ಗಂಡನ ಮನೆಯಲ್ಲಿ ಶೌಚಾಲಯ ಇಲ್ಲವೆಂದು ಮನನೊಂದು ಪತ್ನಿ ಆತ್ಮಹತ್ಯೆ

ಚೆನ್ನೈ: ತನ್ನ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲದಿರುವುದಕ್ಕೆ ಮನನೊಂದ 27 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಕಡಲೂರು ಜಿಲ್ಲೆಯ ಅರಿಸಿಪೆರಿಯಂಕುಪ್ಪಂ ಗ್ರಾಮದ ರಮ್ಯಾ ಎಂಬವರು ಆತ್ಮಹತ್ಯೆ ಶರಣಾದ ಮಹಿಳೆ ಎಂದು ಹೇಳಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಮ್ಯಾ ಏಪ್ರಿಲ್ 6 ರಂದು ಕಾರ್ತಿಕೇಯನ್ ಎಂಬವರನ್ನು ವಿವಾಹವಾಗಿದ್ದರು. ವರದಿಗಳ ಪ್ರಕಾರ, ರಮ್ಯಾ ತನ್ನ ಗಂಡನ ಮನೆಯಲ್ಲಿ ಶೌಚಾಲಯವಿಲ್ಲದ ಕಾರಣ ಮದುವೆಯ ನಂತರ ಮನೆಬಿಟ್ಟು ತನ್ನ ತಾಯಿಯೊಂದಿಗೆ ವಾಸಿಸಲು ಪ್ರಾರಂಭಿಸಿದ್ದಳು. ಇದೇ ವೇಳೆ ರಾಜ್ಯದ ರಾಜಧಾನಿಗೆ ದೂರವಿರುವ ಕಡಲೂರು ನಗರದಲ್ಲಿ ಶೌಚಾಲಯವಿರುವ ಮನೆಯನ್ನು ಹುಡುಕುವಂತೆ ಪತಿಗೆ ಒತ್ತಾಯಿಸಿದ್ದಳು. ಇದೇ ಅವರ ನಡುವೆ ವಿವಾದಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ರಮ್ಯಾ ತನ್ನ ತಾಯಿ ಹೊರಗೆ ಹೋಗಿದ್ದಾಗ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದಾರೆ. ಕೂಡಲೇ ಆಕೆಯನ್ನು ಕಡಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ರಮ್ಯಾ ಅವರನ್ನು ಪಾಂಡಿಚೇರಿಯ ಜವಾಹರಲಾಲ್ ಇನ್‌ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್ (JIPMER) ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ರಮ್ಯಾಳ ತಾಯಿ ಮಂಜುಳಾ ತಿರುಪತಿರುಪುಲಿಯೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಓದಿರಿ :-   ನೂತನ ಮುಖ್ಯ ಚುನಾವಣಾ ಆಯುಕ್ತ ರಾಜೀವಕುಮಾರ್ ಅಧಿಕಾರ ಸ್ವೀಕಾರ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ