ಕೊಲ್ಲೂರು : ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದೇವಾಲಯದ ಹುಂಡಿ ಹಣದ ಲೆಕ್ಕಾಚಾರ ಮಾಡಲಾಗಿದೆ. ಭಕ್ತರಿಂದ ಸಂಗ್ರಹವಾದ ಹುಂಡಿಯ ಹಣದ ಕುರಿತು ತಿಂಗಳ ಲೆಕ್ಕಾಚಾರ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ದೇವಸ್ಥಾನದ ಹುಂಡಿಯಲ್ಲಿ 1.53 ಕೋಟಿ ರೂ.ಗಳಷ್ಟು ಕಾಣಿಕೆ ಸಂಗ್ರಹವಾಗಿದೆ.
ಮೇ 10ರಂದು ಕಾಣಿಕೆ ಹುಂಡಿಯ ಎಣಿಕೆ ನಡೆದಿದೆ. ದಾಖಲೆಯ 1,53,41,923 ರೂ. ಸಂಗ್ರಹವಾಗಿದೆ. 2.50 ಕೆಜಿ ಬಂಗಾರ ಮತ್ತು 4.20 ಕೆಜಿ ಬೆಳ್ಳಿ ಕೂಡ ಸಂಗ್ರಹವಾಗಿದೆ. ಕಳೆದ ಜನವರಿಯಿಂದ ಪ್ರತಿದಿನ ಕನಿಷ್ಠ 10 ಸಾವಿರ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ದೇಗುಲದಲ್ಲಿ ೊಂದು ತಿಂಗಳಿಗೆ ಅತೀ ಹೆಚ್ಚು 1.53 ಕೋಟಿ ರೂ. ಕಾಣಿಕೆ ರೂಪದಲ್ಲಿ ಇದೇ ಮೊದಲ ಬಾರಿಗೆ ಹಣ ಸಂಗ್ರಹವಾಗಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಸಾಮಾನ್ಯವಾಗಿ ಪ್ರತೀ ತಿಂಗಳು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದ ಹುಂಡಿ ಹಣದ ಎಣಿಕೆ ನಡೆಯುತ್ತದೆ. ತಿಂಗಳಿಗೆ ಸರಾಸರಿ 65 ಲಕ್ಷ ರೂ.ಸಂಗ್ರಹವಾಗುತ್ತಿತ್ತು ಎಂದು ಹೇಳಲಾಗಿದೆ. 4 ತಿಂಗಳ ಹಿಂದೆ ಎಣಿಕೆ ಮಾಡಿದಾಗ 1.39 ಕೋಟಿ ರೂ. ಸಂಗ್ರಹವಾಗಿತ್ತು. ಈ ಬಾರಿ ಹುಂಡಿ ಎಣಿಕೆ ನಡೆದಾಗ ಹುಂಡಿಯಲ್ಲಿ 1,53,41,923 ರೂ ನಗದು, 2.500 ಕೆಜಿ ಬಂಗಾರ ಮತ್ತು 4.200 ಕೆಜಿ ಬೆಳ್ಳಿ ಸಂಗ್ರಹ ಆಗಿದೆ ಎಂದು ತಿಳಿದು ಬಂದಿದೆ. ಹುಂಡಿ ಎಣಿಕೆಯಲ್ಲಿ ದೇವಳದ ಕಾರ್ಯ ನಿರ್ವಹಣಾಧಿಕಾರಿ ಮತ್ತು ಆಡಳಿತ ಮಂಡಳಿ ಸದಸ್ಯರು ಭಾಗಿಯಾಗಿದ್ದರು.
ದಕ್ಷಿಣ ಭಾರತದ ಪ್ರಸಿದ್ದ ದೇವಾಲಯವಾಗಿರುವ ಕೊಲ್ಲೂರು ಮೂಕಾಂಬಿಕಾ ದೇವರ ದರ್ಶನಕ್ಕೆ ಕೋವಿಡ್ ನಿರ್ಭಂದಗಳ ಸಡಿಲಿಕೆ ನಂತರ ಜನಸಾಗರ ಹರಿದು ಬರುತ್ತಿದೆ. ಕಳೆದ ವರ್ಷ 2019ರ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೊಲ್ಲೂರು ದೇವಾಲಯದ ವಾರ್ಷಿಷಿಕ ಆದಾಯ 13 ಕೋಟಿ ರೂ. ಆಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ