ಮೂವರು ಪೊಲೀಸರ ಗುಂಡಿಕ್ಕಿ ಹತ್ಯೆ ಮಾಡಿದ ಕೃಷ್ಣಮೃಗ ಬೇಟೆಗಾರರು

ಭೋಪಾಲ: ಶುಕ್ರವಾರ ತಡರಾತ್ರಿ ಮಧ್ಯಪ್ರದೇಶದ ಗುನಾ ಜಿಲ್ಲೆಯ ಸಾಗ ಬರ್ಖೇಡಾ ಗ್ರಾಮದಲ್ಲಿ ಕೃಷ್ಣಮೃಗ ಬೇಟೆಗಾರರು ಮೂವರು ಪೊಲೀಸ್ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದಿದ್ದಾರೆ.
ವಿಶ್ವಾಸಾರ್ಹ ಮೂಲಗಳಿಂದ ಗುಪ್ತಚರ ಮಾಹಿತಿ ಪಡೆದ ನಂತರ ಪೊಲೀಸರು ಕಳ್ಳ ಬೇಟೆಗಾರರನ್ನು ಹಿಡಿಯಲು ಹೋಗಿದ್ದರು. ಮೃತರನ್ನು ಸಬ್ ಇನ್ಸ್‌ಪೆಕ್ಟರ್ ರಾಜಕುಮಾರ್ ಜಾತವ, ಹೆಡ್ ಕಾನ್‌ಸ್ಟೆಬಲ್ ಸಂತ ರಾಮ ಮೀನಾ ಮತ್ತು ಕಾನ್‌ಸ್ಟೆಬಲ್ ನೀರಜ್ ಭಾರ್ಗವ ಎಂದು ಗುರುತಿಸಲಾಗಿದೆ.ಪೊಲೀಸ್ ವಾಹನದ ಚಾಲಕ ಕೂಡ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಅರಣ್ಯ ಪ್ರದೇಶದಿಂದ ಹಲವಾರು ಕೃಷ್ಣಮೃಗಗಳ ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಅಪರಾಧಿಗಳನ್ನು ಬಿಡುವುದಿಲ್ಲ ಮತ್ತು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. “ಗುನಾ ಬಳಿ ಕ್ರಿಮಿನಲ್‌ಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ವೀರ ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರಕರಣವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ” ಎಂದು ಮಿಶ್ರಾ ಹೇಳಿದರು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement