ಯುವಕನ ಕೖೆಗೆ ಮಗು ನೀಡಿ ನಾಪತ್ತೆಯಾದ ಮಹಿಳೆ…!

posted in: ರಾಜ್ಯ | 0

ಮೈಸೂರು: ತನ್ನ ವೈಯಕ್ತಿಕ ಕೆಲಸಕ್ಕೆಂದು ರಾಯಚೂರಿಗೆ ತೆರಳಿದ್ದ ಯುವಕ ಮೈಸೂರು ಬಸ್ಸಿಗೆ ಕಾಯುತ್ತಿದ್ದ ವೇಳೆ ಅಪರಿಚಿತ ಮಹಿಳೆಯೊಬ್ಬರು ತನ್ನ 9 ತಿಂಗಳ ಮಗುವನ್ನು ಯುವಕನ ಕೈಗೆ ನೀಡಿ ಮೂರು ಗಂಟೆಗಳು ಕಳೆದರು ವಾಪಸ್‌ ಬಾರದೆ ನಾಪತ್ತೆಯಾಗಿರುವ ಘಟನೆ ರಾಯಚೂರಿನ ಬಸ್ ನಿಲ್ದಾಣದಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ನಿವಾಸಿ ರಘು ಕೆಲಸದ ಮೇಲೆ ರಾಯಚೂರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ಕಾದು ಕಾದು ಸುಸ್ತಾದ ರಘು ಅಲ್ಲಿ ಯಾರ ಬಳಿ ಮಗು ಕೊಡಬೇಕೆಂದು ಗೊತ್ತಾಗದೆ ಮಗುವನ್ನು ಸುರಕ್ಷಿತವಾಗಿ ಮೈಸೂರಿಗೆ ಕರೆದುಕೊಂಡು ಬಂದಿದ್ದಾರೆ. ಬಳಿಕ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ಮಗುವನ್ನು ನೀಡಿದ್ದಾರೆ. ಮಗುವನ್ನು ಆರೈಕೆ ಮಾಡಿದ ಸಿಬ್ಬಂದಿಗಳು ಬಾಲ ಮಂದಿರಕ್ಕೆ ಮಗುವನ್ನು ಒಪ್ಪಿಸಿದ್ದು, ತಾಯಿಯನ್ನು ಪತ್ತೆ ಹಚ್ಚುವಂತೆ ರಾಯಚೂರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ಓದಿರಿ :-   ಮಳೆ ಅನಾಹುತ: ಸಚಿವರ ನೇತೃತ್ವದಲ್ಲಿ 8 ಕಾರ್ಯಪಡೆ ರಚನೆ
advertisement

ನಿಮ್ಮ ಕಾಮೆಂಟ್ ಬರೆಯಿರಿ