ಕೇರಳದ ಟ್ವೆಂಟಿ-20 ಪಾರ್ಟಿಯೊಂದಿಗೆ ಎಎಪಿ ಮೈತ್ರಿ ಘೋಷಿಸಿದ ಕೇಜ್ರಿವಾಲ್, ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ಭರವಸೆ

ಕೊಚ್ಚಿ: ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇರಳದ ಟ್ವೆಂಟಿ-20 ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಭಾನುವಾರ ಘೋಷಿಸಿದ್ದಾರೆ. ಈ ಮೈತ್ರಿಗೆ ಜನ ಕಲ್ಯಾಣ ಮೈತ್ರಿ ಎಂದು ಹೆಸರಿಡಲಾಗುವುದು ಎಂದು ಅವರು ಹೇಳಿದ್ದಾರೆ.
ಕೇರಳ ಇಲ್ಲಿಯವರೆಗೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವಿನ ದ್ವಿಧ್ರುವಿ ಸ್ಪರ್ಧೆಗೆ ಸಾಕ್ಷಿಯಾಗಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಯಾವಾಗಲೂ ದಕ್ಷಿಣ ರಾಜ್ಯದಲ್ಲಿ ಸಣ್ಣ ಪಕ್ಷವೇ ಆಗಿ ಉಳಿದಿದೆ.ಇತ್ತೀಚೆಗಷ್ಟೇ ಪಂಜಾಬ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಎಎಪಿ, ಪ್ಯಾನ್ ಇಂಡಿಯಾ ಪಕ್ಷವಾಗಲು ಪ್ರಯತ್ನ ನಡೆಸುತ್ತಿದೆ. ಇದನ್ನು ಸಾಧಿಸಲು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಮುಂಬರುವ ಚುನಾವಣೆಗಳು ಅದಕ್ಕೆ ಅತ್ಯಂತ ನಿರ್ಣಾಯಕವಾಗಿವೆ.

ಕೇಜ್ರಿವಾಲ್ ಇಂದು, ಭಾನುವಾರ ಟ್ವೆಂಟಿ-20 ಪಕ್ಷದ ಮುಖ್ಯಸ್ಥ ಸಾಬು ಜೇಕಬ್ ಅವರ ಸಮ್ಮುಖದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮುಂಬರುವ ತೃಕ್ಕಕ್ಕರ ವಿಧಾನಸಭಾ ಉಪಚುನಾವಣೆಯಲ್ಲಿ ಎಎಪಿ ಮತ್ತು ಟ್ವೆಂಟಿ-20 ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಎಂಬ ಊಹಾಪೋಹದ ಹಿನ್ನೆಲೆಯಲ್ಲಿ ಅವರ ಭೇಟಿ ಮಹತ್ವ ಪಡೆದುಕೊಂಡಿದೆ.
ಕೊಚ್ಚಿಯಲ್ಲಿ ಟ್ವೆಂಟಿ-20 ಪಾರ್ಟಿ ಮತ್ತು ಎಎಪಿ ಕೇರಳ ಕಾರ್ಯಕರ್ತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌, “ಕೇರಳ ದೇವರ ನಾಡು. ಅಂತಹ ಸುಂದರ ಸ್ಥಳ, ಅಂತಹ ಸುಂದರ ಜನರು! 10 ವರ್ಷಗಳ ಹಿಂದೆ ಅರವಿಂದ್ ಕೇಜ್ರಿವಾಲ್ ಬಗ್ಗೆ ಯಾರೂ ತಿಳಿದಿರಲಿಲ್ಲ.ದೆಹಲಿ ಮತ್ತು ಪಂಜಾಬ್‌ನಲ್ಲಿ ಇಂದು ನಮ್ಮ ಸರ್ಕಾರವಿದೆ. ಇದೆಲ್ಲವೂ ದೇವರ ಕಾರಣದಿಂದ ಆಗಿದೆ ಎಂದು ಹೇಳಿದರು.
ನಾನು 15 ದಿನಗಳ ಕಾಲ ಉಪವಾಸ ನಡೆಸಿದಾಗ ವೈದ್ಯರು ನಾನು ಬದುಕುವುದಿಲ್ಲ ಎಂದು ಹೇಳಿದರು. ಆದರೆ ನಾನು ಇಲ್ಲಿದ್ದೇನೆ. ಎಲ್ಲದಕ್ಕೂ ದೇವರೇ ಕಾರಣ. ಗೃಹಿಣಿಯರು, ವಿದ್ಯಾರ್ಥಿಗಳು ಮತ್ತು ಮೊಬೈಲ್ ರಿಪೇರಿ ಮಾಡುವವರು ಸೇರಿದಂತೆ ಹೊಸದಾಗಿ ರಚಿಸಲಾದ ನಮ್ಮ ಪಕ್ಷದ ಅಭ್ಯರ್ಥಿಗಳು ಪಂಜಾಬಿನಲ್ಲಿ ಮುಖ್ಯಮಂತ್ರಿಯಾಗಿದ್ದವರನ್ನೇ ಸೋಲಿಸಿದರು. ಎಲ್ಲದಕ್ಕೂ ದೇವರೇ ಕಾರಣ ಎಂದು ಮಾರ್ಮಿಕವಾಗಿ ಹೇಳಿದರು.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

ದೆಹಲಿಯಲ್ಲಿ ಬಡ ಕಾರ್ಮಿಕರು 15,000 ರೂ.ಗಿಂತ ಹೆಚ್ಚು ಕನಿಷ್ಠ ವೇತನವನ್ನು ಪಡೆಯುತ್ತಾರೆ, ಇದು ಭಾರತದಲ್ಲಿಯೇ ಅತ್ಯಧಿಕವಾಗಿದೆ ಎಂದು ಉಲ್ಲೇಖಿಸಿದ ಅವರು, ಅದಕ್ಕಿಂತ ಹೆಚ್ಚಾಗಿ, ಕಾರ್ಮಿಕರಿಗೆ ಗುಣಮಟ್ಟದ ಆರೋಗ್ಯ, ಶಿಕ್ಷಣ, ಮಹಿಳೆಯರಿಗೆ ಸಾರಿಗೆ, ವಿದ್ಯುತ್, ನೀರು, ಎಲ್ಲವೂ ಉಚಿತವಾಗಿ ಸಿಗುತ್ತದೆ, ಇದು ಪ್ರಾಮಾಣಿಕ ಎಎಪಿ ಸರ್ಕಾರದಿಂದ ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಕೇರಳದಲ್ಲಿ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದರು.ನಿಮಗೆ ರಾಜಕೀಯ, ಗಲಭೆ ಮತ್ತು ಭ್ರಷ್ಟಾಚಾರ ಬೇಕಾದರೆ ನೀವು ಇತರ ರಾಜಕೀಯ ಪಕ್ಷಗಳ ಬಳಿಗೆ ಹೋಗಬಹುದು. ನಿಮಗೆ ಅಭಿವೃದ್ಧಿ, ಶಾಲೆಗಳು ಮತ್ತು ಆಸ್ಪತ್ರೆಗಳು ಬೇಕಾದರೆ ನೀವು ನಮ್ಮ ಬಳಿಗೆ ಬರಬೇಕು. ಇತರ ಪಕ್ಷಗಳು ನಿಮ್ಮ ಮಕ್ಕಳಿಗೆ ಎಂದಿಗೂ ಶಿಕ್ಷಣ ನೀಡುವುದಿಲ್ಲ ಏಕೆಂದರೆ ಅವರು ಗಲಭೆ ಮತ್ತು ಗೂಂಡಾಗಿರಿ ಮಾಡಲು ಬಯಸುತ್ತಾರೆ,” ಎಂದು ಹೇಳಿದರು.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement