಯ ಕೆಲವು ನಕಲಿ ಸೀಲುಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡರು. ನಂತರ ಎಫ್‌ಐಆರ್‌ ದಾಖಲಿಸಿದ್ದಾರೆ. ನಾವು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಕಳೆದ ವರ್ಷ ನಡೆದ ರಾಜ್ಯ ಚುನಾವಣೆಯ ನಂತರ ಆರೋಪಿಯ ಕುಟುಂಬ ಸದಸ್ಯರು ಆಕೆಯ ನಿವಾಸಕ್ಕೆ ಭೇಟಿ ನೀಡಿದ್ದರು, ನಂತರ ಅಕ್ಟೋಬರ್ 8 ರಂದು ಆಕೆಯ ನಿಶ್ಚಿತಾರ್ಥವಾಗಿತ್ತು. ಆಗ ತಾನು ಮಜುಲಿ ನದಿ ದ್ವೀಪ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಜುನ್ಮೋನಿ ಹೇಳಿದರು.
ನಿಶ್ಚಿತಾರ್ಥದ ನಂತರ, ನಾನು ನನ್ನ ಪೋಸ್ಟಿಂಗ್ ಸ್ಥಳಕ್ಕೆ ಹಿಂತಿರುಗಿದೆ. ಅವನು (ದಕ್ಷಿಣ ಅಸ್ಸಾಂನ) ಸಿಲ್ಚಾರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಸುಳ್ಳು ಹೇಳಿದ. ಅವನು ಕರ್ತವ್ಯಕ್ಕೆ ವರದಿ ಮಾಡದಿದ್ದಾಗ, ನಾನು ಕಾರಣಗಳನ್ನು ಕೇಳಿದ್ದೆ ಆದರೆ ನನಗೆ ಅವನು ಇದು ಬೇಕೇ ಎಂದು ಕೇಳಿದ ಎಂದು ಈಗ ನಾಗೋನ್ ಪೊಲೀಸ್ ಮಹಿಳಾ ಸೆಲ್‌ನ ಇನ್‌ಸ್ಪೆಕ್ಟರ್ ಆಗಿರುವ ಜುನ್ಮೋನಿ ಹೇಳಿದ್ದಾರೆ.
ಕಣ್ಣು ತೆರೆಸಲು” ಸಹಾಯ ಮಾಡಿದ ಮೂವರು ವ್ಯಕ್ತಿಗಳಿಗೆ ಮಹಿಳಾ ಇನ್‌ಸ್ಪೆಕ್ಟರ್ ಧನ್ಯವಾದ ಹೇಳಿದ್ದಾರೆ,

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement