ಎನ್‌ಸಿಡಿಆರ್‌ಸಿ ಎಂಬುದು ನ್ಯಾಯಮಂಡಳಿ; ಅದರ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ನಿರ್ವಹಿಸಬಹುದು: ಸುಪ್ರೀಂಕೋರ್ಟ್‌

ನವದೆಹಲಿ:ಸಂವಿಧಾನದ 227 ಮತ್ತು 136 ನೇ ವಿಧಿಯ ಪ್ರಕಾರ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ಎನ್‌ಸಿಡಿಆರ್‌ಸಿ) ‘ನ್ಯಾಯಮಂಡಳಿ’ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ. .
ಸಂವಿಧಾನದ 227ನೇವಿಧಿಯಡಿ ಸಲ್ಲಿಸಲಾದ ರಿಟ್ ಅರ್ಜಿ ವಿಚಾರಣೆ ವೇಳೆ ಎನ್‌ಸಿಡಿಆರ್‌ಸಿಯ ಆದೇಶಕ್ಕೆ ಈ ಹಿಂದೆ ದೆಹಲಿ ಹೈಕೋರ್ಟ್‌ ತಡೆಹಿಡಿದಿತ್ತು. ಈ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯೊಂದರ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ಯಾವುದೇ ಮೇಲ್ಮನವಿ ಪರಿಹಾರವನ್ನು ಒದಗಿಸದೇ ಇರುವ ಸಂದರ್ಭಗಳಲ್ಲಿ ಗ್ರಾಹಕ ಸಂರಕ್ಷಣಾ ಕಾಯಿದೆಯ ಸೆಕ್ಷನ್ 58(1)(a)(iii) ಮತ್ತು ಸೆಕ್ಷನ್ 58(1)(a)(iv)ರ ಅಡಿ ಎನ್‌ಸಿಡಿಆರ್‌ಸಿ ಹೊರಡಿಸಿದ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಸಂವಿಧಾನದ 227ನೇ ವಿಧಿಯಡಿ ರಿಟ್‌ ಅರ್ಜಿ ನಿರ್ವಹಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ತಿಳಿಸಿತು ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

ವರದಿ ಪ್ರಕಾರ,ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಪಕ್ಷಕಾರರ ನಡುವಿನ ವ್ಯಾಜ್ಯವನ್ನು ನಿರ್ಣಯಿಸುವ ಶಾಸನಾತ್ಮಕ ಅಧಿಕಾರ ಇರುವುದರಿಂದ ರಾಷ್ಟ್ರೀಯ ಆಯೋಗವನ್ನು ‘ನ್ಯಾಯಮಂಡಳಿ’ ಎಂದು ಹೇಳಬಹುದು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಆದ್ದರಿಂದ ಈ ಮೇಲೆ ತಿಳಿಸಿದ ನಿರ್ಧಾರದ ಪ್ರಕಾರ ರಾಜ್ಯದ ನ್ಯಾಯಾಂಗ ಅಧಿಕಾರಗಳೊಂದಿಗೆ ನಿಯೋಜಿತವಾಗಿರುವ ಅಧಿಕಾರದ ಪರೀಕ್ಷೆಯನ್ನು ಇದು ತೃಪ್ತಿಪಡಿಸಿದ್ದು ಸಂವಿಧಾನದ 227 ಮತ್ತು/ಅಥವಾ 136 ರ ಪ್ರಕಾರ ಇದನ್ನು ನ್ಯಾಯಮಂಡಳಿ ಎಂದು ಪರಿಗಣಿಸಬಹುದು” ಎಂದು ತೀರ್ಪು ಹೇಳಿದೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
ಓದಿರಿ :-   ಉದಯಪುರ ಟೈಲರ್ ಹತ್ಯೆ: ನಿಷೇಧಾಜ್ಞೆ ನಡುವೆ ಕನ್ಹಯ್ಯಾ ಲಾಲ್ ಅಂತ್ಯ ಸಂಸ್ಕಾರಕ್ಕೆ ಪಾಲ್ಗೊಂಡ ಸಾವಿರಾರು ಜನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ