ಪತ್ನಿ ಸತ್ತು 21 ವರ್ಷಗಳ ಬಳಿಕ ಅಂತ್ಯಸಂಸ್ಕಾರ ಮಾಡಿದ ಪತಿ…!

ಬ್ಯಾಂಕಾಕ್‌ : ಥೈಲ್ಯಾಂಡ್‌ನ 72 ವರ್ಷದ ವೃದ್ಧ, ತನ್ನ ಮಲಗುವ ಕೋಣೆಯಲ್ಲಿಯೇ ಪತ್ನಿಯ ಶವವಿಟ್ಟುಕೊಂಡು 21 ವರ್ಷಗಳ ಕಾಲ ಜೀವಿಸಿದ್ದು, ಕೊನೆಗೂ ಶವಕ್ಕೆ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ.
ಬ್ಯಾಂಕಾಕಿನ ಬ್ಯಾಂಗ್‌ ಖೇನ್‌ ಜಿಲ್ಲೆಯಲ್ಲಿ ವಾಸವಿರುವ ಚಾರ್ನ್‌ ಜನವಾಚ್ಚಕಲ್‌ ಎಂಬ ವೃದ್ಧ ಸತ್ತಿರುವ ತನ್ನ ಹೆಂಡತಿಯನ್ನು ಬದುಕಿದ್ದಾಳೆಂದು ಭಾವಿಸಿಕೊಂಡು ಸತತ 21 ವರ್ಷಗಳ ಕಾಲ ಶವವಿಟ್ಟುಕೊಂಡು ತಾನು ಸಾಕಿದ ಬೆಕ್ಕು ಮತ್ತು ನಾಯಿಗಳ ಜೊತೆ ಕಾಲಕಳೆಯುತ್ತಿದ್ದ ಎಂದು ಹೇಳಲಾಗಿದೆ.

ಕಳೆದ ತಿಂಗಳು ಮೋಟಾರ್‌ ಸೈಕಲ್‌ ಅಪಘಾತದಲ್ಲಿ ಗಾಯಗೊಂಡಿದ್ದ ವೃದ್ಧನಿಗೆ ಆಹಾರವನ್ನು ನೀಡಿ ಆರೈಕೆ ಮಾಡಲು ಮನೆಗೆ ಬಂದ ಫೆಟ್‌ ಕಾಸೆಮ್‌ ಬ್ಯಾಂಕಾಕ್‌ ಫೌಂಡೇಶನ್‌ನ ಕಾರ್ಯನಿರ್ವಾಹಕರು ಶವವನ್ನು ಗಮನಿಸಿ ವೃದ್ಧನನ್ನು ಪ್ರಶ್ನಿಸಿದರು. ನಂತರ ವಿಷಯ ತಿಳಿದು ಮನವರಿಕೆ ಮಾಡಿದ್ದಾರೆ. ನಂತರ ವೃದ್ಧಿ ಉತ್ತಮ ರೀತಿಯಲ್ಲಿ ಪತ್ನಿಯ ಅಂತ್ಯಕ್ರಿಯೆ ನಡೆಸಲು ಫೌಂಡೇಶನ್‌ ಸಹಾಯ ಕೋರಿದರು. ಹಾಗೂ ಅವರ ನರವಿನೊಂದಿಗೆ ಕೊನೆಗೂ ಅಂತ್ಯಸಂಸ್ಕಾರ ಮಾಡಿದ್ದಾನೆ.ಸದ್ಯ, ಫೌಂಡೇಶನ್‌ ನ ಸಿಬ್ಬಂದಿ ಶವ ಪೆಟ್ಟಿಗೆಯನ್ನು ಹೊರಗೆ ತೆಗೆದುಕೊಂಡು ಬರುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
21 ವರ್ಷಗಳ ಬಳಿಕ ಪತ್ನಿಯ ಶವವನ್ನುಅಂತ್ಯಸಂಸ್ಕಾರ ಮಾಡಿ ವೃದ್ಧ ತುಂಬಾ ಭಾವುಕಗೊಂಡಿದ್ದಾನೆ. ಪತ್ನಿಯ ಸಾವಿನ ಕುರಿತು ವೃದ್ಧ ಎಲ್ಲಿಯೂ ದಾಖಲಿಸದ ಕಾರಣ ಅಧಿಕಾರಿಗಳು ಆತನ ವಿರುದ್ಧ ಯಾವುದೇ ಕಾನೂನು ಕ್ರಮಕೈಗೊಂಡಿಲ್ಲ ಎಂದು ಹೇಳಲಾಗಿದೆ,

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement