ಪ್ರಿಯತಮ ಅಪಘಾತದಲ್ಲಿ ಸಾವು, ಆಘಾತದಿಂದ ಪ್ರಿಯತಮೆ ಆತ್ಮಹತ್ಯೆಗೆ ಶರಣು

posted in: ರಾಜ್ಯ | 0

ತುಮಕೂರು: ಇಬ್ಬರು ಯುವ ಪ್ರೇಮಿಗಳು ಸತಿ-ಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು. ಆದರೆ ವಿಧಿ ಬೇರೆಯದನ್ನೇ ಬಗೆದಿತ್ತು.. ಪ್ರಿಯಕರ ಅಪಘಾತದಲ್ಲಿ ಮೃತಪಟ್ಟಿದ್ದಾನೆ, ಆ ಸುದ್ದಿ ಕೇಳಿದ ಪ್ರಿಯತೆಮೆಯೂ ಆಘಾತದಿಂದ ಆತ್ಮಹತ್ಯೆಗೆ ಶರಣಾಗಿರುವ ದುರಂತದ ಘಟನೆ ತುಮಕೂರಿನ ಅರೆಹಳ್ಳಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.

advertisement

ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದ ಧನುಷ್ (23) ಹಾಗೂ ಅರೆಹಳ್ಳಿ ಗ್ರಾಮದ ಸುಷ್ಮಾ (22) ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯವನ್ನು ತಮ್ಮ ಮನೆಯಲ್ಲಿ ಹೇಳಿದ ನಂತರ ಅವರ ಮದುವೆಗೂ ಮನೆಯವರು ಒಪ್ಪಿದ್ದರು. ಆದರೆ ವಿಧಿಯಾಟ ಬೇರೆಯಾಗಿತ್ತು. ಮೇ 11ರಂದು ಊರಿನ ಜಾತ್ರೆಗೆ ಬರುವಾಗ ನೆಲಮಂಗಲದ ಬಳಿಯ ಕುಲುವನಹಳ್ಳಿ ಬಳಿಯಲ್ಲಿ ಅಪಘಾತ ಸಂಭವಿಸಿ ಧುನುಷ್ ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ, ಚಿಕಿತ್ಸೆ ಫಲಿಸದೆ ಅವರು ಸಾವಿಗೀಡಾಗಿದ್ದರು.
ಈ ವಿಷಯ ತಿಳಿಯುತ್ತಿದ್ದಂತ ಪ್ರಿಯತಮೆ ಸುಷ್ಮಾ ಮಾನಸಿಕವಾಗಿ ಆಘಾತಗೊಂಡಿದ್ದಾಳೆ. ತನ್ನ ಪ್ರಿಯಕರನ ಅಂತ್ಯಸಂಸ್ಕಾರದಲ್ಲೂ ಭಾಗಿಯಾಗಿದ್ದ ಸುಷ್ಮಾ ಅನಂತರ ತೀವ್ರ ಖಿನ್ನತೆಗೆ ಒಳಗಾಗಿದ್ದಳು. ಧನುಷ್ ಅಂತ್ಯಕ್ರಿಯೆ ಮುಗಿಸಿ ಬಂದ ನಂತರ ತಮ್ಮ ಮನೆಯಲ್ಲಿ, ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಂತರ ಅವಳ ಅಂತ್ಯಕ್ರಿಯೆಯನು ಪ್ರಿಯಕರನ ಅಂತ್ಯಕ್ರಿಯೆ ಮಾಡಿದ ಸ್ಥಳದ ಪಕ್ಕದಲ್ಲಿಯೇ ಮಾಡಲಾಯಿತು.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ಬೆಳಗಾವಿ ನಂತರ ಈಗ ಮೂಡಲಗಿಯ ಧರ್ಮಟ್ಟಿಯಲ್ಲೂ ಚಿರತೆ ಪ್ರತ್ಯಕ್ಷ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement