ಪಾಕಿಸ್ತಾನ್‌: ನೃತ್ಯ, ಮಾಡೆಲಿಂಗ್ ಅನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಸಹೋದರಿಯನ್ನೇ ಗುಂಡಿಕ್ಕಿ ಕೊಂದ ಯುವಕ

ಲಾಹೋರ್: ಪಾಕಿಸ್ತಾನದಲ್ಲಿ ಮರ್ಯಾದೆ ಹತ್ಯೆಯ ಮತ್ತೊಂದು ಶಂಕಿತ ಪ್ರಕರಣದಲ್ಲಿ, ಪಂಜಾಬ್ ಪ್ರಾಂತ್ಯದಲ್ಲಿ 21 ವರ್ಷದ ಯುವತಿಯೊಬ್ಬಳು ನೃತ್ಯ ಮತ್ತು ಮಾಡೆಲಿಂಗ್ ವೃತ್ತಿಜೀವನ ಮುಂದುವರಿಸಿದ್ದಕ್ಕಾಗಿ ಸ್ವಂತ ಸಹೋದರನೇ ಆಕೆಯನ್ನು ಗುಂಡಿಕ್ಕಿ ಕೊಂದಿದ್ದಾನೆ.
ಪ್ರಾಂತೀಯ ರಾಜಧಾನಿ ಲಾಹೋರ್‌ನಿಂದ 130 ಕಿಮೀ ದೂರದಲ್ಲಿರುವ ರೆನಾಲಾ ಖುರ್ದ್ ಒಕಾರಾ ಮೂಲದ ಸಿದ್ರಾ ಎಂಬ ಯುವತಿ, ಸ್ಥಳೀಯ ಬಟ್ಟೆ ಬ್ರಾಂಡ್‌ಗಾಗಿ ಮಾಡೆಲಿಂಗ್ ಮಾಡುತ್ತಿದ್ದಳು ಮತ್ತು ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಫೈಸಲಾಬಾದ್ ನಗರದ ಚಿತ್ರಮಂದಿರಗಳಲ್ಲಿ ನೃತ್ಯ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಸಿದ್ರಾಳ ಪೋಷಕರು ಇದು”ಕುಟುಂಬ ಸಂಪ್ರದಾಯದ ವಿರುದ್ಧವಾಗಿದ್ದು, ಹೀಗಾಗಿ ತನ್ನ ವೃತ್ತಿಯನ್ನು ತೊರೆಯುವಂತೆ ಒತ್ತಾಯಿಸಿದ್ದರು, ಆದರೆ ಸಿದ್ರಾ ಅದನ್ನು ಮುಂದುವರಿಸಲು ನಿರ್ಧರಿಸಿದ್ದಳು. ಕಳೆದ ವಾರ ಸಿದ್ರಾ ತನ್ನ ಕುಟುಂಬದೊಂದಿಗೆ ಈದ್ ಆಚರಿಸಲು ಫೈಸಲಾಬಾದ್‌ನಿಂದ ಮನೆಗೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ, ಆಕೆಯ ಪೋಷಕರು ಮತ್ತು ಸಹೋದರ ಹಮ್ಜಾ ಅವಳಿ ವೃತ್ತಿಯ ಬಗ್ಗೆ ಮರ್ಯಾದೆಯ ವಿಷಯವಾಗಿ ಅವಳೊಂದಿಗೆ ಜಗಳವಾಡಿದ್ದಾರೆ. ಅವಳನ್ನು ಥಳಿಸಿದ್ದಾರೆ. ನಂತರ ಹಮ್ಜಾ ಸಹೋದರಿ ಸಿದ್ರಾ ಮೇಲೆ ಗುಂಡು ಹಾರಿಸಿದ್ದು, ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಅಪರಾಧವನ್ನು ಒಪ್ಪಿಕೊಂಡ ಹಮ್ಜಾನನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

ಪೊಲೀಸ್ ಅಧಿಕಾರಿ ಫ್ರಾಝ್ ಹಮೀದ್ ಮಾತನಾಡಿ, ಹಮ್ಜಾ ತನ್ನ ಮೊಬೈಲ್ ಫೋನ್‌ಗೆ ಸಿದ್ರಾ ಮಾಡಿದ ನೃತ್ಯ ಪ್ರದರ್ಶನವನ್ನು ಸಂಬಂಧಿಯೊಬ್ಬರು ಫಾರ್ವರ್ಡ್ ಮಾಡಿದ್ದನ್ನು ನೋಡಿದ ಮೇಲೆ ಕೋಪಗೊಂಡಿದ್ದಾನೆ. ಕೋಪದ ಭರದಲ್ಲಿ ಅವನು ತನ್ನ ಸಹೋದರಿಯನ್ನು ಗುಂಡಿಕ್ಕಿ ಕೊಂದಿರುವುದಾಗಿ ಹಮ್ಜಾ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಅವರು ಹೇಳಿದರು.
ಈ ವರ್ಷದ ಫೆಬ್ರವರಿಯಲ್ಲಿ ಫೈಸಲಾಬಾದ್‌ನಲ್ಲಿ 19 ವರ್ಷದ ಮಹಿಳಾ ನರ್ತಕಿ ಆಯೇಷಾಳನ್ನು ಆಕೆಯ ಮಾಜಿ ಪತಿ ಗುಂಡಿಕ್ಕಿ ಕೊಂದಿದ್ದ.
ಪಾಕಿಸ್ತಾನದಲ್ಲಿ ವಿಶೇಷವಾಗಿ ಉತ್ತರ ಮತ್ತು ಪಶ್ಚಿಮದಲ್ಲಿರುವ ಬುಡಕಟ್ಟು ಪ್ರದೇಶಗಳಿಗೆ ಸಮೀಪವಿರುವ ಪ್ರದೇಶಗಳಲ್ಲಿ ಮರ್ಯಾದೆ ಹತ್ಯೆಯ ಪ್ರಕರಣಗಳು ನಿಯಮಿತವಾಗಿವೆ ನಡೆಯುತ್ತಿವೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement