ಭಾರತದಲ್ಲಿ ಆಲ್ಕೊಹಾಲ್ ಸೇವನೆ ಮಾಡುವ ಪುರುಷ ಸಂಖ್ಯೆ ಶೇ.7ರಷ್ಟು ಇಳಿಮುಖ : NFHS-5 ವರದಿ

ನವದೆಹಲಿ: 2015ರಿಂದ ಭಾರತದ ಪುರುಷರಲ್ಲಿ ಆಲ್ಕೊಹಾಲ್ ಸೇವನೆ ಪ್ರಮಾಣ ಶೇ.7 ರಷ್ಟು ಕಡಿಮೆಯಾಗಿದೆ ಎಂದು NFHS-5 ವರದಿ ತಿಳಿಸಿದೆ.
ಪುರುಷರಲ್ಲಿ ಆಲ್ಕೋಹಾಲ್ ಸೇವನೆಯು ಯಾವಾಗಲೂ ಹೆಚ್ಚಾಗಿರುತ್ತದೆ ಎಂದು ತಿಳಿದಿದ್ದರೂ, 2019-2021 ಗಾಗಿ ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(NFHS-5)ಯು ದೇಶದಲ್ಲಿ ಪುರುಷರಲ್ಲಿ ಆಲ್ಕೊಹಾಲ್ ಸೇವನೆಯು 7%ರಷ್ಟು ಕಡಿಮೆಯಾಗಿದೆ ಎಂದು ತೋರಿಸಿದೆ.
ದೇಶದಲ್ಲಿ ಶೇ.22ರಷ್ಟು ಪುರುಷರಿಗೆ ಹೋಲಿಸಿದರೆ 15-49 ವರ್ಷ ವಯಸ್ಸಿನ ಶೇ.1ರಷ್ಟು ಮಹಿಳೆಯರು ಮಾತ್ರ ಮದ್ಯಪಾನ ಮಾಡುತ್ತಾರೆ ಎಂದು ಕಂಡುಹಿಡಿದಿದೆ. ಒಟ್ಟಾರೆ ಬಳಕೆ ಗ್ರಾಮೀಣ ಪ್ರದೇಶದಲ್ಲೇ ಹೆಚ್ಚಿದೆ ಎಂದು ವರದಿ ಹೇಳಿದೆ.

ಕರ್ನಾಟಕದಲ್ಲಿ ಶೇ.0.3ರಷ್ಟು ಮಹಿಳೆಯರು ಮದ್ಯ ಸೇವಿಸುತ್ತಾರೆ ಎಂದು ಸಮೀಕ್ಷೆ ಹೇಳಿದ್ದು ಇದು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ. ಕರ್ನಾಟಕದಲ್ಲಿ ಶೇ.23.1ರಷ್ಟು ಪುರುಷರು ಮದ್ಯ ಸೇವಿಸುತ್ತಾರೆ. ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ…! ಮದ್ಯ ಸೇವಿಸುವ ಮಹಿಳೆಯರ ಶೇಕಡಾವಾರು ಪ್ರಮಾಣವು ಅರುಣಾಚಲ ಪ್ರದೇಶದಲ್ಲಿ (18%), ಸಿಕ್ಕಿಂ(15%)ನಲ್ಲಿ ಅತಿ ಹೆಚ್ಚು. ಪುರುಷರಲ್ಲಿ ಆಲ್ಕೊಹಾಲ್ ಸೇವನೆಯು ಗೋವಾದಲ್ಲಿ (59%), ಅರುಣಾಚಲ ಪ್ರದೇಶ (57%), ಮತ್ತು ತೆಲಂಗಾಣ(50%)ದಲ್ಲಿ ಅತಿ ಹೆಚ್ಚು. ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಲಕ್ಷದ್ವೀಪದಲ್ಲಿ (1%) ಕಡಿಮೆಯಾಗಿದೆ.
ಮದ್ಯಪಾನ ಮಾಡುವ ಮಹಿಳೆಯರಲ್ಲಿ ಶೇ.17ರಷ್ಟು ಮಹಿಳೆಯರು ಪ್ರತಿದಿನ ಸೇವಿಸುತ್ತಾರೆ ಮತ್ತು ಶೇ.37ರಷ್ಟು ಜನರು ವಾರಕ್ಕೊಮ್ಮೆ ಕುಡಿಯುತ್ತಾರೆ. ಪುರುಷರಲ್ಲಿ ಶೇ.15ರಷ್ಟು ಜನರು ಪ್ರತಿದಿನ ಸೇವಿಸಿದರೆ, ಶೇ.43ರಷ್ಟು ಜನರು ವಾರಕ್ಕೊಮ್ಮೆ ಕುಡಿಯುತ್ತಾರೆ ಮತ್ತು ಶೇ.42ರಷ್ಟು ಜನರು ವಾರಕ್ಕೊಮ್ಮೆ ಸೇವನೆ ಮಾಡಿದರೂ ಕಡಿಮೆ ಕುಡಿಯುತ್ತಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

ಇತರ ಯಾವುದೇ ಜಾತಿ/ಪಂಗಡದ ಗುಂಪುಗಳಿಗಿಂತ ಪರಿಶಿಷ್ಟ ಪಂಗಡಗಳ (4%) ಮಹಿಳೆಯರಲ್ಲಿ ಮದ್ಯಪಾನವು ಹೆಚ್ಚು ಸಾಮಾನ್ಯವಾಗಿದೆ. ಕ್ರಿಶ್ಚಿಯನ್ ಪುರುಷರಲ್ಲಿ (36%) ಮತ್ತು “ಇತರ” (ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ/ನವ-ಬೌದ್ಧ ಮತ್ತು ಜೈನ ಸಮುದಾಯಗಳನ್ನು ಹೊರತುಪಡಿಸಿ) ಧರ್ಮಗಳಿಗೆ (49%) ಸೇರಿದ ಪುರುಷರಲ್ಲಿ ಸೇವನೆ ಮಾಡುತ್ತಾರೆ.
35 ವರ್ಷಕ್ಕಿಂತ ಕಡಿಮೆ ಶಾಲಾ ಶಿಕ್ಷಣ ಹೊಂದಿರುವ ಶೇ.33ರಷ್ಟು ಪುರುಷರಲ್ಲಿ, ಪರಿಶಿಷ್ಟ ಪಂಗಡದವರಲ್ಲಿ ಶೇ.34ರಷ್ಟು ಮತ್ತು 35-49 ವರ್ಷ ವಯಸ್ಸಿನವರಲ್ಲಿ ಶೇ.30 ರಷ್ಟು ಕುಡಿತವು ಕಂಡುಬರುತ್ತದೆ. 2015-2016ಕ್ಕೆ ಹೋಲಿಸಿದರೆ 2019-2021ರಲ್ಲಿ ಒಟ್ಟಾರೆಯಾಗಿ ಮದ್ಯಪಾನ ಮಾಡುವ ಪುರುಷರ ಪ್ರಮಾಣವು 29% ರಿಂದ 22% ಕ್ಕೆ ಕಡಿಮೆಯಾಗಿದೆ. ವರದಿಯ ಪ್ರಕಾರ ಆ ಅವಧಿಯಲ್ಲಿ ಕುಡಿಯುವ ಮಹಿಳೆಯರ ಪ್ರಮಾಣವು ಬದಲಾಗದೆ ಉಳಿದಿದೆ ಎಂದು ಕಂಡುಬಂದಿದೆ.

ನಿಮ್ಹಾನ್ಸ್ ಅಧ್ಯಯನ
ನಿಮ್ಹಾನ್ಸ್ ನಿರ್ದೇಶಕಿ ಪ್ರತಿಮಾ ಮೂರ್ತಿ, “ಅತಿಯಾದ ಮದ್ಯಪಾನವು ಡಿಎನ್‌ಎಗೆ ಬದಲಾಯಿಸಲಾಗದ ಬದಲಾವಣೆಗಳನ್ನು ಉಂಟುಮಾಡಬಹುದು ಮತ್ತು ಇನ್ನು ಮುಂದೆ ಸೇವಿಸದಿದ್ದರೂ ಬದಲಾವಣೆಗಳು ಮುಂದುವರಿಯಬಹುದು ಎಂದು ಎನ್‌ಎಫ್‌ಎಚ್‌ಎಸ್-5 ಅಧ್ಯಯನದ ಭಾಗವಾಗಿ ಹೇಳಿದ್ದಾರೆ. ಕುಡಿತ ಕಡಿಮೆಯಾಗಿರುವುದಕ್ಕೆ 2019-2021ರಲ್ಲಿ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಮದ್ಯ ಲಭ್ಯವಿಲ್ಲದಿರುವುದು ಸಹ ಕಾರಣ. ಹೀಗಾಗಿ ಅದು ಮುಂದುವರೆಯುವ ಸಾಧ್ಯತೆ ಇದೆ. ಇದು ಇನ್ನೂ ಹೆಚ್ಚೂ ಕೂಡ ಆಗಬಹುದು ಎಂದು ಅವರು ಹೇಳಿದ್ದಾರೆ.
ಅಮೆರಿಕನ್ ಜರ್ನಲ್ ಆಫ್ ಮೆಡಿಕಲ್ ಜೆನೆಟಿಕ್ಸ್‌ನಲ್ಲಿ ಕಳೆದ ವರ್ಷ ಪ್ರಕಟವಾದ ನಿಮ್ಹಾನ್ಸ್ ಅಧ್ಯಯನವು, “ಚಿಕ್ಕ ವಯಸ್ಸಿನಲ್ಲೇ ಮದ್ಯಪಾನವನ್ನು ಪ್ರಾರಂಭಿಸುವುದು ಕಂಡುಬರುತ್ತದೆ. ಕುಡಿಯಲು ಪ್ರಾರಂಭಿಸುವುದರಿಂದಇದು ಮಿದುಳಿನ ಬೆಳವಣಿಗೆ ಮತ್ತು ಪಕ್ವತೆಯ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು, ಅದು ನಂತರದ ವಯಸ್ಕ ಜೀವನಕ್ಕೆ ಮುಂದುವರಿಯಬಹುದು ಎಂದು ಡಾ. ಮೂರ್ತಿ ಅವರು ದಿ ಹಿಂದೂಗೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

ಮಾರಾಟದಲ್ಲಿ ಹೆಚ್ಚಳ
ನಿಮ್ಹಾನ್ಸ್‌ನ ಅಡಿಕ್ಷನ್ ಮೆಡಿಸಿನ್ ಕೇಂದ್ರದ ಮುಖ್ಯಸ್ಥರಾಗಿರುವ ಮನೋವೈದ್ಯಶಾಸ್ತ್ರದ ಪ್ರಾಧ್ಯಾಪಕ ವಿವೇಕ್ ಬೆನಗಲ್, “ಒಟ್ಟಾರೆ ಬಳಕೆಯಲ್ಲಿನ ಕಡಿತವು ಸ್ವಾಗತಾರ್ಹ ಬದಲಾವಣೆಯಾಗಿದೆ. ಆದಾಗ್ಯೂ, ಮದ್ಯದ ಮಾರಾಟ ಮತ್ತು ಉತ್ಪಾದನೆಯಲ್ಲಿ ಸ್ಥಿರವಾದ ಹೆಚ್ಚಳದ ದೃಷ್ಟಿಕೋನದಲ್ಲಿ ಇದನ್ನು ನೋಡಬೇಕು ಎಂದು ಹೇಳುತ್ತಾರೆ.
ಕುಡಿತವನ್ನು ಗಮನಿಸಿದ ಅವಧಿಯಲ್ಲಿ ಆಲ್ಕೋಹಾಲ್ ಉತ್ಪಾದನೆ ಮತ್ತು ಮಾರಾಟದಲ್ಲಿ ಸ್ಥಿರವಾದ ಹೆಚ್ಚಳದೊಂದಿಗೆ ಸಂಶೋಧನೆಗಳನ್ನು ಸಮತೋಲನ ಗೊಳಿಸಬೇಕಾಗುತ್ತದೆ. NFHS-5 ಸಂಶೋಧನೆಗಳನ್ನು ಬೆಂಬಲಿಸುವ ಹೊಸ ಅಧ್ಯಯನಗಳ ಮೂಲಕ ಹೆಚ್ಚಿನ ಡೇಟಾವನ್ನು ಪಡೆಯುವುದು ಅತ್ಯಗತ್ಯ ಎಂದು ಡಾ. ಬೆನಗಲ್ ಗಮನಸೆಳೆದರು.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement