ಖ್ಯಾತ ನಟಿ ನಯನತಾರಾ-ವಿಘ್ನೇಶ್​ ಶಿವನ್​ ಮದುವೆ ದಿನಾಂಕ ನಿಗದಿ…!

ಚೆನ್ನೈ: ‘ಲೇಡಿ ಸೂಪರ್​ಸ್ಟಾರ್’ ನಯನತಾರಾ ಮತ್ತು ಜನಪ್ರಿಯ ನಿರ್ದೇಶಕ ವಿಘ್ನೇಶ್​ ಶಿವನ್​ ಕಳೆದ ನಾಲ್ಕು ವರ್ಷಗಳಿಂದ ಡೇಟಿಂಗ್​ ಮಾಡುತ್ತಿದ್ದು, ಸದ್ಯದಲ್ಲೇ ಇಬ್ಬರೂ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಬಂದಿದೆ.
ಅವರಿಬ್ಬರೂ ಮದುವೆ ಆಗುವ ಘಳಿಗೆ ಇನ್ನೂ ಬಂದಿಲ್ಲ ಎಂದು ಹೇಳುತ್ತಿರುವಾಗಲೇ ಈ ಸುದ್ದಿಬಂದಿದೆ. ಕೊನೆಗೂ ತಾರಾದಂಪತಿಯ ಮದುವೆಗೆ ದಿನಾಂಕದ ಜತೆಗೆ ಸ್ಥಳವೂ ನಿಗದಿಯಾಗಿದ್ದು, ಬಹುಕಾಲದ ಕುತೂಹಲಕ್ಕೆ ತೆರೆಬಿದ್ದಿದೆ.

ನಯನತಾರಾ ಮತ್ತು ವಿಘ್ನೇಶ್​ ಶಿವನ್ ಜೂನ್​ 9ರಂದು ತಮ್ಮ ಇಷ್ಟದ ಸ್ಥಳವಾದ ತಿರುಪತಿ ದೇವಸ್ಥಾನದಲ್ಲಿ ಮದುವೆ ಆಗಲಿದ್ದಾರಂತೆ. ಇದಾದ ಬಳಿಕ ತಮ್ಮ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಗೆ ಮಾಲ್ಡೀವ್ಸ್​ನಲ್ಲಿ ಮದುವೆ ಪಾರ್ಟಿಯನ್ನು ಆಯೋಜಿಸಿದ್ದಾರೆ ಎಂಬ ಸುದ್ದಿ ಕಾಲಿವುಡ್​ ಗಲ್ಲಿಯಿಂದ ಕೇಳಿಬಂದಿದೆ.
ನಯನಾ ಮತ್ತು ವಿಘ್ನೇಶ್​ ಪದೇಪದೇ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಇಬ್ಬರಿಗೆ ಇದು ಇಷ್ಟವಾದ ಸ್ಥಳ. ವಿಘ್ನೇಶ್​ ನಿರ್ದೇಶನದ ನಯನತಾರಾ, ಸಮಂತಾ ಹಾಗೂ ವಿಜಯ್​ ಸೇತುಪತಿ ನಟನೆಯ ಕಾತುವಾಕುಲ ರೆಂಡು ಕಾದಲ್​ ಸಿನಿಮಾ ಏಪ್ರಿಲ್​ 28ರಂದು ಬಿಡುಗಡೆಯಾಗಿದ್ದು, ಒಳ್ಳೆಯ ರೆಸ್ಪಾನ್ಸ್​ ಪಡೆದುಕೊಂಡಿದೆ. ತಾರಾ  ಜೋಡಿ ಇತ್ತೀಚೆಗಷ್ಟೇ ತಿರುಪತಿಗೆ ಭೇಟಿ ನೀಡಿ ಬಂದಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ವಿಘ್ನೇಶ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.
2015ರಲ್ಲಿ ವಿಘ್ನೇಶ್ ಶಿವನ್ ಅಭಿನಯದ ‘ನಾನೂಂ ರೌಡಿ ಥಾನ್’ ಚಿತ್ರದ ಸೆಟ್‌ನಲ್ಲೇ ನಯನಾ ಮತ್ತು ವಿಘ್ನೇಶ್​ ನಡುವೆ ಪ್ರೇಮಾಂಕುರವಾಗಿತ್ತು ಎಂದು ಹೇಳಲಾಗಿದೆ.

ಓದಿರಿ :-   ಭಾರತದಿಂದ ರಫ್ತು ನಿಷೇಧದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ದಾಖಲೆ ಏರಿಕೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ