ಮದುವೆ ಮೆರವಣಿಗೆಯಲ್ಲಿ ಮಿನಿಲಾರಿ ಹಾಯ್ದು ನಾಲ್ವರು ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

posted in: ರಾಜ್ಯ | 0

ಕಲಬುರಗಿ: ಮದುವೆ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದವರ ಮೇಲೆ ಡಿಜೆ ಸೌಂಡ್‌ ಇದ್ದ ಮಿನಿಲಾರಿ ಹರಿದು ನಾಲ್ವರು ಸಾವಿಗೀಡಾದ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕಡತಾಲದಲ್ಲಿ ಸಂಭವಿಸಿದೆ.
ಅಲ್ಲದೆ, ಘಟನೆಯಲ್ಲಿ ಹತ್ತಕ್ಕೂ ಅಧಿಕ ಜನರು ಗಾಯಗೊಂಡಿದ್ದು, ನಾಲ್ಕು ದಿನದ ಹಿಂದೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತೆಲಂಗಾಣ- ಕರ್ನಾಟಕ ಗಡಿಭಾಗ ಸೇಡಂ ತಾಲೂಕಿನ ಕಡತಾಲ ತಾಂಡಾದಲ್ಲಿ ಮದನಾ ತಾಂಡದ ವಧು ಹಾಗೂ ಕಡತಾಲ ತಾಂಡಾದ ವರನ ಮದುವೆ ಗುರುವಾರ ಕಡತಾಲ ತಾಂಡಾದಲ್ಲಿ ನಡೆಯಬೇಕಾಗಿತ್ತು. ಮದುವೆಯ ಹಿಂದಿನ ದಿನ ಮದುಮಗಳನ್ನ ಸ್ವಾಗತಿಸಲು ತೆಲಂಗಾಣದಿಂದ ತರಿಸಲಾಗಿದ್ದ ಡಿಜೆ ಜೊತೆ ರಾತ್ರಿ ಮೆರವಣಿಗೆ ಮಾಡಲಾಗುತ್ತಿತ್ತು. ಆಗ ಡಿಜೆಯಿದ್ದ ಮಿನಿಲಾರಿ ಏಕಾಏಕಿ ಜನರ ಮೇಲೆ ನುಗ್ಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಪ್ರಾಣ ಸಾವಿಗೀಡಾದರೆ ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹತ್ತಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸೇಡಂ ತಾಲೂಕಿನ ಮೇದಕ ತಾಂಡಾದ ಸುಗಣಾಬಾಯಿ ಚೌಹಾಣ (40), ತೆಲಂಗಾಣದ ದುಂಕುಡನಾಯಕ ತಾಂಡಾದ ವಿಜ್ಜಿಬಾಯಿ ರಾಥೋಡ್ (30), ಕುಮಾರನಾಯಕ ರಾಥೋಡ್ (35) ಎಂಬವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಪ್ರಕರಣ ಮುದೋಳ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಓದಿರಿ :-   ಪರಿಷತ್ ಚುನಾವಣೆ‌ : ಮೂರೂ ಪಕ್ಷಗಳಿಂದ ನಾಳೆ ಅಭ್ಯರ್ಥಿಗಳ ಪಟ್ಟಿ ಪ್ರಕಟ ಸಾಧ್ಯತೆ, ಅಚ್ಚರಿ ಅಭ್ಯರ್ಥಿಯೋ? ಹೈಕಮಾಂಡ್‌ಗೆ ಕಳುಹಿಸಿದ ಪಟ್ಟಿಗೆ ಮಾನ್ಯತೆಯೋ..?

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ