ವಿಐಪಿ ಸಂಸ್ಕೃತಿ ಇಲ್ಲ… ಬೆಂಬಲಿಗರ ಮನೆಯ ಕೈಪಂಪ್‌ನಲ್ಲಿ ಸ್ನಾನ ಮಾಡಿದ ಸಚಿವರು | ವೀಕ್ಷಿಸಿ

ನವದೆಹಲಿ: ಪಕ್ಷದ ಕಾರ್ಯಕರ್ತರೊಬ್ಬರ ಮನೆಯಲ್ಲಿ ರಾತ್ರಿ ತಂಗಿದ್ದ ಉತ್ತರ ಪ್ರದೇಶದ ಸಚಿವರೊಬ್ಬರು ಕೈಪಂಪ್‌ನ ನೀರಿನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಈಗ ವೈರಲ್‌ ಆಗಿದೆ.
ಇದು ಸರ್ಕಾರದಲ್ಲಿ ವಿಐಪಿ ಸಂಸ್ಕೃತಿ ಇಲ್ಲ ಎಂದು ಅವರು ತೋರಿಸಿದಂತಿದೆ. ಉತ್ತರ ಪ್ರದೇಶದ ಕೈಗಾರಿಕಾ ಅಭಿವೃದ್ಧಿ ಸಚಿವ ನಂದ ಗೋಪಾಲ್ ಗುಪ್ತಾ ‘ನಂದಿ’ ಅವರು ಶಹಜಹಾನ್‌ಪುರ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಚಿತ್ರೀಕರಿಸಿದ ವೀಡಿಯೊಗಳನ್ನು ಟ್ವೀಟ್ ಮಾಡಿದ್ದಾರೆ. ಒಂದು ಕ್ಲಿಪ್‌ನಲ್ಲಿ, ಅವರು ಹ್ಯಾಂಡ್ ಪಂಪ್ ಬಳಿ ಸ್ನಾನ ಮಾಡುತ್ತಿರುವುದು ಕಂಡುಬರುತ್ತದೆ. ಕ್ಲಿಪ್ ಶಹಜಹಾನ್‌ಪುರ ಜಿಲ್ಲೆಯ ಚಕ್ ಕನ್ಹೌ ಗ್ರಾಮದ್ದಾಗಿದೆ. ತಾವು ಒಂದು ಕಪ್ ಚಹಾದೊಂದಿಗೆ ದಿನವನ್ನು ಪ್ರಾರಂಭಿಸಿದ್ದಾಗಿ ತಿಳಿಸಿದ್ದಾರೆ.

ಟ್ವಿಟರ್ ಥ್ರೆಡ್‌ನಲ್ಲಿ ಮತ್ತೊಂದು ವೀಡಿಯೊದಲ್ಲಿ, ಗುಪ್ತಾ ಅವರು ಸ್ನಾನ ಮಾಡಿದ ನಂತರ ಸಿದ್ಧವಾಗುತ್ತಿದ್ದಾರೆ. ಹಿಂದಿಯಲ್ಲಿ ಬರೆದಿರುವ ಪೋಸ್ಟ್‌ನಲ್ಲಿ, “ಇದು ಯೋಗಿ ಸರ್ಕಾರ ಮತ್ತು ಹಿಂದಿನ ಸರ್ಕಾರಗಳ ನಡುವಿನ ವ್ಯತ್ಯಾಸವಾಗಿದೆ. ಯೋಗಿ ಸರ್ಕಾರ ಮತ್ತು ಸಾಮಾನ್ಯ ಜನರ ನಡುವೆ ಯಾವುದೇ ಅಂತರ ಅಥವಾ ಯಾವುದೇ ವ್ಯತ್ಯಾಸವಿಲ್ಲ. ಈ ಸರ್ಕಾರದಲ್ಲಿ ವಿಐಪಿ ಸಂಸ್ಕೃತಿ ಇಲ್ಲ ಎಂದು ಅವರು ಬರೆದಿದ್ದಾರೆ.

ಕಳೆದ ವಾರ, ಬರೇಲಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಗುಪ್ತಾ ಅವರು ಭರತೌಲ್ ಗ್ರಾಮದ ಒಬ್ಬರ ಮನೆಯಲ್ಲಿ ರಾತ್ರಿ ತಂಗಿದ್ದರು. ಅಲ್ಲಿಯೂ ಕೈ ಪಂಪ್‌ನಿಂದ ಎಳೆದ ನೀರಿನಲ್ಲಿ ಸ್ನಾನ ಮಾಡಲು ಕುಳಿತ ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಭೇಟಿಯ ಸಮಯದಲ್ಲಿ, ನಂದಗೋಪಾಲ್ ಗುಪ್ತ ‘ನಂದಿ’ ಅವರು ಪ್ರದೇಶಗಳಲ್ಲಿನ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನವನ್ನು ಪರಿಶೀಲಿಸುತ್ತಿದ್ದರು.
ಸಚಿವರ ಸರಳತೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಪ್ರತಿಯೊಬ್ಬರೂ ಈ ಸರಳತೆಯನ್ನು ಇಷ್ಟಪಡುತ್ತಾರೆ” ಎಂದು ಬಳಕೆದಾರರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement