ಬೆಂಗಳೂರು: ರಿಲಯನ್ಸ್ ಜಿಯೋ ಹೊಸದಾಗಿ ನಾಲ್ಕು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಲಾಂಚ್ ಮಾಡಿದೆ. ರೂ 151, ರೂ 333, ರೂ 583 ಮತ್ತು ರೂ 783 ಯೋಜನೆಗಳಾಗಿದ್ದು, ಈ ಎಲ್ಲಾ ಯೋಜನೆಗಳು ಬಳಕೆದಾರರಿಗೆ ಮೂರು ತಿಂಗಳ ಉಚಿತ ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ನೀಡುತ್ತದೆ.
ಡಿಸ್ನಿ+ ಹಾಟ್ ಸ್ಟಾರ್ ಜೊತೆಗಿನ ಈ ಪಾಲುದಾರಿಕೆಯ ಮೂಲಕ, ಜಿಯೋ ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಆಯ್ದ ರೀಚಾರ್ಜ್‌ಗಳೊಂದಿಗೆ ಡಿಸ್ನಿ+ ಹಾಟ್ ಸ್ಟಾರ್ 3-ತಿಂಗಳ ಮೊಬೈಲ್ ಚಂದಾದಾರಿಕೆಯನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನೀಡಲು ಮುಂದಾಗಿದೆ.
ಗ್ರಾಹಕರು 3 ತಿಂಗಳವರೆಗೆ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಪಡೆದಲು ವಿವಿಧ ಜಿಯೋ ರೀಚಾರ್ಜ್ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆ ಮಾಡಿದ ಪ್ಲಾನ್ ನ ಆಧಾರದ ಮೇಲೆ ಜಿಯೋ ಬಳಕೆದಾರರು ಅನಿಯಮಿತ ಧ್ವನಿ, ಡೇಟಾ, ಎಸ್ ಎಮ್ ಎಸ್ ಮತ್ತು ಇತರ ಪ್ರಯೋಜನಗಳನ್ನು ಸಹ ಪಡೆಯಬಹುದು ಎಂದು ಹೇಳಲಾಗಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಪ್ಲಾನ್‌ಗಳ ವಿವರ
151ರೂ. ರೀಚಾರ್ಜ್ ಪ್ಲಾನ್:
151 ರೂ.ಗಳ ಯೋಜನೆಯು ಡೇಟಾ-ಮಾತ್ರ ಯೋಜನೆಯಾಗಿದ್ದು, ಬಳಕೆದಾರರಿಗೆ 8GB ಡೇಟಾವನ್ನು ನೀಡುತ್ತದೆ. ಈ ಯೋಜನೆಯ ಲಾಭ ಪಡೆಯಲು, ಬಳಕೆದಾರರಿಗೆ ಸಕ್ರಿಯ ಬೇಸ್ ಪ್ಲಾನ್ ಕೂಡ ಅಗತ್ಯವಿದೆ. ಈ ಯೋಜನೆಯು ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಮೂರು ತಿಂಗಳ ಚಂದಾದಾರಿಕೆಯನ್ನು ಬಂಡಲ್ ಮಾಡುತ್ತದೆ.
333 ರೂ. ರೀಚಾರ್ಜ್ ಪ್ಲಾನ್:
ಈ ಪ್ಲಾನ್ ರೀಚಾರ್ಜ್ ಮಾಡಿಸುವ ಗ್ರಾಹಕರು 28 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ ಉಚಿತವಾಗಿ 100 SMS ಕಳುಹಿಸಬಹುದಾಗಿದೆ. ಅಲ್ಲದೆ, ದಿನಕ್ಕೆ 1.5GB 4G ವೇಗದ ಡೇಟಾದೊಂದಿಗೆ ಹೊಸ ಬಳಕೆದಾದರರು ಉಚಿತವಾಗಿ ಪ್ರೈಮ್ ಸದಸ್ಯತ್ವ ಪಡೆದುಕೊಳ್ಳಲಿದ್ದಾರೆ. ಇದಲ್ಲದೇ ಜಿಯೋ ಆಪ್ ಗಳನ್ನು ಉಚಿತವಾಗಿ ಬಳಸಿಕೊಳ್ಳುವುದರ ಜೊತೆಗೆ ಈ ಯೋಜನೆಯು ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಮೂರು ತಿಂಗಳ ಚಂದಾದಾರಿಕೆಯನ್ನು ಬಂಡಲ್ ಮಾಡುತ್ತದೆ.
583ರೂ. ರೀಚಾರ್ಜ್ ಪ್ಲಾನ್:
ಈ ಪ್ಲಾನ್ ರೀಚಾರ್ಜ್ ಮಾಡಿಸುವ ಗ್ರಾಹಕರು 56 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ ಉಚಿತವಾಗಿ 100 SMS ಕಳುಹಿಸಬಹುದಾಗಿದೆ. ಅಲ್ಲದೇ ದಿನಕ್ಕೆ 1.5GB 4G ವೇಗದ ಡೇಟಾ ಪಡೆಬಹುದು. ಈ ಪ್ಲಾನ್ ನಲ್ಲಿ ಹೊಸ ಬಳಕೆದಾರರು 99 ರೂ.ಪಾವತಿಸಿ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಬಹುದು, ಹಳೇ ಬಳಕೆದಾರರಿಗೆ ಯಾವುದೇ ಶುಲ್ಕವಿಲ್ಲ . ಇದಲ್ಲದೇ ಜಿಯೋ ಆಪ್ ಗಳನ್ನು ಉಚಿತವಾಗಿ ಬಳಸಿಕೊಳ್ಳುವುದರ ಜೊತೆಗೆ ಈ ಯೋಜನೆಯು ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಮೂರು ತಿಂಗಳ ಚಂದಾದಾರಿಕೆಯನ್ನು ಬಂಡಲ್ ಮಾಡುತ್ತದೆ.
783 ರೂ. ರೀಚಾರ್ಜ್ ಪ್ಲಾನ್:
ಈ ಪ್ಲಾನ್ ರೀಚಾರ್ಜ್ ಮಾಡಿಸುವ ಗ್ರಾಹಕರು 84 ದಿನಗಳ ವ್ಯಾಲಿಡಿಟಿಯೊಂದಿಗೆ ದಿನಕ್ಕೆ ಉಚಿತವಾಗಿ 100 SMS ಕಳುಹಿಸಬಹುದಾಗಿದೆ. ಅಲ್ಲದೇ ದಿನಕ್ಕೆ 1.5GB 4G ವೇಗದ ಡೇಟಾ ಪಡೆಬಹುದು. ಈ ಪ್ಲಾನ್ ನಲ್ಲಿ ಹೊಸ ಬಳಕೆದಾರರು 99 ರೂ. ಪಾವತಿಸಿ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಬಹುದು, ಹಳೇ ಬಳಕೆದಾರರಿಗೆ ಯಾವುದೇ ಶುಲ್ಕವಿಲ್ಲ . ಇದಲ್ಲದೇ ಜಿಯೋ ಆಪ್ ಗಳನ್ನು ಉಚಿತವಾಗಿ ಬಳಸಿಕೊಳ್ಳುವುದರ ಜೊತೆಗೆ ಈ ಯೋಜನೆಯು ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಮೂರು ತಿಂಗಳ ಚಂದಾದಾರಿಕೆಯನ್ನು ಬಂಡಲ್ ಮಾಡುತ್ತದೆ.
ತಮ್ಮ 3-ತಿಂಗಳ ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯನ್ನು ಆನಂದಿಸುತ್ತಿರುವ ಜಿಯೋ ಬಳಕೆದಾರರು ನಿರಂತರವಾಗಿ ಸಕ್ರಿಯ ಯೋಜನೆಯಲ್ಲಿರಬೇಕು. ಅನ್ವಯವಾಗುವ ರೀಚಾರ್ಜ್‌ನ ಖರೀದಿಯ ದಿನಾಂಕದಂದು ವಾರ್ಷಿಕ ಚಂದಾದಾರಿಕೆಯು ಪ್ರಾರಂಭವಾಗುತ್ತದೆ ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ