ಪದ್ಮಶ್ರೀ ಪುರಸ್ಕೃತ ಸುಕ್ರಜ್ಜಿಗೆ ಸ್ಟಂಟ್ ಅಳವಡಿಕೆ

posted in: ರಾಜ್ಯ | 0

ಮಂಗಳೂರು: ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡ ಅವರಿಗೆ ಭಾನುವಾರ ಸ್ಟಂಟ್ ಅಳವಡಿಸಲಾಗಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸುಕ್ರಿ ಗೌಡ ಕಳೆದ ಕೆಲ ತಿಂಗಳುಗಳಿಂದ  ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ಈ ಸಂಬಂಧ ಕಾರವಾರದ ಜಿಲ್ಲಾಸ್ಪತ್ರೆಯಲ್ಲಿಯೂ ಕೆಲಕಾಲ ಇದ್ದು  ಆಸ್ಪತ್ರೆಯಿಂದ ಬಿಡುಡೆಯಗಿದ್ದರು. ನಾಲ್ಕು ದಿನಗಳಿಂದ ಈಚೆಗೆ ತಲೆಸುತ್ತುವುದು ಹಾಗೂ ಉಸಿರಾಟದ ತೊಂದರೆ ಪರಿಣಾಮ ಶನಿವಾರ ಅವರನ್ನು ಮಂಗಳೂರಿನ ಕೆಎಂಸಿಗೆ ಕರೆತರಲಾಗಿತ್ತು. ಪರೀಕ್ಷೆಯ ವೇಳೆ ಅವರಿಗೆ ಹೃದಯದಲ್ಲಿ ಸಮಸ್ಯೆ ಕಂಡುಬಂದ ಕಾರಣ, ಸ್ಟಂಟ್ ಅಳವಡಿಸಲಾಗಿದೆ. ಸುಕ್ರಿ ಗೌಡ ಆರೋಗ್ಯ ಸುಧಾರಣೆ ಗಮನಿಸಿ,  ಅವರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಬಹುದು ಎಂದು ಹೇಳಲಾಗಿದೆ.

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ತನಿಖೆ ನಂತರ ಪಿಎಸ್‌ಐ ಹುದ್ದೆ ಅಕ್ರಮ ಪ್ರಕರಣದ ವಿಚಾರಣೆಗೆ ವಿಶೇಷ ಕೋರ್ಟ್‌ ರಚನೆ: ಗೃಹ ಸಚಿವ ಆರಗ ಜ್ಞಾನೇಂದ್ರ
advertisement

ನಿಮ್ಮ ಕಾಮೆಂಟ್ ಬರೆಯಿರಿ