ಹಣ ಪಡೆದು ಸಿಎಂ ಮಾಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ, ನಾನು ಹಾಗೆ ಎಲ್ಲಿಯೂ ಹೇಳಿಲ್ಲ: ಯತ್ನಾಳ ಸ್ಪಷ್ಟನೆ

ವಿಜಯಪುರ: ಮುಖ್ಯಮಂತ್ರಿಯಾಗಲು ಹೈಕಮಾಂಡಿಗೆ ಹಣ ನೀಡಬೇಕಾಗುತ್ತದೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ನಾನು ಹೇಳಿದ ಅರ್ಥ ಬೇರೆ ಇದೆ. ಮುಖ್ಯಮಂತ್ರಿ ಮಾಡ್ತೇವೆ ಎಂದು ಕೆಲವರು ವಾಟ್ಸಪ್ ಕಾಲ್ ಮಾಡುತ್ತಾರೆ. ನಮಗೆ ಮೋದಿ ಗೊತ್ತು, ಸೋನಿಯಾ ಗಾಂಧಿ ಗೊತ್ತು, ದೇವೇಗೌಡ್ರು ಗೊತ್ತು ಎಂದು ಹೇಳುತ್ತಾರೆ, ಅಂಥವರನ್ನು ನಂಬಬೇಡಿ ಎಂದು ಹೇಳಿದ್ದೇನೆಯೇ ಹೊರತು ಮುಖ್ಯಮಂತ್ರಿಯಾಗಲು ಹೈಕಮಾಂಡಿಗೆ ಹಣ ನೀಡಬೇಕಾಗುತ್ತದೆ ಹೇಳಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಪಷ್ಟನೆ ನೀಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಮದುರ್ಗದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ಕೆಲ ಟಿಕೆಟ್ ಆಕಾಂಕ್ಷಿಗಳಿದ್ದರು. ಅವರಿಗೆ ಹಿತವಚನ ಹೇಳಲು, ಹೇಗೆಲ್ಲಾ ರಾಜಕಾರಣ ನಡೆಯುತ್ತದೆ ಎಂದು ತಿಳಿಸಲು ನಾನು ಈ ರೀತಿಯಾಗಿ ಹೇಳಿದ್ದೇನೆಯೇ ಮುಖ್ಯಮಂತ್ರಿಯಾಗಲು ಹೈಕಮಾಂಡಿಗೆ ಹಣ ನೀಡಬೇಕು ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಲ್ಲಿ ಅರ್ಹತೆ ಮೇಲೆಯೇ ಸ್ಥಾನಮಾನವನ್ನು ನೀಡುತ್ತಾರೆ. ಪ್ರಧಾನಿ ಮೋದಿ ಇರುವ ವರೆಗೂ ಅದು ನಡೆಯಲು ಸಾಧ್ಯವಿಲ್ಲ. ವರಿಷ್ಠರ ನಿರ್ಧಾರದ ಮೇಲೆಯೇ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ರಾಮದುರ್ಗದಲ್ಲಿ ನೀಡಿದ ಹೇಳಿಕೆಯನ್ನು ವ್ಯವಸ್ಥೆಯ ಭಾಗವಾಗಿ, ಪಕ್ಷವನ್ನು ಹೊರತುಪಡಿಸಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ಕೆಲ ದಲ್ಲಾಳಿಗಳು ಎಲ್ಲ ಪಕ್ಷದ ಮುಖಂಡರನ್ನ ಭೇಟಿ ಆಗುತ್ತಾರೆ. ಎಲ್ಲಾ ಪಕ್ಷದ ನಾಯಕರ ಜತೆ ಪೋಟೋ ತೆಗೆದುಕೊಂಡು ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತೇನೆ, ಸಚಿವನನ್ನಾಗಿ ಮಾಡುತ್ತೇನೆ ಎಂದು ಹೇಳ್ತಾರೆ. ಇದಕ್ಕಾಗಿ ಹಣ ಸಿದ್ಧತೆ ಮಾಡಿಕೊಳ್ಳಿ ಎಂದು ಹೇಳಿ ಕಳುಹಿಸುತ್ತಾರೆ. ಈ ದಲ್ಲಾಳಿಗಳ ಬಗ್ಗೆ ಕಾಲ ಬಂದಾಗ ಬಹಿರಂಗಗೊಳಿಸುವೆ. ದಲ್ಲಾಳಿಗಳು ಎಲ್ಲಿಯವರು..? ಯಾರು ಎಂಬುದೆಲ್ಲ ಇರುತ್ತದೆ. ಸುಮ್ಮಸುಮ್ಮನೆ ಆರೋಪ ಮಾಡಲು ನಾನು ಹುಚ್ಚನಲ್ಲ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

ಶಿಸ್ತು ಸಮಿತಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಿಸ್ತು ಸಮಿತಿ ಅಂದರೆ ಏನು..? ನನ್ನ ಕರೆಸಿದಾಗ ಅಲ್ಲಿಯೇ ವಾಸ್ತವ ಏನೆಂದು ಹೇಳುತ್ತೇನೆ. ರಾಜ್ಯಾಧ್ಯಕ್ಷರೇ ಕ್ಲಿಯರ್ ಆಗಿ ಯತ್ನಾಳ ಅವರು ಪಕ್ಷದ ಬಗ್ಗೆ ಹೇಳಿಲ್ಲ, ಇನ್ ಜನರಲ್ ಆಗಿ ಮಾತಾಡಿದ್ದಾರೆ ಎಂದು ಹೇಳಿದ್ದಾರೆ. ಇಷ್ಟರ ಮೇಲೆ ಏನು ಶಿಸ್ತು ಕ್ರಮ? ಸತ್ಯಕ್ಕೆ ಫಿಲ್ಟರ್ ಇರುವುದಿಲ್ಲ, ಸುಳ್ಳಿಗೆ ಫಿಲ್ಟರ್ ಬೇಕಾಗುತ್ತದೆ ಎಂದು ಯತ್ನಾಳ ಮಾರ್ಮಿಕವಾಗಿ ಹೇಳಿದರು.
ಡಿ.ಕೆ.ಶಿವಕುಮಾರಗೆ ನನ್ನ ಕಂಡರೆ ಭಯ, ನನ್ನ ಮೇಲೆ 200 ಕೋಟಿ ಮಾನಹಾನಿ ಕೇಸ್ ಹಾಕಿದ್ದಾರೆ. ಮಾನಹಾನಿ ಕೇಸ್ ಹಾಕಿದಾಗಿನಿಂದಲೂ ನನ್ನ ಮೇಲೆ ಭಯ ಹೆಚ್ಚಾಗಿದೆ. ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ ಎಂದು ಅವರಿಗೆ ಭಯ. ಯತ್ನಾಳ ಬಂದುಬಿಟ್ಟರೆ ನಮ್ಮ ಗತಿಯೇನು ಎಂಬ ಭಯವಿದೆ. ಆದರೆ ಡಿ.ಕೆ.ಶಿವಕುಮಾರಗೆ ಅಂಜುವ ಮಗ ನಾನಲ್ಲ. ಯತ್ನಾಳ ಏನಾದರೂ ಆದರೆ ಬುಲ್ಡೋಜರ್ ತರ್ತಾರೆ ಎಂದು ಭಯ. ಅಕ್ರಮ ಆಸ್ತಿ ಒಡೆಯಲು ಶುರು ಮಾಡ್ತಾರೆ ಎಂದು ಭಯ. ನನ್ನ ಸಚಿವ ಸ್ಥಾನ ತಪ್ಪಿಸಲು ಇದೆಲ್ಲ ಷಡ್ಯಂತ್ರ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement