ನವದೆಹಲಿ: ಕೇರಳ ಮಕ್ಕಳಲ್ಲಿ ನಿಗೂಢವಾದ ಟೊಮೆಟೊ ಫ್ಲ್ಯೂ ಕಾಣಿಸಿಕೊಂಡಿದ್ದು ಆತಂಕ ಸೃಷ್ಟಿಸಿದೆ.
ಈವರೆಗೂ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ 82 ಪ್ರಕರಣಗಳು ವರದಿಯಾಗಿವೆ. ರಾಜ್ಯದ ದಕ್ಷಿಣ ಭಾಗವಾದ ಆರ್ಯಂಕಾವು, ಅಂಚಲ್ ಮತ್ತು ನೆಡುವತ್ತೂರ್ನಲ್ಲೂ ಪ್ರಕರಣಗಳು ವರದಿಯಾಗಿವೆ.
ತಮಿಳುನಾಡು-ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಜ್ವರ, ದದ್ದುಗಳು ಮತ್ತು ಇತರ ಕಾಯಿಲೆಗಳೊಂದಿಗೆ ಕೊಯಮತ್ತೂರ ಪ್ರವೇಶಿಸುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅಂತಾರಾಜ್ಯ ಪ್ರಯಾಣದ ವಾಹನಗಳನ್ನು ಅಧಿಕಾರಿಗಳು ತಡೆದು ತಪಾಸಣೆ ನಡೆಸುತ್ತಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಕೇರಳದಲ್ಲಿ ಕೋವಿಡ್ ಸೋಂಕಿನ ನಡುವೆ ನಿಗೂಢವಾದ ಟೊಮೆಟೋ ಜ್ವರ ಆತಂಕ ಹೆಚ್ಚಿಸಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, 80 ಕ್ಕೂ ಹೆಚ್ಚು ಮಕ್ಕಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸಾಂಕ್ರಾಮಿಕವಾದ ಈ ಜ್ವರ ಕೆಂಪು ಬಣ್ಣದ ದದ್ದುಗಳು, ಚರ್ಮದ ಕಿರಿಕಿರಿ ಮತ್ತು ನಿರ್ಜಲೀಕರಣದ ರೋಗ ಲಕ್ಷಣಗಳನ್ನು ಹೊಂದಿವೆ. ಈ ರೋಗ ಐದು ವರ್ಷದೊಳಗಿನ ಮಕ್ಕಳನ್ನು ಹೆಚ್ಚಾಗಿ ಬಾಧಿಸುತ್ತಿದೆ ಎಂದು ಹೇಳಲಾಗಿದೆ. ಆ ಗುಳ್ಳೆಗಳು ಒಡೆದರೆ ಮತ್ತೊಬ್ಬರಿಗೆ ಸೋಂಕು ಹರಡುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಮಕ್ಕಳನ್ನು ತಪಾಸಣೆ ನಡೆಸಲಾಗುತ್ತಿದೆ. ಗುಳ್ಳೆಗಳು ಟೊಮ್ಯಾಟೋ ಗಾತ್ರದಲ್ಲಿ, ಕೆಂಪುಬಣ್ಣ ಹೊಂದಿರುವುದರಿಂದ ಈ ಜ್ವರಕ್ಕೆ ಟೊಮ್ಯಾಟೋ ಜ್ವರ ಎಂದು ಕರೆಯಲಾಗಿದೆ.
ಈ ಸಾಂಕ್ರಾಮಿಕಕ್ಕೆ ತೀವ್ರ ಜ್ವರ, ದೇಹದ ನೋವು, ಕೀಲು ಊತ ಮತ್ತು ಆಯಾಸದ ಲಕ್ಷಣಗಳಿವೆ ಎಂದು ವೈದ್ಯಕೀಯ ಅಧಿಕಾರಿಗಳು ಹೇಳಿದ್ದಾರೆ. ಈ ಜ್ವರ ಕಾಣಿಸಿಕೊಂಡಾಗ ಮಕ್ಕಳನ್ನು ವಿಶ್ರಾಂತಿಯಲ್ಲಿರಿಸಬೇಕು ಮತ್ತು ಗುಳ್ಳೆಗಳನ್ನು ಅವರು ಕೆರೆಯದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ