ಮೇ 14 ರಂದು ಸ್ವರ್ಣವಲ್ಲಿಯಲ್ಲಿ ಕೃಷಿ ಜಯಂತಿ-2022 , ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ

ಶಿರಸಿ: ಬೆಳೆಗಳಿಗೆ ರೋಗ ಬಾಧೆ, ಅಸ್ಥಿರ ಬೆಲೆ, ಸಾಲಬಾಧೆ, ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿರುವ ಈ ಕಾಲಘಟ್ಟದಲ್ಲಿ ಕೃಷಿ ಕ್ಷೇತ್ರಕ್ಕೆ ಪುನಶ್ವೇತನ ಕೊಡುವ ನಿಟ್ಟಿನಲ್ಲಿ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ನೇತೃತ್ವದಲ್ಲಿ 14ನೇ ವರ್ಷದ ‘ಕೃಷಿ ಜಯಂತಿ’ಯನ್ನು ಮೇ 14ರಂದು ಶನಿವಾರ  ಸೋಂದಾ ಸ್ವರ್ಣವಲ್ಲಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಸ್ತುತ ವರ್ಷ ಕೃಷಿ ಜಯಂತಿ 2022 ಅನ್ನು ಸ್ವರ್ಣವಲ್ಲಿ ಕೃಷಿ ಪ್ರತಿಷ್ಠಾನದ ಆಶ್ರಯದಲ್ಲಿ ಟಿ.ಎಸ್.ಎಸ್ ಶಿರಸಿ ಮತ್ತು ಗ್ರಾಮಾಭ್ಯುದಯ, ಸ್ವರ್ಣವಲ್ಲಿ ಸಹಯೋಗದಲ್ಲಿ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ ಒಂದು ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಮೇ 14 ರಂದು ಬೆಳಿಗ್ಗೆ 8: 30ಕ್ಕೆ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಉದ್ಘಾಟಿಸಲಿದ್ದಾರೆ.

ನಂತರ ವಿಚಾರಪೂರ್ಣ ಗೋಷ್ಠಿಗಳು ನಡೆಯಲಿವೆ. ಬೆಳಿಗ್ಗೆ 10:30 ರಿಂದ 12:30ರ ವರೆಗೆ ಹಾವೇರಿ ದೇವಿಹೊಸೂರು ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯದ ವಿಜ್ಞಾನಿಗಳಿಂದ ಗೋಷ್ಠಿಗಳು ನಡೆಯಲಿವೆ. ಡೀನ್‌ ಡಾ. ಲಕ್ಷ್ಮೀನಾರಾಯಣ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ.ಸಂಪನ್ಮೂಲ ವ್ಯಕ್ತಿಗಳಾಗಿ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ತಿಪ್ಪಣ್ಣ ಕೆ.ಎಸ್. ಮಲೆನಾಡಿನಲ್ಲಿ ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆಗೆ ಅವಕಾಶಗಳು ಎಂಬ ವಿಷಯವಾಗಿ, ಡಾ. ಶಿದ್ಧನಗೌಡ ಯಡಚಿ ಅವರು, ಪೂರಕ ಕೃಷಿ ಮಲೆನಾಡಿನಲ್ಲಿ ಇದರ ಸಾಧ್ಯತೆಗಳು, ಪ್ರಜಾ ಮಲಗಾಂವೆ ಅವರು ಕಿರು ಆಹಾರೋದ್ಯಮದಲ್ಲಿ ಸುರಕ್ಷತೆಯ ಪಾತ್ರ ಮತ್ತು ನೋಂದಣಿ ಪ್ರಕ್ರಿಯೆ ಎಂಬ ವಿಷಯವಾಗಿ ಗೋಷ್ಠಿ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3:30 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿರುವ 2ನೇ ಗೋಷ್ಠಿ ಶಿರಸಿಯ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಎನ್.ಕೆ.ಹೆಗಡೆ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಶ್ರಾಂತ ಪ್ರಧಾನ ವಿಜ್ಞಾನಿಗಳಾದ ಡಾ.ಶಿವಾನಂದ ಟಿ.ಎನ್. ಅವರು, ಮಲೆನಾಡಿನಲ್ಲಿ ಮಣ್ಣಿನ ಫಲವತ್ತತೆಯ ಸಂರಕ್ಷಣೆ ಮತ್ತು ಸವಾಲುಗಳು ಎಂಬ ವಿಷಯವಾಗಿ ಗೋಷ್ಠಿ ನಡೆಸಿಕೊಡಲಿದ್ದಾರೆ.

ಪ್ರಮುಖ ಸುದ್ದಿ :-   ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

ವಿವಿಧ ಸ್ಪರ್ಧೆಗಳು :
ಈಗಾಗಲೇ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆನ್‌ಲೈನ್‌ನಲ್ಲಿ ಕೃಷಿ ರಸಪ್ರಶ್ನೆ ಸ್ಪರ್ಧೆ ನಡೆಸಿದ್ದು, ಮೇ 14 ರಂದು
ಮಧ್ಯಾಹ್ನ 12:30 ರಿಂದ 2 ಗಂಟೆಯವರೆಗೆ ಕಾಲೇಜು ವಿದ್ಯಾರ್ಥಿಗಳಿಗಾಗಿ ವೇದಿಕೆಯಲ್ಲಿ ನೇರವಾಗಿ ಕೃಷಿ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಕೇಂದ್ರ ಮಾತೃಮಂಡಲದವರ ನಿರ್ವಹಣೆಯಲ್ಲಿ ಮಾತೆಯರಿಗಾಗಿ ಹೂಮಾಲೆ ಕಟ್ಟುವ ಹಾಗೂ ಹೂಬತ್ತಿ ಹೊಸೆಯುವ ಸ್ಪರ್ಧೆ ನಡೆಯಲಿದೆ.

ವಿವಿಧ ಪ್ರದರ್ಶನಗಳು :
ರಾಜ್ಯ ಮಟ್ಟದ ಕೃಷಿ ಆಧಾರಿತ ಉತ್ಪನ್ನಗಳ ಪ್ರದರ್ಶನ, ಕೃಷಿ ಸಂಬಂಧಿ ಎಲ್ಲಾ ಇಲಾಖೆ ಸಂಸ್ಥೆಗಳ ವಿವಿಧ ಪ್ರದರ್ಶನಗಳು, ಸ್ಥಳೀಯ ರೈತರು ಅಭಿವೃದ್ಧಿಪಡಿಸಿದ ಸರಳ ಯಂತ್ರಗಳ ಪ್ರದರ್ಶನ, ವೈವಿಧ್ಯ ಗೊಬ್ಬರ ಸಸ್ಯಜನ್ಯ ಕೀಟನಾಶಕಗಳ ಪ್ರದರ್ಶನ, ಕೃಷಿ ಸಂಬಂಧಿ ಪತ್ರಿಕೆಗಳ ಪ್ರದರ್ಶನ, ಮಾರಾಟ, ಸ್ವ ಸಹಾಯ ಸಂಘಗಳ ಮೌಲ್ಯವರ್ಧಿತ
ವಸ್ತುಗಳ ಪ್ರದರ್ಶನ, ಮಾರಾಟ ನಡೆಯಲಿದೆ.
ಸಮಾರೋಪ ಸಮಾರಂಭ :
ಸಂಜೆ 5 ಗಂಟೆಯಿಂದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಸ್ವರ್ಣವಲ್ಲಿ ಪ್ರಭಾ ಕೃಷಿ ವಿಶೇಷಾಂಕ ಬಿಡುಗಡೆ ಮಾಡಲಿದ್ದಾರೆ. ಶಿವಮೊಗ್ಗಾದ ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ
ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಹಾಗೂ ಟಿ.ಎಸ್.ಎಸ್., ಶಿರಸಿಯ ನಿರ್ದೇಶಕರಾದ ಶಶಾಂಕ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ಕೃಷಿ ಮೇಳವನ್ನು ಯಶಸ್ವಿಯಾಗಿಸಲು 18 ಸಮಿತಿಗಳನ್ನು ರಚಿಸಲಾಗಿದ್ದು ಈಗಾಗಲೇ ಅವರು ಕಾರ್ಯಪ್ರವರ್ತಕರಾಗಿದ್ದು ಸಿದ್ಧತಾ ಕಾರ್ಯ ಭರದಿಂದ ಸಾಗುತ್ತಿದೆ.

ಕೃಷಿ ಪ್ರಶಸ್ತಿಗಳು…
ಈ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಉತ್ತಮ ಕೃಷಿಕ (ಕೃಷಿ ಕಂಠೀರವ), ಸಾಧಕ ಕೃಷಿ ಮಹಿಳೆ, ಉತ್ತಮ ಅವಿಭಕ್ತ ಕೃಷಿಕುಟುಂಬ, ಸಾಧಕ ಕೃಷಿ ಕುಶಲಕರ್ಮಿಗಳಿಗೆ ಸನ್ಮಾನ ಹಾಗೂ ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿ ಪ್ರದಾನ ನಡೆಯಲಿದೆ.
1. ಉತ್ತಮ ಕೃಷಿಕ (ಕೃಷಿ ಕಂಠೀರವ) ಸುಬ್ರಾಯ ಗಣಪತಿ ಹೆಗಡೆ, ಬಾಳೇಕೊಪ್ಪ (ಗೋಳಿಮಕ್ಕಿ), ತಾ- ಸಿದ್ದಾಪುರ
2. ಸಾಧಕ ಕೃಷಿ ಮಹಿಳೆ – ನೇತ್ರಾವತಿ ವೆಂಕಟ್ರಮಣ ಹೆಗಡೆ, ಕ್ಯಾದಗಿಮನೆ, ಕೆಂಚಗದ್ದೆ, ತಾ- ಶಿರಸಿ
3. ಉತ್ತಮ ಅವಿಭಕ್ತ ಕೃಷಿ ಕುಟುಂಬ ಶಾಂತಾರಾಮ ಸುಬ್ರಾಯ ಹೆಗಡೆ, ಬಾಳೇಹದ್ದ, ಚವತ್ತಿ, ತಾ-ಯಲ್ಲಾಪುರ
4. ಸಾಧಕ ಕೃಷಿ ಕುಶಲಕರ್ಮಿ – ಮಾಬ್ದು ಬಂಗಾರ್ಯ ಗೌಡ, ಮನೇನಳ್ಳಿ, ಅಡಕಳ್ಳಿ, ತಾ-ಸಿದ್ದಾಪುರ
ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿ – ಗುರುನಾಥ ಗಣಪತಿ ಹೆಗಡೆ, (ಗಲಗದಮನೆ) ಬೊಮ್ಮನಳ್ಳಿ, ತಾ-ಶಿರಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪ್ರಮುಖ ಸುದ್ದಿ :-   ಭಟ್ಕಳ : ಮೀನುಗಾರಿಕಾ ಬೋಟ್ ಮುಳುಗಡೆ

ಸಂತೋಷಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ :
ಸಂಜೆ 6:30 ರಿಂದ ರಾತ್ರಿ 8:30ರ ವರೆಗೆ ನಾಡಿನ ಹೆಮ್ಮೆಯ ಕಲಾವಿದರಾದ ಸತೀಶ ಭಟ್ಟ, ಮಾಳಕೊಪ್ಪ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಹಾರ್ಮೋನಿಯಂನಲ್ಲಿ ಪ್ರಕಾಶ ಹೆಗಡೆ, ಯಡಳ್ಳಿ, ತಬಲಾದಲ್ಲಿ ಲಕ್ಷ್ಮೀಶರಾವ್ ಕಲ್ಗುಂಡಿಕೊಪ್ಪ ಪಾಲ್ಗೊಳ್ಳಲಿದ್ದಾರೆ.
ಶ್ರೀ ಲಕ್ಷ್ಮೀನೃಸಿಂಹ ಮಹಾರಥೋತ್ಸವ ಕಾರ್ಯಕ್ರಮಗಳು
ಮುಂಜಾನೆ : ಹೊರೆಗಾಣಿಕೆ ಸಮರ್ಪಣೆ, ಫಲ ಪಂಚಾಮೃತ, ಶತರದ್ರಾಭಿಷೇಕ, ಮಹಾಪೂಜೆ, ಮಂಗಳಾರತಿ, ತೀರ್ಥಪ್ರಸಾದ.
ರಾತ್ರಿ : ಮಹಾರಥೋತ್ಸವ, ಅಷ್ಠಾವಧಾನ ಸೇವೆ, ರಥೋತ್ಸವದ ನಂತರದಲ್ಲಿ ಯಕ್ಷಶಾಲ್ಮಲಾ (ರಿ.) ಸ್ವರ್ಣವಲ್ಲಿ
ಇವರಿಂದ “ರಾಜಾ ರುದ್ರಕೋಪ ಯಕ್ಷಗಾನ ಬಯಲಾಟ ನಡೆಯಲಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement